
ದೇಶದ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಹಿಳೆಯರಿಗೆ ಬಿಗ್ ಗುಡ್ ನ್ಯೂಸ್ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ತನ್ನ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಶೇ.30ಕ್ಕೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ತಿಳಿಸಿದೆ.
ಈ ಕುರಿತಂತೆ ಪಿಟಿಐ ಸಂದರ್ಶನವೊಂದರಲ್ಲಿ ಮಾತನಾಡಿರುವ ಎಸ್’ಬಿಐ ಉಪ ವ್ಯವಸ್ಥಾಪಕ ನಿರ್ದೇಶಕ (ಮಾನವ ಸಂಪನ್ಮೂಲ) ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಕಿಶೋರ್ ಕುಮಾರ್ ಪೊಲುಡಾಸು ಅವರು ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ಬ್ಯಾಂಕ್’ನಲ್ಲಿರುವ ಈ ಲಿಂಗಾಧಾರಿತ ಅಂತರವನ್ನು ಕಡಿಮೆ ಮಾಡಲು ಉದ್ಯೋಗಿಗಳಲ್ಲಿ ಶೇ.30ಷ್ಟು ಮಹಿಳೆಯರ ಮಧ್ಯಮಾವಧಿ ಗುರಿಯಲ್ಲಿ ಹೊಂದಲಾಗಿದೆ ಎಂದಿದ್ದಾರೆ.
ಎಸ್’ಬಿಐನಲ್ಲಿ ಒಟ್ಟು 2.4 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇದ್ದು, ದೇಶದ ಯಾವುದೇ ಬ್ಯಾಂಕಿಂಗ್ ಉದ್ಯಮದಲ್ಲಿ ಇಷ್ಟು ಸಂಖ್ಯೆಯ ಸಿಬ್ಬಂದಿಗಳಿಲ್ಲ.
ಪ್ರಮುಖವಾಗಿ, ಮಹಿಳೆಯರು ಎಲ್ಲಾ ಹಂತಗಳಲ್ಲಿ ಅಭಿವೃದ್ಧಿ ಹೊಂದುವ ಕೆಲಸದ ಸ್ಥಳವನ್ನು ರಚಿಸಲು ಬ್ಯಾಂಕ್ ಬದ್ಧವಾಗಿದೆ. ಅಲ್ಲದೇ, ಉದ್ದೇಶಿತ ಕಾರ್ಯಕ್ರಮಗಳ ಮೂಲಕ, ಎಸ್’ಬಿಐ ನಾಯಕತ್ವ, ಕೆಲಸ-ಜೀವನ ಸಮತೋಲನ ಮತ್ತು ಕೆಲಸದಲ್ಲಿ ಘನತೆಯನ್ನು ಬೆಳೆಸುತ್ತದೆ ಎಂದರು.

ಮಹಿಳಾ ಉದ್ಯೋಗಿಗಳ ವಿಶಿಷ್ಟ ಆರೋಗ್ಯ ಅಗತ್ಯಗಳನ್ನು ಗುರುತಿಸಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ, ಗರ್ಭಿಣಿ ಸಿಬ್ಬಂದಿಗೆ ಪೌಷ್ಠಿಕಾಂಶ ಭತ್ಯೆ ಮತ್ತು ಗರ್ಭಕಂಠದ ಕ್ಯಾನ್ಸರ್ ಲಸಿಕೆ ಅಭಿಯಾನದಂತಹ ಕೇಂದ್ರೀಕೃತ ಕಾರ್ಯಕ್ರಮಗಳನ್ನು ನಮ್ಮ ಬ್ಯಾಂಕ್ ಪರಿಚಯಿಸಿದೆ ಎಂದರು
ದೇಶದಾದ್ಯಂತ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದ ಮಾತ್ರ ನಿರ್ವಹಿಸಲ್ಪಡುವ 340 ಕ್ಕೂ ಹೆಚ್ಚು ಶಾಖೆಗಳನ್ನು ಎಸ್’ಬಿಐ ಹೊಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಅಂಶದಿಂದ ಇದು ಸಾಬೀತಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post