ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭಯಾನಕ ಪ್ರಾಣ ಹಿಂಡುವ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಅದರ ವಿರುದ್ದ ಹೋರಾಡಲು ಆಡಳಿತವು ಕೈಗೊಳ್ಳುವ ಕ್ರಮಕ್ಕೆ ಸರ್ವರೂ ಸಹಕರಿಸಿದರೆ ಮಾತ್ರ ಹತೋಟಿಗೆ ತರಬಹುದೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಅವರು ಸೋಮವಾರ ಗೃಹ ಕಚೇರಿಯಲ್ಲಿ ಕೊರೊನಾ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಾಲ್ಕು ಟ್ಯಾಂಕರ್‌ಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಹಾಗೂ ಆಟೋ ಮೂಲಕ ಪ್ರಚಾರ ಮಾಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಅರಿವು ಮನೆಯಲ್ಲೆ ಇರಿ ಸುರಕ್ಷಿತವಾಗಿ ಇರಿ ಎಂಬ ಬರಹದ ಮೂಲಕ ಕೊರೊನಾ ವಿಶ್ವವನ್ನೇ ಬೆಚ್ಚಿಬೀಳಿಸಿ ಪ್ರಾಣ ಹಾನಿ ಮಾಡುತ್ತಿದೆ. ಭಾರತದಲ್ಲು ಇದರ ಬಾಹುಗಳು ಚಾಚಿದೆ. ರಾಜ್ಯದಲ್ಲಿಯೂ ಅನೇಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸರಕಾರವು ಸಹ ಯಾರೂ ಊಹಿಸಲಾಗದ ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದೆ. ಆದರೂ ಜನರು ಸ್ಪಂಸದೆ ಸಹಕರಿಸದೆ ಮನೆಯಲ್ಲಿರದೆ ಹೊರಗಡೆ ತಿರುಗಾಡುತ್ತಾ ಸಾಂಕ್ರಾಮಿಕ ರೋಗತಡೆಗೆ ಅಡ್ಡಿಯಾಗುತ್ತಿರುವುದು ದುರಂತವಾಗಿದೆ. ಅಧಿಕಾರಿಗಳು, ವೈದ್ಯರು, ಪೋಲಿಸರು, ಪೌರಕಾರ್ಮಿಕರು ಹಾಗು ಮಾಧ್ಯಮಗಳು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದರು ಜನರ ಸಹಕಾರವಿಲ್ಲದಂತಾಗಿದೆ ಎಂದು ವಿಷಾಸಿದರು.
ನಾಗರಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಡ್ಡಾಯವಾಗಿ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ. ಮನುಷ್ಯ ಜೀವಂತವಾಗಿದ್ದರೆ ಮುಂದಿನ ದಿನಗಳಲ್ಲಿ ಏನೆಲ್ಲಾ ಸಾಸಬಹುದೆಂದು, ಅಗತ್ಯ ವಸ್ತುಗಳ ಖರೀದಿಗೆ ಸಾಕಷ್ಟು ಸಮಯ ನೀಡುತ್ತಿರುವ ತಾಲೂಕು ಆಡಳಿತದೊಂದಿಗೆ ಎಲ್ಲರೂ ಸಹಕರಿಸಿದರೆ ಒಳಿತಾಗುತ್ತದೆ ಎಂದರು.
ತಹಸೀಲ್ದಾರ್ ಸೋಮಶೇಖರ್, ನಗರಸಭೆ ಪೌರಾಯುಕ್ತ ಮನೋಹರ್, ಡಿವೈಎಸ್‌ಪಿ ಸುಧಾಕರ್ ಎಸ್. ನಾಯಕ್ ಅವರು ಶಾಸಕರ ಜನ ಸ್ಪಂಧನೆ ಮತ್ತು ಅವರಿಗಿರುವ ಕಾಳಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ನಾಗರೀಕರು ಸರಕಾರದ ಆದೇಶದಂತೆ ಜಿಲ್ಲಾಡಳಿತ ಕೈಗೊಳ್ಳುವ ಮುಂಜಾಗ್ರತಾ ಕಾರ್ಯಗಳಿಗೆ ಸಹಕರಿಸದೇ ಹೋದಲ್ಲಿ ಮುಂದೆ ಬಹಳಷ್ಟು ನೋವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post