ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾರ್ಥಿಗಳು ಶಿಕ್ಷಣದ ಅವಧಿಯಲ್ಲಿ ಓದಿನತ್ತ ಮನಸ್ಸನ್ನು ಕೇಂದ್ರಿಕರಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಉದ್ಯಮಿ ವೆಂಕಟೇಶ ಕಾಮತ್ ಕೆರೆಹಳ್ಳಿ ತಿಳಿಸಿದರು.
ತಾಲೂಕಿನ ಕೆರೆಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಪಠ್ಯ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಕಡ್ಡಾಯವಾಗಿ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಅನೇಕ ಸವಲತ್ತುಗಳನ್ನು ಕಲ್ಪಿಸುತ್ತಿದೆ. ತಾವು ಬಾಲ್ಯದಲ್ಲಿ ವರದಾ ನದಿ ದಾಟಿ ಜಡೆ ಗ್ರಾಮಕ್ಕೆ ಶಿಕ್ಷಣ ಕಲಿಕೆಗೆ ತೆರಳುವ ಸ್ಥಿತಿ ಇತ್ತು. ಗ್ರಾಮದಲ್ಲಿಯೇ ಪ್ರೌಢ ಶಾಲೆ ಇದೆ. ಮಕ್ಕಳು ಇದರ ಸದುಪಯೋಗ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಶ್ರೀದೇವಿ ಮಾತನಾಡಿ, ಶಾಲಾ ಆರಂಭದ ದಿನಗಳಲ್ಲಿ ಮಕ್ಕಳಿಗೆ ದಾನಿಗಳ ಸಹಕಾರ ದೊರೆಯುತ್ತಿರುವುದು ಸಂತಸದ ವಿಷಯ. ವೆಂಕಟೇಶ್ ಕಾಮತ್ ಅವರು ಊರಿನ ಹೆಮ್ಮೆಯ ವ್ಯಕ್ತಿ. ಅನೇಕರಿಗೆ ಉದ್ಯೋಗವಕಾಶವನ್ನು ಕಲ್ಪಿಸಿ ಮಾದರಿಯಾಗಿದ್ದಾರೆ. ಸಾಧಕರೊಬ್ಬರ ಆಶೀರ್ವದ ಮಕ್ಕಳಿಗೆ ದೊರೆತಂತಾಗಿದೆ ಎಂದರು.
ಸಹ ಶಿಕ್ಷಕರಾದ ವಿ.ಎಂ. ಶ್ರೀನಿವಾಸ ನಾಯ್ಕ್, ಪರ್ತೀಶ್ ಪಾಟೀಲ್, ಉಮಾರಾಮ ಭಂಡಾರಿ, ಎಚ್.ಜಿ. ರವೀಂದ್ರ, ಎಂ. ಶೈಲೇಂದ್ರ, ಎಂ.ಟಿ. ಮಹೇಶ್ ಕುಮಾರ್, ಮಾಲತೇಶ್, ಸಿಬ್ಬಂದಿ ಎಂ.ಕೆ. ಶರತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















