ಕಲ್ಪ ಮೀಡಿಯಾ ಹೌಸ್ | ಸೌದಿ |
ಗಲ್ಫ್ ಪ್ರದೇಶದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲಿ #Oil refinery ಒಂದಾದ ರಾಸ್ ತನುರಾದ ಮೇಲೆ ಡ್ರೋಣ್ ದಾಳಿ #Drone attack ನಡೆದಿದ್ದು, ಜಗತ್ತಿನ ಹಲವು ರಾಷ್ಟçಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕಾದ ವಿರುದ್ದ ಸಿಟ್ಟಿಗೆ ಇರಾನ್ ಸೌದಿ ರಾಷ್ಟ್ರಗಳ ಮೇಲೆ ಮುಗಿಬಿದ್ದಿದ್ದು, ಗಲ್ಪರಾಷ್ಟ್ರಗಳ ಮೂಲಭೂತ ಸೌಕರ್ಯದ ಮೇಲೆ ಡ್ರೋನ್ ದಾಳಿ ಮುಂದುವರೆಸಿದೆ.
ಗಲ್ಫ್ ಪ್ರದೇಶದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ, ಪ್ರತಿದಿನ 5,50,000 ಬ್ಯಾರೆಲ್’ಗಳಷ್ಟು ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ ಸಂಸ್ಕರಣಾಗಾರವಲ್ಲದೆ, ಸೌದಿಯ ಕಚ್ಚಾ ತೈಲ ರಫ್ತಿನ ಪ್ರಮುಖ ಟರ್ಮಿನಲ್ ಕೂಡ ಆಗಿದೆ. ಈ ಘಟಕ ಸ್ಥಗಿತಗೊಂಡ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏಕಾಏಕಿ 10% ಏರಿಕೆ ಕಂಡಿದೆ.
ವರದಿಗಳ ಪ್ರಕಾರ, ಅಮೆರಿಕಾದ ಯುದ್ಧ ವಿಮಾನಗಳಿಗೆ #American fighter jet ಸೌದಿ ಅರೇಬಿಯಾ ನೀಡುತ್ತಿರುವ ಲಾಜಿಸ್ಟಿಕ್ ಬೆಂಬಲ ಮತ್ತು ಇಂಧನ ಪೂರೈಕೆಯೇ ಇರಾನ್ ಕೆಂಗಣ್ಣಿಗೆ ಕಾರಣವಾಗಿದೆ. ಈ ಹಿಂದೆ ಕೇವಲ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸುತ್ತಿದ್ದ ಇರಾನ್, ಈಗ ತನ್ನ ಕಾರ್ಯತಂತ್ರ ಬದಲಿಸಿದ್ದು ಸೌದಿ, ಯುಎಇ ಮತ್ತು ಕತಾರ್ನಂತಹ ರಾಷ್ಟ್ರಗಳ ಆರ್ಥಿಕ ಮೂಲಗಳ ಮೇಲೆ ದಾಳಿ ನಡೆಸುತ್ತಿದೆ.
ಅರಾಮ್ಕೊ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಅಬೈಕ್’ ಮತ್ತು ಖುರೈಸ್’ ಘಟಕಗಳ ಮೇಲೆ 10ಕ್ಕೂ ಹೆಚ್ಚು ಡ್ರೋನ್’ಗಳ ಮೂಲಕ ದಾಳಿ ನಡೆಸಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದ್ದರು.
ಸೌದಿ ರಷ್ಟ್ರಣಾ ಸಚಿವಾಲಯದ ವಕ್ತಾರರು ಅಲ್ ಅರೇಬಿಯಾ ಟಿವಿಗೆ ನೀಡಿದ ಹೇಳಿಕೆಯಂತೆ, ರಾಸ್ ತನುರಾ ಸೌಲಭ್ಯವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಎರಡು ಡ್ರೋನ್’ಗಳನ್ನು ಮಧ್ಯದಲ್ಲೇ ತಡೆಹಿಡಿಯಲಾಗಿದೆ. ದಾಳಿಯಿಂದ ಮೂಲಸೌಕರ್ಯಕ್ಕೆ ಎಷ್ಟು ಹಾನಿಯಾಗಿದೆ ಎಂಬುದರ ಕುರಿತು ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಅರಾಮ್ಕೊ ಮಾಧ್ಯಮ ಕಚೇರಿಯಿಂದಲೂ ಅಧಿಕೃತ ಹೇಳಿಕೆ ಹೊರಬಂದಿಲ್ಲ.
ಈ ಘಟನೆ ಜಾಗತಿಕ ತೈಲ ಮಾರುಕಟ್ಟೆಗೆ ತೀವ್ರ ಒತ್ತಡದ ಸಮಯದಲ್ಲಿ ನಡೆದಿದೆ. ಇರಾನ್ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಗಳು ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿವೆ. ಆರಂಭಿಕ ವ್ಯಾಪಾರದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್’ಗ 80 ಡಾಲರ್’ಗಿಂತ ಮೇಲಾಗಿದ್ದು, ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಿಸಿದೆ.
ಜಾಗತಿಕ ಪರಿಣಾಮ ಏನು?
ಇಂಧನ ತಜ್ಞರ ಪ್ರಕಾರ, ಗಲ್ಫ್ ರಫ್ತಿಗೆ ಯಾವುದೇ ದೀರ್ಘಕಾಲದ ಅಡಚಣೆ ಉಂಟಾದರೆ ಜಾಗತಿಕ ಪೂರೈಕೆ ಸರಪಳಿಗೆ ದೊಡ್ಡ ಹೊಡೆತ ಬೀಳಬಹುದು. ಇದರಿಂದ ಇಂಧನ ಬೆಲೆ ಏರಿಕೆ, ಸಾಗಣೆ ವೆಚ್ಚ ಹೆಚ್ಚಳ ಮತ್ತು ವಿಶ್ವದಾದ್ಯಂತ ಹಣದುಬ್ಬರದ ಒತ್ತಡ ಹೆಚ್ಚುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮ
ಸದ್ಯದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಹೆಚ್ಚಿನ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಪ್ರಾದೇಶಿಕ ಸಂಘರ್ಷ ಹೀಗೆಯೇ ಮುಂದುವರಿದರೆ ವಿಶ್ವದಾದ್ಯಂತ ಇಂಧನ ದರದಲ್ಲಿ ಭಾರೀ ಸ್ಫೋಟ ಸಂಭವಿಸುವ ಭೀತಿ ಎದುರಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















