ಕಲ್ಪ ಮೀಡಿಯಾ ಹೌಸ್ | ಥೈಲ್ಯಾಂಡ್ |
ಮೂತ್ರ ವಿಸರ್ಜನೆಗೆಂದು ಇಳಿದ ಪತ್ನಿಯನ್ನೇ ಮರೆತ ಪತಿರಾಯನೊಬ್ಬ ಸುಮಾರು 150 ಕಿಮೀ ದೂರ ತೆರಳಿಹೋದ ಘಟನೆ ಇಲ್ಲಿ ನಡೆದಿದೆ.
ಕ್ರಿಸ್ಮಸ್ ದಿನದಂದು ಬೂಂಟೊಮ್ ಚೈಮೂನ್ ಮತ್ತು ಅವರ ಪತ್ನಿ ಅಮ್ನುಯೆ ಚೈಮೂನ್ ಮಹಾ ಸರಖಮ್ ಪ್ರಾಂತ್ಯದ ತಮ್ಮ ತವರು ಮನೆಗೆ ರಸ್ತೆ ಪ್ರವಾಸಕ್ಕೆ ಹೊರಟಾಗ ಈ ಘಟನೆ ನಡೆದಿದೆ.
ರಾತ್ರಿ ಪ್ರವಾಸಕ್ಕೆ ತೆರಳಿದ್ದ ಇಬ್ಬರೂ ನಸುಕಿನ 3 ಗಂಟೆ ವೇಳೆಯಲ್ಲಿ ಕಾಡಿನ ಮಧ್ಯೆ ತೆರಳುವಾಗ ಪತಿ ವಾಹನದಿಂದ ಇಳಿದು ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ. ಈ ವೇಳೆ ಪ್ರಶ್ನಿಸಿದ ಪತ್ನಿ, ಪೆಟ್ರೋಲ್ ಬಂಕ್’ನಲ್ಲೇ ಏಕೆ ನಿಲ್ಲಿಸಲಿಲ್ಲ ಎಂದಿದ್ದಾಳೆ. ಆದರೆ, ಇದಕ್ಕೆ ಪತಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.
ನಂತರ ಪತ್ನಿಯೂ ಸಹ ಕಾರಿನಿಂದ ಇಳಿದ ಕಾಡಿನ ಒಳಭಾಗಕ್ಕೆ ಸ್ವಲ್ಪ ದೂರು ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಆದರೆ, ಆಕೆ ವಾಹನದಿಂದ ಇಳಿದಿರುವುದನ್ನು ಗಮನಿಸದ ಪತಿ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ.
ಕಾಡಿನ ಒಳಭಾಗದಿಂದ ಬಂದ ಆಕೆ ಕಾರು ಹಾಗೂ ಗಂಡ ಇಲ್ಲದೇ ಇರುವುದನ್ನು ಕಂಡು ಗಾಬರಿಕೊಂಡು ಕೂಗಿದ್ದಾಳೆ. ಅಲ್ಲದೇ, ಆಕೆ ತನ್ನ ಮೊಬೈಲನ್ನು ಬ್ಯಾಗ್’ನಲ್ಲಿಯೇ ಇರಿಸಿರುವುದೂ ಸಹ ನೆನಪಿಗೆ ಬಂದಿದೆ.
ಆದರೆ, ನಸುಕಿನ ಕತ್ತಲ ಆ ಸಮಯದಲ್ಲಿ ಕಾಡಿನ ಮಧ್ಯೆ ಜನವೂ ಇಲ್ಲ. ಹೀಗಾಗಿ, ಬೇರೆ ದಾರಿ ಕಾಣದೇ ಆಕೆ ನಡೆದುಕೊಂಡೇ ತೆರಳಲು ನಿರ್ಧರಿಸಿ, ಕಾರು ಹೋದ ಮಾರ್ಗದಲ್ಲೇ ಸಾಗಿದ್ದಾಳೆ. ಸುಮಾರು 20 ಕಿಮೀ ದೂರ ನಡೆದು 5 ಗಂಟೆ ವೇಳೆಗೆ ಕಬಿನ್ ಬುರಿ ಎಂಬ ಜಿಲ್ಲೆ ತಲುಪಿ, ಅಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಅಲ್ಲಿಂದ ತನ್ನ ಪತಿಗೆ ಎಷ್ಟೇ ಕರೆ ಮಾಡಿದರೂ ಆತ ಪ್ರತಿಕ್ರಿಯೆ ನೀಡಿಲ್ಲ.
ಅಚ್ಚರಿಯ ವಿಚಾರ ಏನೆಂದರೆ, ಸುಮಾರು 8 ಗಂಟೆ ವೇಳೆಗೆ ಕರೆ ಸ್ವೀಕರಿಸಿದ ಪತಿಗೆ ತಾನು ಪತ್ನಿಯನ್ನು ಕಾಡಿನಲ್ಲೇ ಬಿಟ್ಟು ಬಂದಿರುವ ವಿಚಾರ ಆತನಿಗೂ ತಿಳಿದಿದ್ದು. ಆನಂತರ ಅಲ್ಲಿಗೆ ಮರಳಿದ ಪತಿ ತನ್ನ ಪತ್ನಿಯ ಬಳಿ ಕ್ಷಮೆ ಕೇಳಿ, ಕರೆದುಕೊಂಡು ಹೋಗಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post