ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದ ಇತಿಹಾಸ ತಿಳಿಯುವ ಮೊದಲು ಸ್ಥಳೀಯ ಇತಿಹಾಸ, ಇಲ್ಲಿನ ಭೂಗೋಳ, ಇಲ್ಲಿನ ಸಂಸ್ಕೃತಿ, ಪರಿಸರ, ಈ ಮಣ್ಣಿನ ಮಹತ್ವವನ್ನು ಮೊದಲು ಅರಿತುಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ರಂಗಕಲಾವಿದ ದೇವೇಂದ್ರ ಬೆಳೆಯೂರು ಹೇಳಿದರು.
ತಾಲ್ಲೂಕು ಹುಣವಳ್ಳಿಯಲ್ಲಿ ಸರ್ವೋದಯ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಪೂಜ್ಯ ಪಿ.ಜಿ.ಮಹಾಬಲ ಗಿರಿಯಪ್ಪ ಹುಣವಳ್ಳಿ ಇವರ ಸ್ಮರಣಾರ್ಥ ಕೊಡಮಾಡುವ ಮಹಾಬಲ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಿಪರ್ಯಾಸವೆಂದರೆ ಇಂದು ಸ್ಥಳೀಯ ಪ್ರಾದೇಶಿಕ ಅನ್ವೇಷಕರು ವಿರಳವಾಗಿದ್ದಾರೆ. ಬಿಚ್ಚುಗತ್ತಿಯವರಂತ ಸಂಪನ್ಮೂಲ ವ್ಯಕ್ತಿಗಳು ಬೆರಳೆಣಿಕೆಯಲ್ಲಿದ್ದು ಅಂತವರನ್ನು ಸ್ಥಳೀಯರೆ ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದರು.
Also read: ರಾಜ್ಯಾಧ್ಯಕ್ಷರನ್ನು ಬದಲಾಯಿಸಿದ್ರೆ ಸ್ಪರ್ಧಿಸೋಲ್ಲ, ಇಲ್ಲ ಅಂದ್ರೆ ಬ್ರಹ್ಮ ಹೇಳಿದ್ರೂ ಕೇಳಲ್ಲ: ಈಶ್ವರಪ್ಪ
ಮಹಬಲ ಪ್ರಶಸ್ತಿ ಸ್ವೀಕರಿಸಿದ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಸಂಸ್ಕಾರ, ಸಂಸ್ಕೃತಿಗೆ ಶಾಸ್ತ್ರೀಯ ಮೆರಗು ನೀಡಿ ಕ್ಲಿಷ್ಟಕರ ಎನಿಸಿಕೊಳ್ಳುವುದಕ್ಕಿಂತಲೂ ಹಿಗೆ ಸರಳ ಸಮಾರಂಭದ ಮೂಲಕ ಆಪ್ತೇಷ್ಟರನ್ನೊಳಗೊಂಡ ಅತ್ಮೀಯ ಕಾರ್ಯಕ್ರಮ ಸಹಾ ಈ ನೆಲದ ಸಂಸ್ಕೃತಿ. ಮಾನವಿಕ ಮೌಲ್ಯವನ್ನು ನೆನಪಿಸುವ, ವೃದ್ಧಿಸುವ ಇಂತಹ ಸಮಾರಂಭ ನಡೆಯುತ್ತಿರಬೇಕು. ಹುನವಳ್ಳಿ ಮಹಬಲಗಿರಿಯಪ್ಪ ಕುಟುಂಬದ ವಿಶಾಲ ಮನೋಭಾವಕ್ಕೆ ಎಲ್ಲರ ಸಹಭಾಗಿತ್ವ ಇರಲಿ ಎಂದರು.
ಶ್ರೀಮತಿ ಮಹಾಬಲಗಿರಿಯಪ್ಪ ಹುಣವಳ್ಳಿ ಪ್ರಶಸ್ತಿ ಪ್ರಧಾನ ಮಾಡಿದರು. ಟ್ರಸ್ಟ್ ನ ಪಿ.ಎನ್.ಶ್ರೀಧರರಾವ್ ಪಡವಗೋಡು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಬಿ.ಎನ್. ನಾಗರಾಜ್, ಹೆಚ್.ಎಂ.ಪ್ರಶಾಂತ್, ಶ್ರೀಕಾಂತ್, ಮಾಲಿನಿ, ಧನ್ವಿ, ಪ್ರಮುಖರಾದ ಹೆಚ್.ಎಸ್.ಮಂಜಪ್ಪ, ಡಾ.ಜ್ಞಾನೇಶ್, ಸುಧೀಂದ್ರರಾವ್, ರಂಗಕಲಾವಿದೆ ಶ್ರೀಮತಿ ಸುಧೀಂದ್ರರಾವ್, ಕಟ್ಟಿನಕೆರೆ ಸೀತಾರಾಂ ರಾವ್, ಬಿಎನ್ಸಿ ರಾವ್ ಬರಿಗೆ, ಷಣ್ಮುಖಾಚಾರ್, ಸೂರ್ಯನಾರಾಯಣ ಕಲಸಿ, ಸುರೇಶ್ ಕಟ್ಟಿನಕೆರೆ, ಸಾಗರ ಕೆಳದಿ ಭಾರತಿ ಕಲಾವಿದರು, ಗ್ರಾಮಸ್ಥರು ಮೊದಲಾದವರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post