ಕಲ್ಪ ಮೀಡಿಯಾ ಹೌಸ್
ಸರಳತೆಯ ಪಾಠ ಹೇಳಿಕೊಟ್ಟ ಧೀಮಂತ, ಕನ್ನಡ ಚಿತ್ರರಂಗದ ಉತ್ತಮ ನಟ, ಸಜ್ಜನಿಕೆ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ನಟ ಪುನೀತ್ ರಾಜ್ ಕುಮಾರ್ ಅವರು ಮಾದರಿಯಾಗಿ ಬದುಕಿದ್ದರು. ಕನ್ನಡ ಚಿತ್ರರಂಗಕ್ಕೆ ಕೊಡುಗೆ ಅಪಾರ. ತಾವೊಬ್ಬ ನಟರಾಗಿದ್ದರೂ ಸಹ ಅನೇಕ ಹೊಸಬರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು. ಅನಾಥಾಶ್ರಮ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇನ್ನಿತರ ಚಟುವಟಿಕೆಯನ್ನು ಹಮ್ಮಿಕೊಂಡಿದ್ದರು.
ವೀರ ಕನ್ನಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 17 ಮಾರ್ಚ್ 1975ರಂದು ಚೆನ್ನೈನಲ್ಲಿ ಜನಿಸಿದ್ದು, ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ತಂದೆ ದಿವಂಗತ ಡಾ. ರಾಜ್ ಕುಮಾರ್ ಜೊತೆಗೆ ನಟರಾಗಿ ತೊಡಗಿಸಿಕೊಂಡಿದ್ದ ಅವರು ಕನ್ನಡ ಸಿನಿಮಾ ರಂಗದಲ್ಲಿ ಜನಮನಗೆದ್ದ ನಟರಾಗಿದ್ದರು.
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಹಿನ್ನಲೆ ಗಾಯಕ, ದೂರದರ್ಶನ ನಿರೂಪಕ, ನಟರಾಗಿ ಸುಮಾರು 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದರು.
ಬಾಲ ನಟನಾಗಿ ಅಭಿನಯಿಸಿದ ಚಿತ್ರಗಳು…!
ಪ್ರೇಮದ ಕಾಣಿಕೆ
ಭಾಗ್ಯವಂತ
ಎರಡು ನಕ್ಷತ್ರಗಳು
ಬೆಟ್ಟದ ಹೂವು
ಚಲಿಸುವ ಮೋಡಗಳು
ಶಿವ ಮೆಚ್ಚಿದ ಕಣ್ಣಪ್ಪ
ಪರಶುರಾಮ್
ಯಾರಿವನು
ಭಕ್ತ ಪ್ರಹ್ಲಾದ
ವಸಂತ ಗೀತೆ
ನಾಯಕ ನಟನಾಗಿ ನಟಿಸಿದ್ದ ಚಿತ್ರಗಳು…!
ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್ , ನಮ್ಮ ಬಸವ, ಅಜಯ್, ಅರಸು, ಮಿಲನ , ಬಿಂದಾಸ್ , ವಂಶಿ, ರಾಜ್ ದ ಶೋ ಮ್ಯಾನ್ , ಪೃಥ್ವಿ, ರಾಮ್ , ಜಾಕಿ, ಹುಡುಗರು, ಪರಮಾತ್ಮ, ಅಣ್ಣಾಬಾಂಡ್, ಯಾರೇ ಕೂಗಾಡಲಿ , ನಿನ್ನಿಂದಲೇ , ಮೈತ್ರಿ, ಪವರ್ ಸ್ಟಾರ್, ಧೀರ ರಣಧೀರ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ್, ಅಂಜನಿಪುತ್ರ, ನಟಸಾರ್ವಭೌಮ, ಯುವರತ್ನ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ನಾಯಕ ನಟನಾಗಿ ಅಭಿನಯಿಸಿದ್ದರು.
ನಟ ಪುನೀತ್ ರವರು ಗೊತ್ತಿಲ್ಲದೇ ಹಲವರು ಸಮಾಜ ಮುಖಿ ಕಾರ್ಯ ಚಟುವಟಕೆ ಮೂಲಕ ಜನರಿಗೆ ಆಸರೆಯ ಬೆಳಕಾಗಿದ್ದರು. ಸುಮಾರು 45 ಉಚಿತ ಶಾಲೆ, 26 ವೃದ್ಧಾಶ್ರಮ, 16 ವೃದ್ಧಾಶ್ರಮ, 1800 ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿ, 19 ಗೋಶಾಲೆ, ಮೈಸೂರಿನಲ್ಲಿ ಶಕ್ರಿಧಾಮ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಹೀಗೆ ಹಲವರು ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೆ ನಡೆಸಿದ ವೀರ ಕನ್ನಡಿಗ ಪುನೀತ್ ರಾಜಕುಮಾರ್ ಕರುನಾಡ ಜನತೆಯ ಹೆಮ್ಮೆಯ ಮಗನಾಗಿದ್ದರೂ. ಅತಿ ಕಿರಿಯ ಮಯಸ್ಸಿಗೆ ಅವರು ಇನ್ನಿಲ್ಲ ಎಂಬುವುದು ನಂಬಲು ಸಾಧ್ಯವಾಗುತ್ತಿಲ್ಲ.
ಪುನೀತ್ ರಾಜಕುಮಾರ್ ಕೇವಲ ಒಬ್ಬ ನಟನಾಗಿ ಮಾತ್ರವಲ್ಲ, ಮಗನಾಗಿ ಇದ್ದಂತಹ ನಟ. ಕರುನಾಡು ಮನೆಯ ಮಗ ಎಂದೇ ಹೆಸರಾಗಿದ್ದ ನಟ ಪುನೀತ್ ರಾಜಕುಮಾರ್ ವಿಧಿವಶರಾಗಿರುವುದು ನಿಜಕ್ಕೂ ನಂಬಲಾಗದ ಸಂಗತಿ.
ಕನ್ನಡ ಭಾಷೆ, ಸೇರಿದಂತೆ ಇನ್ನಿತರ ಹೋರಾಟದಲ್ಲಿ ಮುಂಚೂಣಿಯಾಗಿ, ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಕನ್ನಡ ಹಾಗೂ ಸ್ಥಳೀಯ ಸಂಸ್ಕೃತಿಗೆ ಒತ್ತನ್ನು ನೀಡುವ ಮೂಲಕ ಉತ್ತಮ ಚಿಂತನೆಯನ್ನು ಹೊಂದಿದ್ದರು. ಅಲ್ಲದೆ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಪುನೀತ್ ಅವರು ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟಸಾರ್ವಭೌಮ ಕನ್ನಡ ಚಿತ್ರರಂಗದಲ್ಲಿ ಅವರು ಮೂಡಿಸಿರುವ ಛಾಪು ಒಂದೆರಡಲ್ಲ. ಅವರ ತಂದೆಯಂತೆಯೇ ನಟ ಪುನೀತ್ ರವರು ಕೂಡ ಕರುನಾಡು ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ನಟ.
ಮಿಸ್ ಯು ಅಪ್ಪು ಸರ್…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post