ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ SWIAA 2024ನ್ನು ಮುಡಿಗೇರಿಸಿಕೊಳ್ಳುವ ಮೂಲಕ ನಗರದ ಲಕ್ಷ್ಮಿ ಭದ್ರಾವತಿ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ರಾಜ್ಯಕ್ಕೇ ಕೀರ್ತಿ ತಂದಿದ್ದಾರೆ.
ಇಡೀ ದಕ್ಷಿಣ ಭಾರತದಲ್ಲೇ ರಂಗಭೂಮಿ ಕಲಾವಿದೆಯ ಸಾಧನೆಯ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕಲಾವಿದೆ ಎಂಬ ಕೀರ್ತಿ, ಹೆಗ್ಗಳಿಕೆಗೆ ಪಾತ್ರವಾಗಿರುವ ಇವರು, ಕರುನಾಡಿಗೇ ಕೀರ್ತಿ ತಂದಿದ್ದಾರೆ.
Also read: ದೆಹಲಿ ವಿಧಾನಸಭಾ ಚುನಾವಣೆ | ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ’ ಪತ್ರದಲ್ಲಿ ಮಹಿಳೆಯರಿಗಾಗಿ ಮಹತ್ವದ ಘೋಷಣೆ
ಸೌಂದರ್ಯ ಮತ್ತು ಪ್ರತಿಭೆ
She born to play … strong roles… ಎಂದೆನಿಸಿಕೊಂಡ ನಮ್ಮ ಮಲೆನಾಡಿನ ಮಹಿಳಾ ಕಲಾವಿದೆ ತೆರೆಯ ಮೇಲೆ ತಾನು ನಿಭಾಯಿಸುವ ಎಲ್ಲಾ ಪಾತ್ರಗಳಿಗೂ ಜೀವ ತುಂಬುವ ಕಡೆ ಸದಾ ಗಮನ ಹರಿಸುವ ಸ್ವಯಂ ಕಲಿತ ಕಲಾವಿದೆ…. ಲಕ್ಷ್ಮಿ ಭದ್ರಾವತಿ.
9ನೇ ತರಗತಿಯಲ್ಲೇ ತಂದೆಯ ಪ್ರೇರಣೆಯಿಂದ ರಂಗಲೋಕಕ್ಕೆ ಬಣ್ಣ ಹಚ್ಚುವ ಮುಖೇನ ವಿದ್ಯಾಭ್ಯಾಸದ ಜೊತೆ ಜೊತೆಗೆ ಅನೇಕ ಕಲಾ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಪಡೆದು ವ್ಯಾಸಂಗದಲ್ಲಿಯೂ ರ‍್ಯಾಂಕ್ ಪಡೆದು ಪ್ರತಿಭಾನ್ವಿತೆ ಈಕೆ.
ತನ್ನ ಬಿಡುವಿನ ವೇಳೆಯಲ್ಲಿ ನಾಟಕಗಳನ್ನು ನೋಡುವುದು, ಪುಸ್ತಕಗಳನ್ನು ಓದುವುದು ಹಾಗೂ ಕಲ್ಪನಾ ಹಾಗೂ ಆರತಿಯವರ ಅನೇಕ ಸಿನಿಮಾಗಳು ಇವರನ್ನು ಪಾತ್ರಗಳಲ್ಲಿ ಗಂಭೀರತೆ ತರಲು ಪ್ರೇರೇಪಿಸಿತು ಎನ್ನುತ್ತಾರೆ ಇವರ ಆಪ್ತರು.ಇನ್ನು, ವೃತ್ತಿಯಲ್ಲಿ ಶಿಕ್ಷಕಿಯಾದರೂ ಶಾಲೆಗೆ ಗೈರಾಗದೇ ಅಲ್ಲಿಯೂ ಸಹ ವಿದ್ಯಾರ್ಥಿಗಳಲ್ಲಿ ಸುಧಾರಣೆ ತರುವಲ್ಲಿ ಸೈ ಎನಿಸಿಕೊಂಡು, ಅನೇಕ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಎನ್ನುವ ಪ್ರಶಸ್ತಿ ಪಡೆದಿದ್ದಾರೆ.
ಶಾಲೆ ಮುಗಿದ ಬಳಿಕ ರಂಗ ಶಿಬಿರಗಳಲ್ಲಿ ಭಾಗವಹಿಸುವ ಇವರು, ಅದೆಷ್ಟೋ ಶಾಲಾ ಕಾಲೇಜುಗಳಿಗೆ ನಾಟಕ ಹಾಗೂ ನೃತ್ಯಗಳನ್ನು ಉಚಿತವಾಗಿ ಕಲಿಸಿಕೊಡುತ್ತಾರೆ. ಅಷ್ಟೇ ಅಲ್ಲದೇ, ಯಾವುದೇ ವಿಷಯ ನೀಡಿದರೂ ಅದ್ಬುತವಾಗಿ ಉಪನ್ಯಾಸ ಮಂಡಿಸುವ ಲಕ್ಷ್ಮಿಯವರ ವಾಕ್ಚಾತುರ್ಯ ಅನೇಕರಿಗೆ ಪ್ರೇರೇಪಿಸಯತ್ತದೆ.
ಸಂಗೀತ, ನೃತ್ಯ, ನಾಟಕ, ಲೇಖನ, ಉಪನ್ಯಾಸ, ಶಿಕ್ಷಕರಿಗೆ ತರಬೇತಿ ನೀಡುವ ಶೈಲಿ, ನಿರೂಪಣೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ಬದ್ದತೆಯಿಂದ ತೊಡಗಿಸಿಕೊಂಡು ತಮ್ಮದೇ ಆದ ಛಾಪನ್ನು ಮೂಡಿಸುವ ಇವರು ನಿಜಕ್ಕೂ ಒಂದು ವಿಸ್ಮಯ.
ಇಷ್ಟು ಪ್ರಸಿದ್ದಿ ಪಡೆದಿದ್ದರೂ ಒಂದು ಸಾಮಾಜಿಕ ಜಾಲತಾಣಗಳ ಬಳಕೆ ಮಾಡದ ಸರಳ ಜೀವಿ ಈಕೆ.
ಸ್ವಯಂ ಕಲಿತ ಕಲಾವಿದೆಯಾಗಿರುವ ಲಕ್ಷ್ಮಿ ಸಾಕಷ್ಟು ವೈಫಲ್ಯಗಳನ್ನು ಅನುಭವಿಸಿದ್ದಾರೆ. ಆದರೆ, ಪ್ರತಿ ವಿಫಲ ಪ್ರಯತ್ನದಿಂದ ಯಶಸ್ಸು ದೊರೆತಿದೆ. ಕುಟುಂಬದ ಬೆಂಬಲ, ಅಭಿಮಾನಿಗಳ ಪ್ರೀತಿಯಿಂದ ಇಷ್ಟೆಲ್ಲಾ ಸಾಧನೆ ಸಾಧ್ಯ ಎನ್ನುತ್ತಾರೆ.
ತಮ್ಮ ಅಭಿಮಾನಿಗಳಿಗೆ ಹಾಗೂ ಹೆಚ್ಚು ಪ್ರಧಾನ ಪಾತ್ರಗಳನ್ನೇ ನೀಡಿ ಪ್ರೇರೇಪಿಸಿ ಮಲೆನಾಡು ಕಲಾ ತಂಡದ ರೂವಾರಿಗಳಾದ ಡಾ. ಗಣೇಶ್ ಕೆಂಚನಾಳ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಕಲಾವಿದೆಗೆ ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post