ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಶ್ವ ಯೋಗ ದಿನದ ಪ್ರಯುಕ್ತ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಹಾಗೂ ಬಡ , ಬುದ್ಧಿವಂತ 7 ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರಿಂದ ದತ್ತು ಪಡೆಯುವ ಕಾರ್ಯಕ್ರಮ ಜರುಗಿತು.
ಈಶ್ವರಿಯ ವಿಶ್ವವಿದ್ಯಾನಿಲಯದ ಬ್ರಹ್ಮಕುಮಾರಿ ಚೇತನಕ್ಕ ಯೋಗ ದಿನಾಚರಣೆಯ ಮಹತ್ವವನ್ನು ವಿಶ್ವಾದ್ಯಂತ ಆಚರಿಸುತ್ತಿರುವ ಯೋಗ ದಿನದ ಬಗ್ಗೆ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜೆಸಿಐ ರಾಷ್ಟ್ರೀಯ ನೋಡಲ್ ಅಧಿಕಾರಿಪ್ರಶಾಂತ್ ದೊಡ್ಡಮನೆ ಯೋಜನೆಯನ್ನು ಸಾರ್ಥಕ ಗೊಳಿಸಿದ್ದಕ್ಕೆ ಅಭಿನಂದಿಸಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಏಕಾಂತರವರು ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಕಿ ಪ್ರೇಮ ಶಾಲೆಯ ವಿದ್ಯಾರ್ಥಿಗಳಿಂದ ಯೋಗಾಸನ ಪ್ರದರ್ಶನ ಕಾರ್ಯಕ್ರಮವನ್ನು ನಿರ್ವಹಿಸಿದರು.
Also read: ಶಿವಮೊಗ್ಗ : ಲಷ್ಕರ್ ಮೊಹಲ್ಲಾದಲ್ಲಿ ಪೊಲೀಸ್ ಸಿಬ್ಬಂದಿ ಎದೆಗೆ ಚಾಕು ಇರಿತ!
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾ, ಸದಾಶಿವಪ್ಪ , ಸೋಮಶೇಖರಪ್ಪ ಎಸ್‌ಡಿಎಂಸಿ ಸದಸ್ಯರಾದ ಮಲುಕೇಶ್, ಶಾಲೆಯ ಶಿಕ್ಷಕಿಯರಾದ ಪದ್ಮಾಕ್ಷಿ, ಸುಕನ್ಯಾ , ದೀಪ, ಅತಿಥಿ ಶಿಕ್ಷಕಿ ಭವ್ಯ, ತುಳುಸವ್ವ, ಇಮ್ರಾನ್ ಖಾನ್ ಹೊರಕೇರಿ, ರೂಪಾವತಿ ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post