ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸದ್ಗುರು ಫೌಂಡೇಷನ್, ಸದ್ಗುರು ಚಿಕಿತ್ಸಾಲಯದ ಸಹಯೋಗದೊಂದಿಗೆ ಸತತ ಮೂರು ವರ್ಷಗಳಿಂದ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಸರ್ಕಾರೇತರ ಸಂಸ್ಥೆಯಾಗಿದ್ದು ಉಚಿತ ಹೆಲ್ತ್ ಚೆಕಪ್ ಕ್ಯಾಂಪ್, ಆಯುರ್ವೇದದಿಂದ ಆರೋಗ್ಯ ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಜನ ಸಂಖ್ಯಾ ದಿನ ಪರಿಸರ ದಿನ ಯೋಗ ದಿನ ಹೀಗೆ ವಿಶೇಷ ದಿನಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಈ ಕೊರೋನಾ ಸಂಕಷ್ಟದಲ್ಲೂ ಕೂಡ ಸಾರ್ವಜನಿಕರು ಅದರಲ್ಲೂ ಸ್ತ್ರೀಯರು ಮನೆಯಲ್ಲೇ ಕುಳಿತು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಪ್ರೇರಪಣೆ ನೀಡಿದೆ.
ಸದ್ಗುರು ಫೌಂಡೇಷನ್’ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಮತ್ತು ಆಯುರ್ವೇದ ತಜ್ಞರಾದ ಶ್ರೀಮತಿ ಚಿತ್ರಲೇಖಾ ವೆಂಕಟಕೃಷ್ಣ ಶಿವಮೊಗ್ಗದಲ್ಲಿ ಚಿರಪರಿಚಿತ ಹೆಸರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇವರು ತಮ್ಮಂತಯೇ ಅಭಿರುಚಿ ಹೊಂದಿರುವ ಶಿವಮೊಗ್ಗದ ಆರು ಜನ ಮಹಿಳಾ ಆಯುರ್ವೇದ ತಜ್ಞರ ಜೊತೆಗೂಡಿ ಸ್ತ್ರೀತ್ವ 2020 ಎಂಬ ಸ್ತ್ರೀಯರ ಸಂಪೂರ್ಣ ಆರೋಗ್ಯ ಕುರಿತಾದಂತಹ ವಿಶಿಷ್ಟ ಕಾರ್ಯಕ್ರಮ ವನ್ನು ಫೇಸ್’ಬುಕ್ ಲೈವ್’ನಲ್ಲಿ ಜೂನ್ 15 ರಿಂದ ಜೂನ್ 21 ರವರೆಗೆ ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ನೆಡಿಸಿ ಕೊಟ್ಟರು. ನಿಜಕ್ಕೂ ಇದು ಸ್ತ್ರೀಯರಿಗೆ ತುಂಬ ಉಪಯುಕ್ತ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಕಾರ್ಯಕ್ರಮವಾಗಿತ್ತು.
ಡಾ.ಶ್ರೀಲಕ್ಷ್ಮೀ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಇವರು ವುಮೆನ್ಸ್ ವೆಲ್’ನೆಸ್ ಎಂಬ ಮಹಿಳೆಯರ ಸಂಪೂರ್ಣ ಆರೋಗ್ಯ ಕುರಿತಾದ ಕಾರ್ಯಕ್ರಮವನ್ನು ಮಹಿಳೆ ಈ ಆಧುನಿಕ ಮತ್ತು ಧಾವಂತದ ಬದುಕಿನಲ್ಲಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಮನೆಯವರ ಯೋಗಕ್ಷೇಮವನ್ನೂ ನೋಡಿಕೊಂಡು ತನಗೆ ಎದುರಾಗುವ ಆರೋಗ್ಯದ ಸವಾಲುಗಳನ್ನು ಹೇಗೆ ನಿಭಾಯಿಸಿಕೊಳ್ಳಬಹುದು ಎಂದು ತುಂಬಾ ಮನಮುಟ್ಟುವಂತೆ ವಿವರಿಸಿದರು.
ಮೈಸೂರು ಆಯುರ್ವೇದ ಚಿಕಿತ್ಸಾಲಯದ ಡಾ.ಪ್ರಕೃತಿ ಮಂಚಾಲೆ ಮಾತನಾಡಿ, ಋತುಚಕ್ರ ಮತ್ತು ಮನೋ ದೈಹಿಕ ಸ್ವಾಸ್ಥ್ಯ ಎಂಬ ವಿಷಯವನ್ನು ತೆಗೆದುಕೊಂಡು ಋತುಚಕ್ರ ಶುರುವಾದಾಗಿನಿಂದ ಮೆನೋಪಾಸ್ ಹಂತದವರೆಗೆ ಮಹಿಳೆ ಎದುರಿಸಬೇಕಾದ ಸವಾಲುಗಳು ಅದಕ್ಕೆ ಹಲವಾರು ಪರಿಹಾರೋಪಾಯಗಳು ಆ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ಜೊತೆ ಮನಸ್ಸಿನ ಆರೋಗ್ಯ ಕೂಡ ಹೇಗೆ ಕಾಪಾಡಿಕೊಳ್ಳಬೇಕು ಎಂದರು.
ಧವಳ ಪೆಂಟಾಕೇರ್ ಆಯುರ್ವೇದಿಕ್ ಟ್ರೀಟ್’ಮೆಂಟ್ ಸೆಂಟರ್’ನ ಡಾ.ರೋಹಿಣಿ ಗುರುರಾಜ ಮಾತನಾಡಿ, ಮಧ್ಯ ವಯಸ್ಸು ದಾಟಿದ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಋತುಬಂಧ ಮತ್ತು ಹಾರ್ಮೋನುಗಳ ಏರುಪೇರಿನಿಂದ ಆಗುವ ಬದಲಾವಣೆಗಳು ಅದನ್ನು ನಿಭಾಯಿಸುವ ಬಗೆ ಇದರ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದರು.
ಆಯುರ್ವೇದ ತಜ್ಞರಾದ ಡಾ.ಚೈತ್ರಾ ಜೀವನ್ ಮಾತನಾಡಿ, ಮಾನಸ ರೋಗದಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿರುವ ಇವರು ಮಹಿಳೆಯರಲ್ಲಿ ಉಂಟಾಗುವ ಖಿನ್ನತೆ ಅದಕ್ಕೆ ಕಾರಣ ಮತ್ತು ಪರಿಹಾರ ಎಂಬ ವಿಷಯವಾಗಿ ಉಪಯುಕ್ತ ಮಾಹಿತಿ ಒದಗಿಸಿದರು.
ಆಯುರ್ವೇದ ತಜ್ಞರಾದ ಡಾ.ಮೈಥಿಲಿ ಪೂರ್ಣಚಂದ್ರ ಮಾತನಾಡಿ, ಋತುಚಕ್ರದಲ್ಲಿ ದೈಹಿಕ ಸ್ವಚ್ಛತೆ ಮತ್ತು ಪರ್ಯಾವರಣ ಶುಚಿತ್ವ ಎಂಬ ವಿಷಯವಾಗಿ ಸ್ತ್ರೀಯರಿಗೇ ಗೊತ್ತಿಲ್ಲದ ಅನೇಕ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ಸದ್ಗುರು ಫೌಂಡೇಷನ್’ನ ಪ್ರೋಕ್ಟೋಲಾಜಿಸ್ಟ್ ಹಾಗೂ ಟ್ರಸ್ಟಿ ಡಾ. ರಂಜಿನಿ ಬಿದರಳ್ಳಿ ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ಮೂಲವ್ಯಾಧಿ ಎಂಬ ವಿಷಯವಾಗಿ ಅನೇಕ ಉಪಯುಕ್ತ ಮಾಹಿತಿಯನ್ನು ಒದಗಿಸಿದರು.
ಸದ್ಗುರು ಚಿಕಿತ್ಸಾಲಯ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಡಾ.ಚಿತ್ರಲೇಖಾ ವಿ. ಕೃಷ್ಣ ಮಾತನಾಡಿ, ಹೆಣ್ಣಿನ ಜೀವನದಲ್ಲಿ ಬಹುಮುಖ್ಯವಾದಂತಹ ರಸಜ್ವಲಾ ಚರ್ಯೆ ಎಂಬ ವಿಷಯವನ್ನು ತೆಗೆದುಕೊಂಡು ಆ ಸಮಯದಲ್ಲಿ ಹೆಣ್ಣಿನ ಮನಃಸ್ಥಿತಿ, ದೈಹಿಕ ಸ್ಥಿತಿ ಅದನ್ನು ನಿಭಾಯಿಸುವ ರೀತಿ. ಅನುಸರಿಸಬೇಕಾದ ಕೆಲವು ವಿಷಯಗಳು ಇದರ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ಸಪ್ತ ದಿನಗಳು ಸಪ್ತಮಾತೆಯರು ತಮ್ಮ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ಅನೇಕ ಮಾಹಿತಿಗಳನ್ನು ಕಲೆಹಾಕಿ ಸ್ತ್ರೀಯರಿಗೆ ಬಹಳವೇ ಉಪಯುಕ್ತವಾದಂತಹ ಈ ಕಾರ್ಯಕ್ರಮವನ್ನು ಈ ಲಾಕ್ ಡೌನ್ ಸಮಯದಲ್ಲಿ ಸ್ತ್ರೀಯರು ಮನೆಯಲ್ಲೇ ಕುಳಿತು ಲೈವ್ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಮಾಡಿಕೊಟ್ಟರು. ಸದ್ಗುರು ಫೌಂಡೇಷನ್ ನೆಡೆಸಿಕೊಟ್ಟ ಈ ವಿಶಿಷ್ಟ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಈ ಎಲ್ಲಾ ಮಹಿಳಾ ಡಾಕ್ಟರ್’ಗಳಿಂದ ಇನ್ನಷ್ಟು ಇಂತಹ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ. ಅವರ ಈ ಕಾರ್ಯದಲ್ಲಿ ಕೈ ಜೋಡಿಸಿದ ಸದ್ಗುರು ಫೌಂಡೇಶನ್ ಅಧ್ಯಕ್ಷರಾದ ಎಚ್.ಜಿ. ನಾಗರಾಜ್ ಅವರಿಗೂ ಅಭಿನಂದನೆಗಳು. ಫೇಸ್’ಬುಕ್’ನ ಸದ್ಗುರು ಫೌಂಡೇಷನ್ ಎಂಬ ಅವರದೇ ವೆಬ್’ಸೈಟ್’ನಲ್ಲಿ ಈ ಕಾರ್ಯಕ್ರಮದ ಅಷ್ಟೂ ವಿಡಿಯೋಗಳು ಸಾರ್ವಜನಿಕರಿಗೆ ಲಭ್ಯವಿದೆ. ವೀಕ್ಷಿಸಿ ಉಪಯೋಗ ಪಡೆದುಕೊಳ್ಳಬಹುದು.
ಲೇಖನ: ಕೆ.ಎಚ್. ಸುಮರಾಣಿ, ಶಿವಮೊಗ್ಗ
Get In Touch With Us info@kalpa.news Whatsapp: 9481252093
Discussion about this post