ಕಲ್ಪ ಮೀಡಿಯಾ ಹೌಸ್
ತೆಲಂಗಾಣ : ಸೆಲ್ಪಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೂವರು ಸಹೋದರಿಯರು ದುರಂತವಾಗಿ ಸಾವಿಗೀಡಾಗಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಸಿಂಗಂಗಾವ್‌ನಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಪಿ ಪೋಟೋಗಳನ್ನು ಹಾಕಿಕೊಳ್ಳಲು ಮೂವರು ಸಹೋದರಿಯರು ಕೆರೆಯ ಸಮೀಪದಲ್ಲಿ ಸೆಲ್ಪಿ ಕ್ಲಿಕ್ಕಿಸುವಾಗಿ ಈ ದುರಂತ ನಡೆಸಿದ್ದು, ಎಲಿಮ್ ಸುನೀತಾ (16), ಆಕೆಯ ಸಹೋದರಿ ವೈಶಾಲಿ (14) ಮತ್ತು ಅವರ ಸೋದರಸಂಬಂಧಿ ಅಂಜಲಿ (14) ಮೃತ ದುರ್ದೈವಿಗಳಾಗಿದ್ದಾರೆ.
ತಾಯಿ ಮಂಗಳಾಬಾಯಿ ಅವರ ಜೊತೆಯಲ್ಲಿ ತೋಟಕ್ಕೆ ಬಂದಿದ್ದ ಸುನಿತಾ, ವೈಶಾಲಿ ಹಾಗೂ ಅಂಜಲಿ, ಮಧ್ಯಾಹ್ನದ ವರೆಗೂ ಕೃಷಿ ಕೆಲಸ ಮಾಡಿ ನಂತರ ಕೆರೆಯ ಬಳಿಯಲ್ಲಿ ಸೆಲ್ಪಿ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ಮೂವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ತಾಯಿ ಕೆಲಸ ಮುಗಿಸಿಕೊಂಡು ಕೆರೆಯ ಬಳಿಗೆ ಬಂದಾಗ ಮಕ್ಕಳು ಅಲ್ಲಿ ಇಲ್ಲದಿರುವುದನ್ನು ಕಂಡು ಮನೆಗೆ ತೆರಳಿರಬಹುದು ಎಂದು ಭಾವಿಸಿದ್ದಾರೆ. ಆದರೆ ಮನೆಯಲ್ಲಿ ಮಕ್ಕಳು ಇಲ್ಲದಿರುವುದನ್ನು ಗಮನಿಸಿ ಆಘಾತಕ್ಕೆ ಒಳಗಾಗಿದ್ದಾರೆ. ಎಲ್ಲೆಡೆ ಹುಡುಕಾಡಿದ ನಂತರದಲ್ಲಿ ಸಹೋದರಿಯರು ಸಾವನ್ನಪ್ಪಿರೋ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಬಾಲಕಿಯರ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post