ಕಲ್ಪ ಮೀಡಿಯಾ ಹೌಸ್ | ಸೊರಬ |
ಮಳೆಯಿಂದಾಗಿ ತುಂಬಿರುವ ನದಿಯಲ್ಲಿ ಮೀನು ಹಿಡಿಯಲು ಯತ್ನಿಸಿದ ವೇಳೆ ವ್ಯಕ್ತಿಯೊಬ್ಬರು ಸುಳಿಗೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಯಡಗೊಪ್ಪ-ಯಲವಾಟ ಗ್ರಾಮದಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಉದ್ರಿ ವಡ್ಡಿಗೇರಿ ಗ್ರಾಮದ ಯಲ್ಲಪ್ಪ(45) ಎಂದು ಗುರುತಿಸಲಾಗಿದೆ.
Also read: ಗಮನಿಸಿ! ಶಿರಾಡಿ ಘಾಟಿಯಲ್ಲಿ ಈ ಸಮಯದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ
ಈತ ಶುಕ್ರವಾರ ಸಂಜೆ ತನ್ನ ಸಹೋದರನೊಂದಿಗೆ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಘಟನೆ ಸಂಭವಿಸಿದೆ. ನದಿಯ ನೀರಿನ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿದ ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್, ಪಿಎಸ್’ಐ ನಾಗರಾಜ್, ತಾಪಂ ಇಒ ಡಾ. ಪ್ರದೀಪ್ ಕುಮಾರ್ ಭೇಟಿ ನೀಡಿದರು. ಇಂದು ಮುಂಜಾನೆವರೆಗೂ ವ್ಯಕ್ತಿ ಪತ್ತೆಯಾಗಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post