ಕಲ್ಪ ಮೀಡಿಯಾ ಹೌಸ್ | ಸೊರಬ |
ಸಮಾಜ ಸೇವಕ ಹಾಗೂ ಹೈಕೋರ್ಟ್ ವಕೀಲ ಎಚ್.ವಿ. ಕುಮಾರಸ್ವಾಮಿ ಅವರು ತಮ್ಮ ಜನ್ಮ ದಿನವನ್ನು ವಿಶೇಷವಾಗಿ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಭಾನುವಾರ ಆಚರಿಸಿದರು.
ಈ ವೇಳೆ ಮಾತನಾಡಿದ ಎಚ್.ವಿ. ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಅಧಿಕಾರದಲ್ಲಿ ಇರಲೀ, ಇಲ್ಲದೇ ಇರಲೀ ಸದಾ ಬಡವರ ಪರ ಕಾಳಜಿ ಹೊಂದಿದ್ದರು. ಎಸ್. ಮಧು ಬಂಗಾರಪ್ಪ ಅವರು ಸಹ ತಂದೆಯವರ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ. ಇವುಗಳೇ ತಮಗೆ ಪ್ರೇರಣೆ ಎಂದ ಅವರು, ದುಡಿಮೆಯ ಕೊಂಚ ಆದಾಯವನ್ನು ಸಮಾಜಕ್ಕಾಗಿ ವಿನಿಯೋಗ ಮಾಡಿದರೆ ದೈವ ಮೆಚ್ಚುತ್ತಾನೆ ಎಂದರು.

Also read: ಕರ್ನಾಟಕಕ್ಕೆ ಏನು ಕೊಡಬೇಕೋ ಅದನ್ನೆಲ್ಲ ಕೊಟ್ಟಿದ್ದೇವೆ | ಕಾಂಗ್ರೆಸ್ಸಿಗರ ಆರೋಪಕ್ಕೆ ಜೋಶಿ ತಿರುಗೇಟು
ಸಂಸ್ಥೆಯ ಮುಖ್ಯ ಶಿಕ್ಷಕ ರವೀಂದ್ರ ಮಾತನಾಡಿ, ಎಚ್.ವಿ. ಕುಮಾರಸ್ವಾಮಿ ಅವರು ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡತನದ ಹಾದಿಯಲ್ಲಿ ಬೆಳೆದರು. ಆದರೂ ನೆಡೆದು ಬಂದ ಹಾದಿಯನ್ನು ಮರೆಯದೇ ಮುನ್ನೆಡೆಯುತ್ತಿದ್ದಾರೆ. ತಮ್ಮ ಸ್ನೇಹಿತರು ಮತ್ತು ಆಪ್ತ ವಲಯದೊಂದಿಗೆ ನಂಟನ್ನು ಹೊಂದಿದ್ದಾರೆ. ಅವರು ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post