ಬಳ್ಳಾರಿ: ಬಳ್ಳಾರಿ-ಕೊಪ್ಪಳ ವಲಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸುರಕ್ಷತಾ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಈ ಕುರಿತಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಯಿತು.
2000 ಮತ್ತು 2002ರ ಮಧ್ಯದಲ್ಲಿ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶವಾದ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ದಿಗಾಗಿ ಸರ್ಕಾರದಿಂದ ಅನೇಕ ಹೊಸ ಹೊಸ ಯೋಜನೆಯಡಿಯಲ್ಲಿ ವಿದ್ಯುತ್, ಉಕ್ಕು ಮತ್ತು ಕಬ್ಬಿಣ, ಸಕ್ಕರೆ, ಸಿಮೆಂಟ್ ವಲಯದಲ್ಲಿ ಸಣ್ಣ ಮತ್ತು ಮದ್ಯಮ ವಲಯದ ಕಾರ್ಖಾನೆಗಳು ಪ್ರಾರಂಭವಾದವು. ಅವುಗಳಲ್ಲಿ ಮುಖ್ಯವಾಗಿ ಜಿಂದಾಲ್, ಅರ್’ಟಿಪಿಎಸ್, ಟಿಎಸ್’ಪಿ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕಲ್ಯಾಣಿ, ಹೊಸಪೇಟೆ ಸ್ಟೀಲ್ಸ್ ಮತ್ತು ಎಸಿಸಿ ಕಾರ್ಖಾನೆಗಳು ಪ್ರಾರಂಭವಾದವು.
ಉತ್ಪಾದನೆಯನ್ನು ಮುಖ್ಯ ಗುರಿಯಾಗಿ ಮಾಡಿಕೊಂಡು ಕೆಲಸಗಾರರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡದೆ ಕೈಗಾರಿಕೆಗಳು ಮುಂದಾದಾಗ ಆ ಸಮಯದಲ್ಲಿ ಕಾರ್ಖಾನೆಗಳಲ್ಲಿ ಮಾರಣಾಂತಿಕ ಅಪಘಾತಗಳ ಜೊತೆ ಜೊತೆಗೆ ಅನೇಕ ಬಗೆಯ ದೊಡ್ಡ ಅಪಘಾತಗಳು ಸಂಭವಿಸಿದವು. ಆಗ ಗುಲ್ಬರ್ಗದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರು.ಅಲ್ಲದೇ, ಪದೇ ಪದೇ ಅಧಿಕಾರಿಗಳು ಈ ಭಾಗದ ಕಾರ್ಖಾನೆಗಳಿಗೆ ಭೇಟಿ ನೀಡಲು ಸಹ ಬೇಸರವಾಗುತ್ತಿತ್ತು. ಕಾರಣ ಆಗ ಈ ಭಾಗದ ರಸ್ತೆಗಳ ಪರಿಸ್ಥಿತಿಯು ಸಹ ಉತ್ತಮವಾಗಿ ಇರಲಿಲ್ಲ ಮತ್ತು ಅಧಿಕಾರಿಗಳ ಭೇಟಿಯು ಸಹ ಆಗುತ್ತಿರಲಿಲ್ಲಾ. ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಉಪ ನಿರ್ಧೇಶಕರಾಗಿದ್ದ ಡಿ.ಸಿ. ಜಗದೀಶ್ ಮತ್ತು ನವನೀತ್ ಮೋಹನ್ ಹಾಗೂ ಮೇಲ್ವೀಚಾರಕರಾದ ಶ್ರೀಮತಿ ಭಾರತಿ ಮಗದುಂ ಯವರು ಗುಲ್ಬರ್ಗ, ಬಳ್ಳಾರಿ ಮತ್ತು ಕೊಪ್ಪಳ ಭಾಗದ ಪ್ರಮುಖ ಕಾರ್ಖಾನೆಗಳ ಆಡಳಿತ ಮಂಡಳಿಯವರೂಂದಿಗೆ ಸಭೆಯನ್ನು ಆಯೋಜಿಸಿ ಕಾರ್ಖಾನೆಗಳ ಸುರಕ್ಷತಾ ವಿಭಾಗದ ಸಹಾಕಾರದೊಂದಿಗೆ ಆಡಳಿತ ಮಂಡಳಿ ಜೊತೆಗೂಡಿ ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿಯನ್ನು ಪ್ರಾರಂಭಿಸಿದರು.
ಆ ಕಮಿಟಿಯಲ್ಲಿ ಈ ಕೆಳಕಂಡ ಅಂಶಗಳನ್ನು ಮಾತನಾಡಿ ಯಶಸ್ವಿಗಾಗಿ ಶ್ರಮಿಸಲು ತಿಳಿಸಿದರು. ಅವುಗಳಲ್ಲಿ ಮುಖ್ಯವಾಗಿ
1. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಅವ್ಯಕತೆಯನ್ನು ಸುರಕ್ಷತಾ ಅಧಿಕಾರಿಗಳಿಗೆ ಒದಗಿಸುವುದು
2. ಪ್ರತಿಯೊಂದು ಕಾರ್ಖಾನೆಯಲ್ಲಿ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
3. ಸುರಕ್ಷತಾ ತರಬೇತಿ ನೀಡುವುದು
4. ಸುರಕ್ಷತಾ ಸಾಧನ ಸಾಮಾಗ್ರಿಗಳನ್ನು ಕಾಲ ಕಾಲಕ್ಕೆ ಕಾರ್ಮಿಕರಿಗೆ ಒದಗಿಸುವುದು
5. ಸುರಕ್ಷತಾ ಪರಿಷತ್ ಅಥವಾ ಹೆಸರಾಂತ ಸುರಕ್ಷತಾ ಸಂಸ್ಥೆಗಳಿಂದ ಕಾರ್ಖಾನೆಗಳಲ್ಲಿ ಸುರಕ್ಷತಾ ಆಡಿಟ್ ಮಾಡಿಸಿ ಕ್ರಮ ಕೈಗೊಂಡು ಉತ್ತಮ ಸುರಕ್ಷತಾ ವಾತಾವರಣ ನಿರ್ಮಿಸಲು ಶ್ರಮಿಸುವುದು
6. ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತರಭೇತಿ ಆಯೋಜಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿತ ಕಾರ್ಯವನ್ನು ರೂಪಿಸಲಾಯಿತು. ಅದರಂತೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸರ್ಕಾರದ ವತಿಯಿಂದ ಸಹಕಾರ ನೀಡಿ ವಿಭಾಗದ ಅಧಿಕಾರಿಗಳು ಸಹ ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದು, ಅಪಘಾತ ಪ್ರಮಾಣ ಕಡಿಮೆಗಾಗಿ ಶ್ರಮಿಸುತ್ತಿದ್ದಾರೆ.
ಪ್ರಥಮವಾಗಿ 2002ರಿಂದ ರಾಯಚೂರು ಥರ್ಮಲ್ ಪವರ್ ಕೇಂದ್ರವು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು(RTPS). ನಂತರ ಈ ಭಾಗದಲ್ಲಿ ಕಿರ್ಲೋಸ್ಕರ್ ಕಾರ್ಖಾನೆ ಮುಂದುವರೆಸಿಕೊಂಡು GRISD ನಿಂದ BRISD (ಬಳ್ಳಾರಿ ವಲಯ) ಆಗಿ ಮಾರ್ಪಾಡು ಮಾಡಲಾಯಿತು ಮತ್ತು ಆರು ವರ್ಷಗಳ ಕಾಲ ಸತತವಾಗಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಒಂದೊಂದು ಕಾರ್ಖಾನೆ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿದೆ.ಈ ನಿಟ್ಟಿನಲ್ಲಿ ಬಳ್ಳಾರಿ-ಕೊಪ್ಪಳ ಭಾಗದಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಸ್ಥಾಪಿತವಾದ ಕಾರಣ BRISDಯಿಂದ BKRISE (ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿ)ಯಾಗಿ ಮಾರ್ಪಾಟು ಮಾಡಿ ಇದರಡಿಯಲ್ಲಿ ಕಿರ್ಲೋಸ್ಕರ್ ಕಾರ್ಖಾನೆ ಒಟ್ಟಾರೆ 4 ಬಾರಿ ಈ ಕಾರ್ಯಕ್ರಮ ಆಯೋಜಿಸಿರುತ್ತಾರೆ.
ಒಂದು ಬಾರಿ ಜಿಂದಾಲ್ ಕಾರ್ಖಾನೆಯ ಸಹಕಾರದಿಂದ ರಾಜ್ಯಟ್ಟದ ಕಾರ್ಯಕ್ರಮ ಮಾಡಿರುತ್ತದೆ. ಅದರಂತೆ ಜೆಪಿಒಸಿಲ್, ಮೋನಸೆಂಟೂ, ಎಸಿಸಿ, ಜಿಂದಾಲ್ 3 ಬಾರಿ (ಒಂದು ಬಾರಿ ರಾಜ್ಯ ಮಟ್ಟದ) ಹೊಸಪೇಟೆ ಸ್ಟೀಲ್ (ಎರಡು ಬಾರಿ) , ಎಂಎಸ್’ಪಿಎಲ್, ಎಕ್ಸ್ ಇಂಡಿಯಾ, ಬಿಎಂಎಂ ಇಸ್ಪಾತ್ (ಎರಡು ಬಾರಿ) ಬಿಟಿಪಿಎಸ್ ಇನ್ನಿತರ ಹೆಸರಾಂತ ಕಾರ್ಖಾನೆಗಳು ಪ್ರತಿ ವರ್ಷ ಸುರಕ್ಷತಾ ಕಾರ್ಯಕ್ರಮ ಮತ್ತು ವಲಯ ಮಟ್ಟದ ಸುರಕ್ಷತಾ ದಿನಾಚರಣೆಗಳನ್ನು, ಸ್ಪರ್ಧೆಗಳು, ಅಣುಕು ಪ್ರದರ್ಶನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇದರಡಿಯಲ್ಲಿ ಪ್ರತಿವರ್ಷ ಬಿಕೆ ರೈಸ್ ದಿನಾಚರಣೆ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುರಕ್ಷತೆಯಲ್ಲಿ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಈ ಬಾರಿ ಅಂದರೆ 2019-20 ನೇ ಸಾಲಿನ ಬಿಕೆರೈಸ್’ನ ಎಲ್ಲಾ ಕಾರ್ಯಕ್ರಮವನ್ನು ಮೆ.ಪ್ರಾಕ್ಸ್’ಏರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ವಹಿಸಿಕೊಂಡಿರುತ್ತದೆ. ಈ ವರ್ಷ ಹತ್ತು ಹಲವಾರು ಕಾರ್ಯಕ್ರಮದ ರೂಪುರೇಷೆಗಳನ್ನು ಆಯೋಜಿಸಿ, ಪ್ರಥಮ ಹಂತದಲ್ಲಿ ದಿನಾಂಕ ಸೆ.23ರಂದು ಒಂದು ದಿನದ ಸುರಕ್ಷತಾ ತರಬೇತಿ ಕಾರ್ಯಕ್ರಮ ವನ್ನು ಜಿಂದಾಲ್ ಕಾರ್ಖಾನೆಯ ಓಪಿಜಿ ಸೆಂಟರ್’ನಲ್ಲಿ ಆಯೋಜಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮಕ್ಕೆ ಬಳ್ಳಾರಿ ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಖಾನೆಯ ಸುಮಾರು 190 ಉದ್ಯೋಗಿಗಳು ಭಾಗವಹಿಸಿದ್ದರು.ತರಬೇತಿ ಕಾರ್ಯಕ್ರಮವನ್ನು ಎಂ.ಎಸ್. ಮಹಾದೇವ್ ಉಪ ನಿರ್ದೇಶಕರು, ಕಾರ್ಖಾನೆಗಳ ವಿಭಾಗ ಬಳ್ಳಾರಿ ಮತ್ತು ಕೊಪ್ಪಳ ಡಿವಿಜನ್, ಬಳ್ಳಾರಿ, ಜಿಂದಾಲ್ ಕಾರ್ಖಾನೆಯ ಪ್ರೆಸಿಡೆಂಟ್ ರಾಜಶೇಖರ ಪಟ್ಟಣಶೆಟ್ಟಿ, ಪ್ರಾಕ್ಸೇರ್ ಕಾರ್ಖಾನೆಯ ಜನರಲ್ ಮ್ಯಾನೇಜರ್ ಭೀಮೇಶ್ವರ ರೆಡ್ಡಿ, ಜಿಂದಾಲ್ ಸುರಕ್ಷತೆ ವಿಭಾಗದ ಜನರಲ್ ಮ್ಯಾನೇಜರ್ ಸಂಪತ್ ಕುಮಾರ್ ಮತ್ತು ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಸಾದಿಕ್ ಸಾಬ್ ಬಡಿಗೇರ್ ಮತ್ತು ಶೇಷಾದ್ರಿ ಶೇಕರ್ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಉದ್ಘಾಟನಾ ನಂತರ ಸುರಕ್ಷತೆ ಮತ್ತು ಮಹತ್ವದ ಬಗ್ಗೆ ವೇದಿಕೆಯ ಮೇಲೆ ಆಸಿನರಾಗಿದ್ದ ಅತಿಥಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು. ನಂತರ 10 ಘಂಟೆಯಿಂದ ಸುರಕ್ಷತಾ ವಿಷಯದ ಮೇಲೆ ಉಪನ್ಯಾಸ ಪ್ರಾರಂಭವಾಗಿ ಸಂಜೆ 6.00 ಘಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಜಿಂದಾಲ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಸಿನ್ನಾರವರ ಅಧ್ಯಕ್ಷತೆಯಲ್ಲಿ ಮುಕ್ತಾಯ ಸಮಾರಂಭ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಣೆ ನೆರವೇರಿತು.
ಈ ಕಾರ್ಯಕ್ರಮ ಯಶಸ್ವಿಗೆ ಕಾರಣಿಕರ್ತರಿಗೆ ಬಿ.ಕೆ. ರೈಸ್ ಸಮಿತಿಯಿಂದ ಪ್ರಾಕ್ಸೆಎರ್ ಕಂಪನಿಯ ಆಡಳಿತ ಮಂಡಳಿ ಮತ್ತು ಸುರಕ್ಷತಾ ವಿಭಾಗ ಮತ್ತು ಬಳ್ಳಾರಿ ವಿಭಾಗದ ಕಾರ್ಖಾನೆಗಳ ಇಲಾಖೆಯ ಉಪನಿರ್ಧೇಶಕರಾದ ಎಂ.ಎಸ್. ಮಹದೇವ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
(ವರದಿ: ಮುರಳಿಧರ್ ನಾಡಿಗೇರ್, ಹೊಸಪೇಟೆ)
Discussion about this post