ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ನಡೆದ ರಾಜ್ಯ ಸಮ್ಮೇಳನದಲ್ಲಿ ಮಹತ್ವಪೂರ್ಣ ಹಲವು ನಿರ್ಣಯಗಳು ಸಮಾರೋಪ ಸಮಾರಂಭದಲ್ಲಿ ಮಂಡನೆಯಾಯಿತು.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ #Anantha Hegade Ashisara ನಿರ್ಣಯ ಮಂಡಿಸಿದರು. ಈಗಾಗಲೇ ಛಿದ್ರಗೊಂಡಿರುವ ಶರಾವತಿ ಕಣಿವೆಯ ಭೂಗತ ಜಲವಿದ್ಯುತ್ ಯೋಜನೆ ಮೀನುಗಾರರಿಗೆ ಕಂಟಕ, ಶರಾವತಿ ಕಣಿವೆ ಉಳಿಸಿ ಅಭಿಯಾನವನ್ನು ವ್ಯಾಪಕವಾಗಿ ಶಿವಮೊಗ್ಗ ಮತ್ತು ಉ.ಕ. ದಲ್ಲಿ ನಡೆಸಬೇಕು.. ಬೇಡ್ತಿ- ವರದಾದಂಥ ತಿರುವ ಯೋಜನೆಗಳು ಪಶ್ಚಿಮ ಘಟ್ಟಕ್ಕೆ ಮಾರಕ. ನದೀ ತಿರುವು/ನದೀ ಜೋಡಣೆ ಯೋಜನೆ ಬೇಡವೇ ಬೇಡ ಸಾಗರದ ಕೊಲ್ಲಿ ಬಚ್ಚಲು ಕಣಿವೆ ಧ್ವಂಸವಾಗುವ ಮುನ್ಸೂಚನೆ ಇದೆ. ಸಾಗರ, ಶಿವಮೊಗ್ಗಾ ರೈತ ಸಮುದಾಯ ಎಚ್ಚರವಹಿಸಬೇಕು. ಅರಣ್ಯ ಇಲಾಖೆಯ ವರ್ಕಿಂಗ್ ಪ್ಲಾನ್‌ಗೆ ಹಲವು ಸುಧಾರಣೆ ಜೊತೆಗೆ ಜೀವ ವೈವಿಧ್ಯ ರಕ್ಷಣೆ ವಿಷಯ ಸೇರಿಸಬೇಕು.
ಮೈಸೂರು ಪೇಪರ್ ಮಿಲ್‌ಗೆ #Mysore Paper Mill 27000 ಹೆಕ್ಟೇರ್ ಘಟ್ಟದ ಭೂಮಿಯನ್ನು ಸರ್ಕಾರ ನೀಡಿದೆ. ಇದರ ನಿರ್ವಹಣೆ ಇಲ್ಲದೇ ಭೂಕಬಳಿಕೆ ಆಗುತ್ತಿದೆ ಎಂಬ ಸಂಗತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಲೆನಾಡಿನ ಸಣ್ಣ ಸಣ್ಣ ಕೆರೆಗಳ ಅತಿಕ್ರಮಣ ತೆರವಿಗೆ ಗ್ರಾಮಪಂಚಾಯತಗಳಿಗೆ ವಿಶೇಷ ಜವಾಬ್ದಾರಿ ಮತ್ತು ಅನುದಾನ ನೀಡಬೇಕು. ಜೌಗು ಪ್ರದೇಶಗಳು, ಕರಾವಳಿ ಅಳಿವೆಗಳನ್ನು ಮುಚ್ಚುವ ಸ್ಥಾಪಿತ ಹಿತಾಸಕ್ತಿಗಳ ಕಾಮಗಾರಿ ತಡೆಯಬೇಕು. ಜೀವ ವೈವಿಧ್ಯ ಕಾಯಿದೆ ಉಲ್ಲಂಘನೆ ಪ್ರಕರಣ ದಾಖಲಿಸುವ ಕೆಲಸ ಮಾಡಲು ಸ್ಥಾನಿಕ ಅರಣ್ಯ ಅಧಿಕಾರಿಗಳು ಮುಂದಾಗುವಂತೆ ಅರಣ್ಯ ಸಚಿವರು ಕಠಿಣ ಆದೇಶ ನೀಡಬೇಕು.
ನಿಷೇಧಿತ ಕ್ರಿಮಿನಾಶಕಗಳನ್ನು ಕಳೆನಾಶಕ ಬಳಕೆ ತಡೆಯಲು ಕೃಷಿ- ತೋಟಗಾರಿಕಾ ಇಲಾಖೆಗಳು ನೇರ ಕ್ರಮ ವಹಿಸಬೇಕು. ಭೂಕುಸಿತ ತಡೆಗೆ ಭೂ ಕುಸಿತ ಅಧ್ಯಯನ ಸಮಿತಿಯ ತಜ್ಞ ವರದಿ ಶಿಫಾರಸ್ಸು ಜಾರಿಮಾಡಬೇಕು. ಕರಾವಳಿ ಮತ್ತು ಘಟ್ಟದಲ್ಲಿ ತುಂಬಿರುವ ಹೊಂ ಸ್ಟೆ, ರೆಸಾರ್ಟಗಳು ಅಕ್ರಮ ಸರ್ಕಾರ ಕಣ್ಣು ತೆರೆಯಲಿ. ಮಂಗನ ಕಾಯಿಲೆಗೆ ಪರಿಣಾಮಕಾರಿ ವ್ಯಾಕ್ಸಿನ್ ಬೇಕೆ ಬೇಕು. ಕೈಗಾ ಅಣು ಸ್ಥಾವರ ಸುತ್ತಲಿನ ತಾಲೂಕುಗಳಲ್ಲಿನ ಗಂಭೀರ ಕಾಯಿಲೆ ಗಮನಿಸಿ, ಅಣುಸ್ಥಾವರದವರು ಆರೋಗ್ಯ ನಿಧಿ ಸ್ಥಾಪಿಸಬೇಕು. ಘಟ್ಟದ 20 ನದಿಗಳು 10,000 ಹೊಳೆಗಳಲ್ಲಿ ಅಕ್ರಮ ಮರಳಿಗೆ ಕಡಿವಾಣ ಬೀಳಲಿ. ಹಳ್ಳ-ಹೊಳೆ ಮುಚ್ಚುವ ಕಾಮಗಾರಿ ನಿಲ್ಲಿಸಿ. 1500 ಎಕರೆ ವಿಸ್ತಾರದ ತದಡಿಕಾಂಡ್ಲಾ ವನಕ್ಕೆ ಪಶ್ಚಿಮ ಕರಾವಳಿಯ ನೈಸರ್ಗಿಕ ಜೀವವೈವಿಧ್ಯ ತಾಣಪಟ್ಟ ನೀಡಬೇಕು ಎಂದು ಆಗ್ರಹಿಸಿರುವ ನಿರ್ಣಯದಲ್ಲಿ ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ವಿಲೇಜ್ ಕಾಮನ್ ಲ್ಯಾಂಡ್ ಸಂರಕ್ಷಣೆ ವಿಷಯಕ್ಕೆ ಆದ್ಯತೆ ನೀಡಬೇಕು. ಮೇಲಿನ ಹಕ್ಕೊತ್ತಾಯಕ್ಕೆ ಪಶ್ಚಿಮಘಟ್ಡ, ರಾಜ್ಯದ ಹಲವೆಡೆ ಜಾಗೃತಿ ಜಾಥಾ, ಸಮಾಲೋಚನಾ ಸಭೆ ನಡೆಸಬೇಕು ಎಂದರು.
ಸಮಾರೋಪದಲ್ಲಿ ಡಾ.ವಾಮನ ಆಚಾರ್, ಪ್ರೊ.ಬಿ.ಎಂ.ಕುಮಾರಸ್ವಾಮಿ, ಸುಧೀರ ಭಟ್, ರಘುನಂದನ ಭಟ್, ಶಾಂತಾರಾಮ ಸಿದ್ದಿ, ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು, ಸೊರಬ ಪಜಾಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಶ್ರೀಪಾದ ಬಿಚ್ಚುಗತ್ತಿ, ರಾಜ್ಯ ಸಮಾವೇಶದ ಪರಿಸರ ಕಾರ್ಯಕರ್ತರು ಇದ್ದರು.
Discussion about this post