ಕಲ್ಪ ಮೀಡಿಯಾ ಹೌಸ್ | ಸೊರಬ |
ದಾದಿಯರು ಅಥವಾ ನರ್ಸ್’ಗಳು ಯಾವಾಗಲೂ ರೋಗಿಗಳೊಂದಿಗೆ ತಾಳ್ಮೆ ಹಾಗೂ ಶಿಸ್ತಿನಿಂದ ವರ್ತಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ಕರೆ ನೀಡಿದರು.
ಸೋಮವಾರ ಪಟ್ಟಣದ ರಂಗ ಮಂದಿರದಲ್ಲಿ ಎಚ್’ಆರ್’ಸಿ ಇಸ್ಟಿಟ್ಯೂಟ್ ಆಫ್ ನರ್ಸಿಂಗ್ ಅಂಡ್ ಪ್ಯಾರಮೆಡಿಕಲ್ ಕಾಲೇಜ್ ವತಿಯಿಂದ ಹಮ್ಮಿಕೊಂಡ ದಾದಿಯರ ದಿನ, ಲ್ಯಾಪ್ ಲೈಟಿಂಗ್ ಮತ್ತು ಜಿಎನ್’ಎಂ ಹಾಗೂ ಪ್ಯಾರಮೆಡಿಕಲ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಾದಿಯರಾಗಿ ಹೊರ ಹೊಮ್ಮುತ್ತಿರುವ ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ, ನಂಬಿಕೆ ಮತ್ತು ಗೌಪತ್ಯೆಯನ್ನು ಕಾಪಾಡಿಕೊಳ್ಳಬೇಕು. ರೋಗಿಗಳಲ್ಲಿ ಆತ್ಮಸ್ಥೆÊರ್ಯವನ್ನು ತುಂಬುವAತಹ ವರ್ತನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಫ್ಲಾರೆನ್ಸ್ ನೈಟಿಂಗೇಲ್ ಸೇವೆಯನ್ನು ಪರಿಗಣಿಸಿ ಅವರ ಜನ್ಮ ವಾರ್ಷಿಕೋತ್ಸವದ ನಿಮಿತ್ತವಾಗಿ ದಾದಿಯರ ದಿನವನ್ನು ಜಗತ್ತಿನಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಅವರು ಪ್ರತಿಯೊಬ್ಬ ದಾದಿಯರಿಗೆ ಮಾದರಿಯಾಗಿದ್ದು, ಅವರ ಮಾರ್ಗದಲ್ಲಿ ಮುನ್ನೆಡೆಯಬೇಕು ಎಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ತಿಳಿಸಿದರು.
ಸರ್ಕಾರದಿಂದ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡಲಾಗುತ್ತಿದೆ. ಜನಸಂಖ್ಯೆಯನ್ನು ಆಧರಿಸಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆ. 300 ಜನರಿಗೆ ಒಬ್ಬ ದಾದಿಯರು ಇರಬೇಕು ಎಂಬ ನಿಯಮಿದೆ. ಆದರೆ, ಸಾವಿರ ಜನರಿಗೆ ಒಬ್ಬ ದಾದಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಸಮಸ್ಯೆಗಳು ಎದುರಾಗುದಂತೆ ಕಾಯಕವನ್ನು ನಿಭಾಯಿಸತ್ತಿದ್ದಾರೆ ಎಂದರು.
ಸಾರ್ವಜನಿಕರು ಸಹ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಗೌರವ ನೀಡುವ ಜತೆಗೆ ಸಹಕಾರ ನೀಡುವ ಅವಶ್ಯಕತೆ ಇದೆ ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕಾಯಕವು ತಾಯಿ ಮಾಡುವಂತಹ ಔದಾರ್ಯವಾಗಿದ್ದು, ದಾದಿಯರ ಕರ್ತವ್ಯವು ದುಡಿಮೆಗಾಗಿ ಮೀಸಲಾಗದೇ ಸೇವೆಗೆ ಮೀಸಲು ಎಂದು ಭಾವಿಸಬೇಕು.
ಪ್ಯಾರಮೆಡಿಕಲ್ ಶಿಕ್ಷಣ ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಹಾನಗರಗಳತ್ತ ತೆರಳುವ ಸ್ಥಿತಿ ಇತ್ತು. ಆದರೆ, ಪಟ್ಟಣದಲ್ಲಿ ಪ್ಯಾರಮೆಡಿಕಲ್ ಕಾಲೇಜು ಆರಂಭವಾಗಿರುವುದು ಅನೇಕ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕರು ದೇಶ-ವಿದೇಶ ಮಾತ್ರವಲ್ಲದೇ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ದಾದಿಯರಾಗಿ ಹೊರ ಹೊಮ್ಮುತ್ತಿರುವ ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ, ನಂಬಿಕೆ ಮತ್ತು ಗೌಪತ್ಯೆಯನ್ನು ಕಾಪಾಡಿಕೊಳ್ಳಬೇಕು. ರೋಗಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವಂತಹ ವರ್ತನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ದಾದಿಯರಾಗಿ ಸೇವೆ ಸಲ್ಲಿಸಿದ ಎಚ್.ಎನ್. ಜಯಮ್ಮ, ಸುಶೀಲಮ್ಮ ಲಿಂಗರಾಜು, ಸುವರ್ಣ ಎಲ್. ನಾಯ್ಕ್, ದಿಲ್ಶಾದ್ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಮಾಜಿ ಗೌವನರ್ರ ಎಚ್.ಎಸ್. ಮಂಜಪ್ಪ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯ ಇ.ಡಿ. ಶ್ರೀಧರ್, ಸಾಗರ ಅಧ್ಯಕ್ಷೆ ಪ್ರಭಾವತಿ ಶ್ರೀಧರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಪ್ರಭು ಸಾಹುರ್ಕಾ, ಅರವಳಿಕೆ ತಜ್ಞ ಡಾ. ಎಚ್.ಕೆ. ಸುರೇಶ್, ವಕೀಲ ದಿನಕರ ಭಾವೆ, ಎಂ.ಬಿ. ಶಿಲ್ಪ, ಎಚ್.ಕೆ. ಜ್ಯೋತಿ, ಜಿ. ಭಾಗ್ಯ, ಆರ್.ಜಿ. ಬಸಮ್ಮ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post