ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ವಿಷ್ಣು ತತ್ವದ ವಿನಿರ್ಣಯಃದ ಕುರಿತಾಗಿ ಮಾರ್ಚ್ 1ರ ನಾಳೆ ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಅಖಿಲ ಭಾರತ ಮಾಧ್ವ ಮಹಾ ಮಂಡಲದ ಮೊದಲನೆಯ ಮಹಡಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಶ್ರೀಆನಂದ ತೀರ್ಥ ವಿರಚಿತ ಶ್ರೀಸರ್ವ ಮೂಲ ಗ್ರಂಥಗಳ ದಶ ಪ್ರಕರಣಗಳು – ವಿಷ್ಣು ತತ್ವ ವಿನಿರ್ಣಯಃದ ಕುರಿತು ಪರಿಚಯಾತ್ಮಕ ವಿಶೇಷ ಉಪಾನ್ಯಾಸವನ್ನು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ.ಎಚ್. ಸತ್ಯನಾರಾಯಣಾಚಾರ್ಯರು ನೀಡಲಿದ್ದಾರೆ.
ಸತ್ಯನಾರಾಯಣಾಚಾರ್ಯರು ಇಂದು ಸೃಜನಶೀಲ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ಸಂಸ್ಕೃತ ಭಾಷೆ-ಶಾಸ್ತ್ರ ಗ್ರಂಥಗಳಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆ ಪ್ರಶಂಸನೀಯವಾದದ್ದು.
ಪೂರ್ಣಪ್ರಜ್ಞ ವಿದ್ಯಾಪೀಠದ ಬಗ್ಗೆ
ದೇಶ ಹಾಗೂ ಹಿಂದೂ ಧರ್ಮಕ್ಕೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ನಗರದ ಪ್ರಮುಖ ಆಧ್ಯಾತ್ಮಿಕ ಸಂಸ್ಥೆಯಾಗಿದೆ.
ವೇದ, ಉಪನಿಷತ್ತುಗಳ ಸಮಗ್ರ ಮತ್ತು ಗಾಢ ಅಧ್ಯಯನದ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಪರಿಪೂರ್ಣ ಜ್ಞಾನವನ್ನು ಈ ಸಂಸ್ಥೆ ನೀಡುತ್ತದೆ.
1957-58 ರ ಸುಮಾರಿಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಕತ್ರಿಗುಪ್ಪೆ ರಸ್ತೆಯಲ್ಲಿ ಮೂರುವರೆ ಎಕರೆ ನಿವೇಶದಲ್ಲೂ ಸಮುಚ್ಚಯ ನಿರ್ಮಿಸಲಾಯಿತು.
ಆರಂಭದ ದಿನದಿಂದಲೂ ವಿದ್ಯಾರ್ಥಿ ಸಮುದಾಯಕ್ಕೆ ಶಾಲಾ ಕೊಠಡಿ, ವಸತಿಗೃಹ, ಗ್ರಂಥ ಭಂಡಾರ, ಸಭಾಗೃಹಗಳನ್ನು ಒದಗಿಸಿದೆ. ವಿದ್ಯಾಪೀಠದ ಆವರಣದಲ್ಲಿ ಶ್ರೀ ಕೃಷ್ಣನ ಗುಡಿಯನ್ನು 1980ರಲ್ಲಿ ನಿರ್ಮಿಸಲಾಯಿತು.
ವಿಶ್ವಸಂತ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ವೃಂದಾವನ ಸನ್ನಿಧಾನ ವಿದ್ಯಾಪೀಠದಲ್ಲಿದೆ.
ಪೂರಕ ಮಾಹಿತಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get in Touch With Us info@kalpa.news Whatsapp: 9481252093
Discussion about this post