ಮುಂಬೈ: ಭಾರತೀಯ ಚಿತ್ರರಂಗದ ಹಾಲಿನ ಬಣ್ಣದ ಚೆಲುವೆ ತಮನ್ನಾ ಭಾಟಿಯಾ ಅಮೆರಿಕಾ ಮೂಲಕ ಫಿಸಿಷಿಯನ್‌ವೊಬ್ಬರನ್ನು ವಿವಾಹವಾಗುತ್ತಾರೆ ಎಂದು ಸುದ್ದಿಗಳನ್ನು ನಿನ್ನೆಯಿಂದ ಕೇಳಿದ್ದೀರಿ. ಆದರೆ, ಈ ವಿಚಾರವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ತಮನ್ನಾ, ಸದ್ಯಕ್ಕೆ ವಿವಾಹವಾಗುವ ಯೋಚನೆಯಿಲ್ಲ ಎಂದಿದ್ದಾರೆ.
ಈ ಕುರಿತಂತೆ ಇಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ತಮನ್ನಾ, ನಾನು ಅಮೆರಿಕಾ ವ್ಯಕ್ತಿಯನ್ನು ವಿವಾಹವಾಗುತ್ತಿದ್ದೇನೆ ಎಂಬ ವಿಚಾರ ಕೇವಲ ರೂಮರ್. ಇಂತಹ ರೂಮರ್ ಗಳಿಗೆ ಪ್ರತಿಕ್ರಿಯೆ ನೀಡುವ ಸಮಯ ನನಗೆ ಇಲ್ಲ ಎಂದಿದ್ದಾರೆ.
ಒಂದು ದಿನ ನಟ, ಇನ್ನೊಂದು ದಿನ ಕ್ರಿಕೆಟರ್, ಮತ್ತೊಂದು ದಿನ ಡಾಕ್ಟರ್… ಹೀಗೆ ಒಂದೊಂದು ದಿನ ಅವರನ್ನು ವಿವಾಹವಾಗುತ್ತೇನೆ ಎಂದು ಸುದ್ದಿಗಳು ಬರುತ್ತಲೇ ಇವೆ. ಇಂತಹ ರೂಮರ್ ಗಳಿಗೆ ಸ್ಪಷ್ಟೀಕರಣ ನೀಡುವ ಸಮಯ ನನಗೆ ಇಲ್ಲ ಎಂದಿದ್ದಾರೆ.
ನಾನು ಒಬ್ಬಳೇ ಆರಾಮವಾಗಿದ್ದು, ಈಗಲೇ ಸಂತೋಷವಾಗಿದ್ದೇನೆ. ನನ್ನ ಪೋಷಕರೂ ಸಹ ನನಗಾಗಿ ವರನನ್ನು ಹುಡುಕುತ್ತಿಲ್ಲ. ನಾನು ಅಮೆರಿಕಾ ಮೂಲಕ ವೈದ್ಯನನ್ನು ವಿವಾಹವಾಗುತ್ತೇನೆ ಎಂಬ ಸುದ್ದಿ ಆಧಾರ ರಹಿತವಾದುದು ಎಂದು 28 ವರ್ಷದ ಈ ಮುದ್ದು ನಟಿ ಸ್ಪಷ್ಟೀಕರಣ ನೀಡಿದ್ದಾರೆ.
Discussion about this post