ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಂಸತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 141 ಸಂಸದರನ್ನು ಅಮಾನತು ಮಾಡಿರುವ ಕ್ರಮ ಸರ್ವಾಧಿಕಾರವನ್ನೂ ಸಹ ಮೀರಿದ್ದು ಎಂದು ಸಿಎಂ ಸಿದ್ದರಾಮಯ್ಯ #Siddharamaiah ಕಿಡಿ ಕಾರಿದ್ದಾರೆ.
ಈ ಕುರಿತಂತೆ ನವದೆಹಲಿಯಲ್ಲಿ ಮಾತನಾಡಿರುವ ಅವರು, ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ 141 ಸಂಸದರನ್ನು ಒಂದೇ ಬಾರಿಗೆ ಅಮಾನತ್ತು ಮಾಡಿದ ಉದಾಹರಣೆ ಇಲ್ಲ. 141 ಮಂದಿ ಸಂಸದರನ್ನು ಅಮಾನತ್ತು ಮಾಡಿರುವುದು ಸರ್ವಾಧಿಕಾರವನ್ನೂ #Dictatorship ಮೀರಿದ ಕ್ರಮ. ಇದನ್ನು ಪ್ರಜಾಪ್ರಭುತ್ವ #Democracy ಅಂತ ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಚರ್ಚೆ ಪ್ರಜಾಪ್ರಭುತ್ವದ ಮೂಲ. ಒಳ್ಳೆ ಸರ್ಕಾರ ಬಲವಾದ ವಿರೋಧ ಪಕ್ಷ ಇದ್ದಾಗ ಮಾತ್ರ ಸಾಧ್ಯ. ಸರ್ಕಾರದ ತಪ್ಪುಗಳನ್ನು ಹೇಳುವಂಥಾ ಆರೋಗ್ಯಪೂರ್ಣ ವಾತಾವರಣ ಇರಬೇಕು. ಅವರ ಪಕ್ಷದ ಸಂಸದರುಗಳನ್ನು ಮಾತ್ರ ಇಟ್ಟುಕೊಂಡು ಸಂಸತ್ ನಡೆಸುವುದು ನಾಚಿಕೆಗೇಡು ಎಂದರು.
ಜಾತಿ ಗಣತಿ ವರದಿ ಇನ್ನೂ ಕೊಟ್ಟಿಲ್ಲ. ಕೆಲವರು ಊಹೆ ಮಾಡಿಕೊಂಡು ವಿರೋಧ ಮಾಡ್ತಿದ್ದಾರೆ. ಅವರು ವರದಿ ಯಾವಾಗ ಕೊಡ್ತಾರೆ ಎನ್ನುವುದು ಖಚಿತವಾಗಿ ಕೊಟ್ಟಿಲ್ಲ ಎಂದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post