ಕಲ್ಪ ಮೀಡಿಯಾ ಹೌಸ್ | ಸೊರಬ |
ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳೆಸೊರಬ ಹಾಗೂ ಯುವಾ ಬ್ರಿಗೇಡ್ ಸೊರಬ ಇವರ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ 160 ಅಡಿಕೆ ಸಸಿಗಳನ್ನು ನೆಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಗಣಪತಿ ಪಿ.ಬಿ ಮಾತನಾಡಿ, ಶಾಲೆಯ ಆವರಣವನ್ನು ಉತ್ತಮವಾದ ಪರಿಸರದಿಂದ ಕೂಡಿಡುವಂತೆ ಮಾಡುವುದು ಪ್ರತಿ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ ಹಾಗೂ ಇದಕ್ಕೆ ಪೋಷಕರು ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಆಗ ಮಾತ್ರ ಇಂತಹ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ನಮ್ಮೊಂದಿಗೆ ಯುವಾ ಬ್ರಿಗೇಡ್ ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಮಕ್ಕಳಿಗೆ ಉತ್ತಮವಾದ ಪರಿಸರ ನಿರ್ಮಿಸಿ ಕೊಡುವಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಮತ್ತು ಈ ಶಾಲೆಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಜ್ರಮಹೋತ್ಸವ ಆಚರಿಸಬೇಕಾಗಿರುವುದರಿಂದ ಶಾಲೆಗೆ ಹೊಸದಾಗಿ ಸುಣ್ಣ-ಬಣ್ಣದ ಕೆಲಸಗಳು ನಡೆಯಬೇಕಾಗಿದೆ ಆದ್ದರಿಂದ ಹಳೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು , ಸ್ಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಮಹೇಶ್ ಖಾರ್ವಿ ಮಾತನಾಡಿ, ಪ್ರತಿಯೊಬ್ಬರೂ ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆಯನ್ನು ನೀಡುವುದು ಪ್ರತಿವ್ಯಕ್ತಿಯ ಜವಾಬ್ದಾರಿಯಾಗಿರುತ್ತದೆ. ತಾವು ಕಲಿತ ಶಾಲೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಶಾಲೆಯ ಹಳೆಯ ವಿದ್ಯಾರ್ಥಿಗಳ ಕಾರ್ಯವಾಗಿರುತ್ತದೆ ಮತ್ತು ಇದಕ್ಕೆ ಪೋಷಕರು ಕೂಡ ಸಹಕರಿಸಬೇಕು ಎಂದರು.
ಶಿಕ್ಷಕರಾದ ವೀರಪ್ಪ ಎಂ.ಸಿ, ಸದಾನಂದ ಸಿ.ಪಿ, ನಾರಾಯಣ ಕೆ.ಸಿ , ಅಕ್ಕನಾಗು ಎಂ ಪಾಟೀಲ್. ಶಾಂತ ಎ ಗೌಡರ್, ಪ್ರಭಾವತಿ, ರೇಖಾ ಎನ್, ಯುವಾ ಬ್ರಿಗೇಡ್ ನ ರಂಗನಾಥ ಮೊಗವೀರ, ಅನಿಲ್ ಮಾಳವಾದೆ, ಲೋಕೇಶ್, ವಿನೋದ್ ವಾಲ್ಮೀಕಿ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರುಗಳು , ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post