ಕಲ್ಪ ಮೀಡಿಯಾ ಹೌಸ್
ಸೊರಬ: ಕೊರೋನಾ ಎರಡನೆಯ ಅಲೆಗೆ ತತ್ತರಿಸಿರುವ ಸಂದರ್ಭದಲ್ಲಿ ಯುವಕರ ಪಡೆಯೊಂದು ಸದ್ದಿಲ್ಲದೇ ಜನರಲ್ಲಿ ಧೈರ್ಯ ತುಂಬುತ್ತಾ ಸಹಾಯ ಮಾಡುತ್ತಿದೆ.
ಪಟ್ಟಣದ ಎಸ್’ಎಸ್’ಎಫ್ ಘಟಕದ ಯುವಕರು ಕೊರೋನಾದಿಂದ ಸಂಕಷ್ಟದಲ್ಲಿರುವ ಬಡವರನ್ನು. ಕೂಲಿಕಾರ್ಮಿಕರನ್ನು. ನಿರ್ಗತಿಕರನ್ನು ಗುರುತಿಸಿ ಆಹಾರ ಮತ್ತು ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ.
ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ನೀರು ಮತ್ತು ಆಹಾರವನ್ನು ನೀಡುತ್ತಿದ್ದಾರೆ. ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಗಳಿಗೂ ಸಹ ಆಹಾರವನ್ನು ನಿಸ್ವಾರ್ಥ ಮನೋಭಾವದಿಂದ ಪೂರೈಸುತ್ತಿದ್ದಾರೆ.
ಭಾನುವಾರ ದಿನವಾದ ಇಂದು ಪಟ್ಟಣ ಸೇರಿದಂತೆ ತಾಲೂಕಿನ ರಾಜೀವ್ ನಗರ, ಯಲಸಿ, ಅಂಡಿಗೆ, ತಟ್ಟಿಕೆರೆ, ಅಂಕರವಳ್ಳಿ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿನ ಆಯ್ದ ಬಡ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಾಗ್ರಿಗಳ ಕಿಟ್ಟನ್ನು ವಿತರಿಸಲಾಯಿತು.
ಇತ್ತೀಚೆಗೆ ಎಸ್’ಎಸ್’ಎಫ್ ಯುವಕರ ತಂಡ ಮಾನಸಿಕ ಅಸ್ವಸ್ಥನೊಬ್ಬನಿಗೆ ಸ್ನಾನ ಮಾಡಿಸಿ, ಹೊಸ ಉಡುಪುಗಳನ್ನು ಹಾಕಿಸಿದ್ದರು. ಇದು ಸಾರ್ವಜನಿಕರಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು.
ಎಸ್’ಎಸ್’ಎಫ್ ಸೊರಬ ಘಟಕದ ಅಧ್ಯಕ್ಷ ಜಾವೀದ್ ಜಾಬಿವುಲ್ಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅರೀಫ್, ಕಾರ್ಯದರ್ಶಿ ಮುಹಮ್ಮದ್ ಅಲಿ, ಸಾಗರ ವಿಭಾಗದ ಪ್ರಧಾನ ಕಾರ್ಯದರ್ಶಿ ನೂರುಲ್ ಅಮೀನ್, ಕಾರ್ಯದರ್ಶಿ, ವಸಿಮ್ ಅಕ್ರಂ, ಅಸ್ಲಂ ರಝಾ, ಅನ್ಸರ್, ದಾವೂದ್, ಸಲ್ಮಾನ್, ಸುಲೆಮಾನ್, ಶಾರುಖ್, ಸುಫೀಯಾನ್, ತೌಫಿಕ್ ಸೇರಿದಂತೆ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post