ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸ್ಟೇಜ್ ಕಡೆ ಮುಖ ಹಾಕಿ ಕುಳಿತಿರುವ ಅಖಿಲ ಅಂಕಿತನನ್ನು ತದೇಖಚಿತ್ತಧಿಂದ ನೋಡುತ್ತಿದ್ದಳು. ಯಾಕೆಂದರೆ ಅಲ್ಲಿ ಸುಶ್ರಾವ್ಯ ಕಂಠದಿಂದ ಹಾಡುತ್ತಿದ್ದವನು ಅಂಕಿತ್. ಯಾರ ಬಗ್ಗೆನೂ ತಲೆಕೆಡಿಸಿಕೊಳ್ಳದ ಅಕಿಲಾಳಿಗೆ ಅಂಕಿತನ ಹಾಡು ಅವನ ಬಗ್ಗೆ ಚಿಂತಿಸುವಂತೆ ಮಾಡಿತ್ತು. ಯಾರಿವನು ಅಂಕಿತ್? ಯಾವ ಸೆಕ್ಷನ್? ಯಾವ ಕ್ಲಾಸ್? ಇದೇ ಅಲೋಚನೆಯಲ್ಲಿ ಮನೆಗೆ ಹೋದವಳಿಗೆ ಮರುದಿನ ಸರ್ಪ್ರೈಸ್ ಕಾದಿತ್ತು.
ಅಖಿಲ ತುಂಬಾ ಚೂಟಿ ಹುಡುಗಿ. ಸದಾ ಲವಲವಿಕೆ, ಎಲ್ಲರೊಂದಿಗೂ ಗೆಳೆತನ, ಯಾರನ್ನು ನೋಯಿಸದೆ ತನ್ನ ಕೆಲಸವಾಯಿತು ತಾನಾಯಿತು ಎನ್ನುವಂತೆ ಬೆಳೆದವಳು. ತಂದೆ ತಾಯಿ ಇಲ್ಲದ ಅಖಿಲ ಬೆಳೆದದ್ದು ಚಿಕ್ಕಮ್ಮನೊಂದಿಗೆ. ತುಂಬಾ ಕಷ್ಟ ನೀಡುತ್ತಿದ್ದರು ಕೂಡ ಎಲ್ಲವನ್ನು ಸಹಿಸಿಕೊಂಡು ನಗುತ್ತಿದ್ದಳು. ಕಾಲೇಜಿನಲ್ಲಿ ಬಿಎಸ್’ಸಿ ಓದುತ್ತಿರುವ ಹುಡುಗಿ ಅಖಿಲ, ಕಾಲೇಜಿನ ಎಲ್ಲ ಕಾರ್ಯಕ್ರಮದಲ್ಲೂ ಮುಂದೆ ಇರುತಿದ್ದಳು.
ಆ ದಿನ college ಡೇ. ಮೂರು ದಿನದ ಸಂಭ್ರಮವದು. skit, dance, fashion show, fancy dress ಹೀಗೆ ಎಲ್ಲದರಲ್ಲಿಯೂ ಎರಡನೇ ದಿನ ಪಾಲ್ಗೊಂಡಿದ್ದಳು. ಮರುದಿನ ನಾಟಕ ಇದ್ದಿದುರಿಂದ ಮನೆಗೆ ಹೊರಡುವಾಗ ಸಂಜೆ ತಡವಾಯಿತು. ಹಾಗೆ ಕೊನೆಯ ಬಸ್ ಕೂಡ ತಪ್ಪಿ ಹೋಗಬಹುದು ಎಂದು ವೇಗವಾಗಿ ಬಸ್ ಸ್ಟಾಂಡ್’ಗೆ ಬಂದವಳಿಗೆ ಅಲ್ಲಿ ಅಂಕಿತನನ್ನು ನೋಡಿ ತನ್ನ ಕಣ್ಣನ್ನೇ ನಂಬದಾದಳು. ಯಾಕೆಂದರೆ ಮೊದಲನೇ ದಿನದ ಅವನ ಹಾಡು ಅವಳನ್ನು ಚಿಂತಿಸುವಂತೆ ಮಾಡಿತ್ತು. ಕನಸೋ ಎಂಬಂತೆ ಅಂಕಿತ್ ಹತ್ತಿರ ಬಂದು ಅಖಿಲ ಮನೆಗೆ ಹೋಪುಕೆ ಲಾಸ್ಟ್ ಬಸ್ ಬಪ್ಪುಕೆ ಇನ್ನು ಐದ ನಿಮ್ಶು ಇತ್ತ ಎಂದಾಗ ಅಶ್ಚರ್ಯದಿಂದ ಅವನ ಮುಖ ನೋಡಿದಳು.
ಹೌದು ಅಖಿಲ.. ನಾನು ನಿಮ್ಮ ಉರಿನವನೆ. ನಿನ್ನನ್ನ ನೋಡಿದ್ದೆ ತುಂಬಾ ಸಲ ಎಂದಾಗ ಮನಸ್ಸು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿತ್ತು. ಹಾಗೆ ಮಾತನಾಡುತ್ತ five minutes ಆದರೂ ಬಸ್ಸು ಬಂದಿರಲಿಲ್ಲ. ಆಗ ಅಂಕಿತ್ ಬಾ ಅಖಿಲ ನನ್ನ ಬೈಕಲ್ಲಿ ನಿನ್ನ ಡ್ರಾಪ್ ಮಾಡ್ತೇನೆ ಮನೆತನಕ ಎಂದಾಗ ಇಲ್ಲ ಬೇಡ ಬಸ್ ಬರಬಹುದು ಬಂದಿಲ್ಲ ಅಂದ್ರೆ ನೋಡೋಣ ಎನ್ನುತ್ತಾಳೆ ಅಖಿಲ. ಕೊನೆಗೆ ಅಕಿಲಾಳ ಮನೆ ಕಡೆ ಹೋಗುವ ಬಸ್ ಬಂದಿದ್ದರಿಂದ ಅಂಕಿತ್ ಅವಳು ಬಸ್ ಹತ್ತುವ ತನಕ ಇದ್ದು ಅಲ್ಲಿಂದ ಹೊರಡುತ್ತಾನೆ.
ಮತ್ತೆ ಮರುದಿನ ಕಾಲೇಜಿನಲ್ಲಿ ಅಂಕಿತ್ ಸಿಗಬಹುದೇನೋ ಎಂದು ನೋಡುತ್ತಾಳೆ ಅಖಿಲ. ಹಾಗೆ ದಿನ ಹುಡುಕಿದರೂ ಅಂಕಿತ್ ಸಿಗುವುದಿಲ್ಲ ಹಾಗೂ ಹೀಗೂ ಕಾಲೇಜು ಜೀವನ ಮುಗಿಯುತ್ತದೆ.
Bsc ಮುಗಿದ ನಂತರ ಚಿಕ್ಕಪ್ಪನಿಗೆ ಅವಳನ್ನು Msc ಸೇರಿಸಬೇಕು ಎನ್ನುವ ಆಸೆ. ಅಕಿಲಾಳ ಆಸೆ ಕೂಡ ಅದೇ ಆಗಿತ್ತು. ಚಿಕ್ಕಮ್ಮ ಇಲ್ಲ ಮನೆ ಕೆಲಸ ಮಾಡಿಕೊಂಡು ಇದ್ದುಬಿಡು ಎಂದು ಹೇಳಿದರೂ ದರ್ಯ ಮಾಡಿ ಚಿಕ್ಕಮ್ಮನ ಮಾತು ಕೇಳಿಸಿಕೊಳ್ಳದೆ ಬ್ಯಾಂಕಿನಿಂದ ಸಾಲ ಮಾಡಿ ಉನ್ನತ ವ್ಯಾಸಂಗ ಮಾಡಲು ಮುನ್ನೆಡೆದಿದ್ದಳು.
ಅಲ್ಲಿ ಕೂಡ ತುಂಬಾ ಆಕ್ಟಿವ್(active). ಪ್ರೊಫೆಸರ್ ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗಿ. ಆದರೆ ನನ್ನವರು ತನ್ನವರು ಅಂತ ಯಾರು ಇಲ್ಲ. ಯಾಕೆಂದರೆ ಚಿಕ್ಕಮ್ಮ ಚಿಕ್ಕಪ್ಪನಿಗೆ ಇವಳೊಂದಿಗೆ ಮಾತನಾಡಲು ಬಿಡುತ್ತಿರಲಿಲ್ಲ. ಎಷ್ಟೋ ದಿನ ಅಳುತಿದ್ದಳು. ಸಹಪಾಠಿಗಳು ತಾಯಿಯ ಬಗ್ಗೆ ಹೇಳುತ್ತಿದ್ದರೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತಿದ್ದಳು. ಆದರೆ ಯಾರ ಬಳಿಯೂ ತನ್ನ ಜೀವನ ಹೀಗೆ ಅಂತ ಹೇಳಿಕೊಂಡವಳಲ್ಲ.ನೋವಿನಲ್ಲೇ ಕೊರಗುತ್ತಿದ್ದಳು. ಆದರೆ ಅವಳನ್ನು ಪ್ರೀತಿಸುವ ಹಲವು ಜೀವಗಳು ಅಲ್ಲಿದ್ದವು.
ತಾಯಿಯ ಪ್ರೀತಿಯ ಹುಡುಕುತ್ತಿದ್ದ ಅಕಿಲಾಳಿಗೆ ಆಕಸ್ಮಿಕವಾಗಿ facebookನಲ್ಲಿ ಅದೊಂದು ದಿನ ಅಂಕಿತ್’ನ ಮೆಸೇಜ್ ಬಂದಿರುತ್ತದೆ. ಆ ಕ್ಷಣ ಅಕಿಲಾಳಿಗೆ ಏನಾಗಿತ್ತೋ ಏನೋ ಹಾಯ್ ಅಣ್ಣ ಅಂತ reply ನೀಡುತ್ತಾಳೆ. ಹಾಗೆ ಸ್ವಲ್ಪ ಮಾತಾಡಿ ಮೊದಲ ದಿನ ಇಬ್ಬರು ಸುಮ್ಮನಾಗುತ್ತಾರೆ.
ಮರುದಿನ ಬೆಳಿಗ್ಗೆ ಅಂಕಿತ್ ಅಕಿಲಾಳಿಗೆ ಅಖಿಲ ನೀನು ಅಣ್ಣ ಅಂತ ಕರಿಬೇಡ ಅದು ನನಗೆ ಇಷ್ಟ ಇಲ್ಲ ಸೋನು ಅಂತ ಕರಿ ಎನ್ನುತ್ತಾನೆ. ಹಾಗೆ ಇಬ್ಬರ ನಡುವಿನ ಮಾತುಕತೆ ದಿನಾಲು ಮುಂದುವರೆಯುತ್ತದೆ. ಹಾಗೆ ಉನ್ನತ ವಿದ್ಯಾಭ್ಯಾಸ ಮುಗಿಸಿದ ಅಕಿಲಾಗೆ ಆ ವರ್ಷದ ಕ್ಯಾಂಪಸ್ ಇಂಟರ್ವ್ಯೂವ್’ನಲ್ಲಿ ಕೆಲಸ ಸಿಗುತ್ತದೆ. ಅದು ಬೆಂಗಳೂರಿನ ಒಂದು ಪ್ರತಿಷ್ಠಿತ ಕಂಪೆನಿಯಲ್ಲಿ. ಹಾಗೆ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಕೂಡ ಲೆಕ್ಟುರರ್ ಕೆಲಸ ಸಿಗುತ್ತದೆ. ಹಾಗಾದರೆ ಸಿಕ್ಕಿರುವ ಎರಡು ಕೆಲಸಗಳಲ್ಲಿ ಯಾವುದಕ್ಕೆ ಸೇರಲ್ಲಿ ಎಂದು ಯೋಚಿಸುತ್ತಾ ಅಂಕಿತ್’ಗೆ call ಮಾಡುತ್ತಾಳೆ. ಬೆಂಗಳೂರಿಗೆ ಬಾ ಅಖಿಲ ಇಲ್ಲಿ ತುಂಬಾ opportunity ಇರತ್ತೆ ಅನ್ನುತ್ತಾನೆ ಅಂಕಿತ್. ಅವನು ಕೂಡ ಬೆಂಗ್ಳೂರಲ್ಲೇ ಕೆಲಸ ಮಾಡ್ತಿರ್ತಾನೆ. ಹಾಗೆ ಕಂಪೆನಿಯಲ್ಲೇ ಕೆಲಸ ಮಾಡುವ ನಿರ್ಧಾರ ಮಾಡುತ್ತಾಳೆ ಅಖಿಲ.
ಹಲವು ದಿನಗಳ ಬಳಿಕ ಅಖಿಲ ಬೆಂಗಳೂರಿಗೆ ಆಗಮಿಸುತ್ತಾಳೆ. ಬೆಂಗಳೂರು ಹೊಸದು. ತನ್ನ ಕಾಲೇಜು ಸೀನಿಯರ್ ಒಬ್ಬರ ಸಹಾಯದಿಂದ ಪೀಜಿಗೆ ಸೇರುತ್ತಾಳೆ. ಪಿಜಿ ಹೊಸದು. ಬೆಂಗಳೂರು ಹೊಸದು. ತನ್ನವರು ಎನ್ನುವವರು ಯಾರೂ ಇಲ್ಲ. ಅಂಕಿತ್’ಗೆ ಕಾಲ್ ಮಾಡುತ್ತಾಳೆ. ಹೆದ್ರಕೋಬೇಡ ಅಖಿಲ ಹುಷಾರಾಗಿರು, ನಾನಿಧಿನಲ್ಲ ಇಲ್ಲಿ, ಯಾಕೇ ಭಯ ಅಂತ ಸೋನು ಅರ್ಥಾತ್ ಅಂಕಿತ್ ಹೇಳುತ್ತಾನೆ. ನಂತರ ಅಂಕಿತ ಕಂಪೆನಿಯ ಕೆಲಸಕ್ಕೆ ಸೇರುತ್ತಾಳೆ. ಕಂಪೆನಿಯ ಕೆಲಸದಲ್ಲಿ ಖುಷಿ ಕಾಣುತ್ತಾಳೆ. ಹೀಗೆ ದಿನಗಳು ಉರುಳುತ್ತಿತ್ತು. ಇಬ್ಬರ ಗೆಳತನ ಇನ್ನಷ್ಟು ಬಲಿಷ್ಠವಾಗುತ್ತಿತ್ತು.
ಅದೊಂದು ದಿನ ಅಂಕಿತ್ ಅಖಿಲ ಬೆಂಗಳೂರಲ್ಲಿ ಮೊದಲ ಬಾರಿಗೆ ಭೇಟಿ ಮಾಡುವ ನಿರ್ಧಾರ ಮಾಡುತ್ತಾರೆ. ಅಂಕಿತ ಖುಷಿಖುಷಿಯಿಂದ ಜೀವದ ಗೆಳೆಯನನ್ನು ಭೇಟಿ ಮಾಡ್ತಾಳೆ. ಮನಸ್ಸು ಬಿಚ್ಚಿ ಮಾತನಾಡುತ್ತಾಳ್ಳೆ. ಫಸ್ಟ್ ಟೈಮ್ ಒಂದು ಹುಡುಗನ ಜೊತೆ ತುಂಬಾ ಸಲಿಗೆಯಿಂದ ಮಾತನಾಡಿದ ದಿನವದಾಗಿತ್ತು. ಸ್ವಲ್ಪ ಹೊತ್ತು ಮಾತನಾಡಿ ಭಾರವಾದ ಮನಸ್ಸಿನಿಂದ ಅಂಕಿತ ತನ್ನ ಪಿಜಿಗೆ ಹಿಂದಿರುಗುತ್ತಾಲೆ.
ಮೊದಲ ಬಾರಿಗೆ ಅಂಕಿತ್’ನ ಬೇಟಿ ಅಕಿಲಾಳಿಗೆ ಚಿಂತಿಸುವಂತೆ ಮಾಡಿತ್ತು. ಇಷ್ಟೊಂದು care ಮಾಡುವ ಗೆಳೆಯ ಜೀವನಪೂರ್ತಿ ತನ್ನ ಜೊತೆಯಲ್ಲಿರಲಿ. ಯಾರು ಇಲ್ಲದ ತನಗೆ ಅಸರೆಯಾಗಿರಲಿ ಎಂದು ಅಂದುಕೊಂಡಿದ್ದಳು. ಆದರೆ ಅವಳಿಗೆ ಅದನ್ನು ಕೇಳುವ ಧೈರ್ಯ ಇರಲಿಲ್ಲ. ಕೇಳಿದರೆ ಎಲ್ಲಿ ಅಂಕಿತ್’ನ ಗೆಳೆತನ ದೂರ ಮಾಡಿಕೊಳ್ಳುವೆನೇನೋ ಎನ್ನುವ ಭಯ.
ದಿನಕಳೆದಂತೆ ಅಂಕಿತ್ ದಿನಕ್ಕೆ ಎರಡು ಮೂರು ಬಾರಿ ಕಾಲ್ ಮಾಡುತ್ತಿದ್ದ. ಅಕಿಲಾಳಿಗೆ ತುಂಬಾ ಸಂತೋಷವಾಗುತ್ತಿತ್ತು. ಸಂಜೆ ಪಿಜಿಗೆ ಬಂದ ಮೇಲೆ ಅಂಕಿತನ ಜೊತೆ ತುಂಬಾ ಮಾತನಾಡುತ್ತಿದ್ದಳು. ತಾನು ಅನಾಥೆ ಅಲ್ಲ ನನ್ನ ಅಂಕಿತ್ ನನ್ನ ಜೊತೆ ಇರುವವರೆಗೂ ಅಂದುಕೊಳ್ಳುತಿದ್ದಳು. ಮಾತನಾಡಿ ಕಾಲ್ ಕಟ್ ಆದ ತಕ್ಷಣ ಅಳುತಿದ್ದಳು. ಸೋನು ಪ್ಲೀಸ್ ನನ್ನಬಿಟ್ಟು ಹೋಗಬೇಡ ಯಾವತ್ತಿಗೂ. ನೀನೆಂದಿಗೂ ನನ್ನ ಸೋನು ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಳು. ತನ್ನಷ್ಟಕ್ಕೆ ತನ್ನ ಮನಸ್ಸಿನಲ್ಲಿ ಸೋನುವಿನೊಂದಿಗೆ ಮಾತನಾಡಿಕೊಳ್ಳುತ್ತಿದ್ದಳು.
ದಿನ ಕಳೆದಂತೆ ಆಗೊಮ್ಮೆ ಈಗೊಮ್ಮೆ ಇಬ್ಬರು ಭೇಟಿಯಾಗುತ್ತಿದ್ದರು. ಅದರಿಂದ ಅಕಿಲಾಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಆ ಭೇಟಿಯಿಂದ ತಾನು ಅನಾಥೆ ಅಲ್ಲ ಎಂದು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಸೋನು ಕೂಡ ಅಖಿಲ ಖುಷಿ-ಖುಷಿಯಾಗಿರುವಂತೆ ನೋಡಿಕೊಳ್ಳುತ್ತಿದ್ದ. ಸೋನು ಯಾವಾಗಲೂ ತನ್ನ ತಂದೆ-ತಾಯಿಯರ ಮನೆಯವರ ಬಗ್ಗೆ ಅಕಿಲಾಳ ಜೊತೆ ಚರ್ಚಿಸುತ್ತಿದ್ದ. ಸೋನು ತಾಯಿಯ ಬಗ್ಗೆ ಮಾತನಾಡುವಾಗಳಲೆಲ್ಲ ಅಕಿಲಾಳ ಕಣ್ಣಿಂದ ಕಣ್ಣೀರು ಸುರಿಯುತ್ತಿತ್ತು.
ಅದೊಂದು ದಿನ ಅಂಕಿತ್ ಕಳುಹಿಸಿದ ಅದೊಂದು ಫೋಟೋ ನೋಡಿ ಅಖಿಲ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಆ ಫೋಟೋದಲ್ಲಿ ಸೋನು ತನ್ನ ತಾಯಿಯ ಕಾಲ ಮೇಲೆ ಪುಟ್ಟ ಮಗುವಿನಂತೆ ಮಲಗಿದ್ದ. ಓ ದೇವರೇ ನಾನೆಷ್ಟು ಪಾಪ ಮಾಡಿದ್ದೆ. ಯಾಕೆ ನನ್ನ ತಾಯಿಯನ್ನು ನನ್ನಿಂದ ದೂರ ಮಾಡಿದೆ. ಈ ಫೋಟೋ ನನ್ನಿಂದ ನೋಡಲಾಗುತ್ತಿಲ್ಲ. ಎಂದು ಖುಷಿ ಮತ್ತು ದುಃಖದಿಂದ ಕಣ್ಣೀರಿಟ್ಟಿದ್ದಳು. ಸೋನು ತಾಯಿಯ ಕ್ಯೆತುತ್ತು ತಿಂದೆ ಅಂದಾಗೆಲ್ಲ ಅಂಕಿತಾಳಿಗೆ ದುಃಖ ಉಕ್ಕಿ ಉಕ್ಕಿ ಬರುತಿತ್ತು. ಆದರೆ ಅದನೆಂದಿಗೂ ಅಂಕಿತ್ ಎದುರು ತೋರಿಸಿಕೊಳ್ಳುತ್ತಿರಲಿಲ್ಲ.
ಹೀಗೆ ದಿನಗಳು ಉರುಳುತ್ತಿತ್ತು. ಅಖಿಲ ತುಂಬಾ ಖುಷಿಯಾಗಿದ್ದಳು ಅನ್ನುವುದಕ್ಕಿಂತ ಅಂಕಿತ್ ಅಖಿಲ ಅನಾಥೆ ಎನ್ನುವ ಭಾವ ಅವಳಿಂದ ದೂರ ಹೋಗುವಂತೆ ನೋಡಿಕೊಂಡಿದ್ದ. ಅಂಕಿತಾಳಿಗೆ ಈ ಪ್ರಪಂಚ ಎಷ್ಟು ಸುಂದರ ಅನಿಸುತ್ತಿತ್ತು.
ಕುಣಿದು ಕುಪ್ಪಳಿಸುತ್ತಿದ್ದ ಅಕಿಲಾಳಿಗೆ ಅದೊಂದು ದಿನ ಅಂಕಿತ್ ನ ಮಾತು ಬರಸಿಡಿಲಿನಂತೆ ಬಾಸವಾಗಿತ್ತು. ಅಂದು ಅಖಿಲ ಅಂಕಿತ್’ಗೆ ಕರೆ ಮಾಡಿದ್ದಳು. ಅಂಕಿತ್ ಪ್ಲೀಸ್ ಅಖಿಲ ನಾನು ಬ್ಯುಸಿ ಇರ್ತೀನಿ. ನನ್ನ ಜೊತೆ ಮತನಾಡಬೇಡ ಅಂದಿದ್ದ. ಸರಿ ಸೋನು ತಮಾಷೆ ಸಾಕು ಅಂದಿದ್ದವಳಿಗೆ ವಿಷಯದ ಗಂಭೀರತೆ ಅರಿಯಲು ತುಂಬಾ ದಿನಗಳೇ ಹಿಡಿದಿತ್ತು. ಯಾಕೆಂದರೆ ಅಖಿಲ ಅಂಕಿತ್ ನಲ್ಲಿ ತಾಯಿಯನ್ನು ನೋಡುತ್ತಿದ್ದಳು. ತನ್ನ ಪ್ರಪಂಚವೇ ಅವನೆಂದು ಬಾವಿಸಿದ್ದಳು. ಹೀಗೆ ದಿನಕಳೆದಂತೆ ಅಂಕಿತ್ ಅಕಿಲಾಳನ್ನು ಸ್ವಲ್ಪ ಸ್ವಲ್ಪವೇ ದೂರ ಮಾಡಿದ್ದ.
ಅದೊಂದು ದಿನ ತಡೆಯಲಾಗದ ಅಖಿಲ ಅಂಕಿತ್ ನ ಗೆಳೆಯ ಪ್ರಸನ್ನನಿಗೆ ಕಾಲ್ ಮಾಡುತ್ತಾಳೆ. ಅಣ್ಣಾ ಅಂಕಿತ್’ಗೆ ಏನಾಗಿದೆ ಅಂತ ಕೇಳ್ತಾಳೆ ಯಾಕೆಂದರೆ ಇವರಿಬ್ಬರ ಬಗ್ಗೆ ಸಂಪೂರ್ಣವಾಗಿ ತಿಳಿದದ್ದು ಪ್ರಸನ್ನನಿಗೆ ಮಾತ್ರ.
ಮರೆತು ಬಿಡು ಅಖಿಲ ಅಂಕಿತ್’ನನ್ನು ಎಂದು ಪ್ರಸನ್ನ ಅಖಿಲಾಳಿಗೆ ಉತ್ತರ ನೀಡುತ್ತಾನೆ. ಇಲ್ಲ ಅಣ್ಣ ನಾನು ಮಾತಾಡಬೇಕು ಅವರ ಹತ್ರ ಎನ್ನುವ ಅಕಿಲಾಳ ಮಾತಿಗೆ ಇಲ್ಲ ಅನ್ನಲಾಗದ ಪ್ರಸನ್ನ ಸರಿ ಅಖಿಲ ನಾನು ಅಂಕಿತ್ ಜೊತೆ ಮಾತನಾಡುತ್ತೇನೆ ಇಬ್ಬರು ಬೇಟಿ ಮಾಡಿ ಎನ್ನುತ್ತಾನೆ.
ಕೊನೆಗೂ ದೇವರು ನನಗೆ ದಾರಿ ತೋರಿಸಿದ ನಾನು ಅಂಕಿತ್’ನ ಎದುರಿಗೆ ಹೋಗಿ ಮಾತನಾಡಿದರೆ ಎಲ್ಲ ಸರಿಹೋಗುತ್ತದೆ ಎಂದು ಅಂಕಿತ ಖುಷಿಯಾಗುತ್ತಾಳೆ.
ಯಾರಿಗೆ ಬೇಕು ಈ ಲೋಕ. ಮೋಸಕ್ಕೆ ಕಯ್ ಮುಗಿಬೇಕಾ ಎಂದು ಅಕಿಲಾಳ ಫೋನ್ ಸದ್ದು ಮಾಡಿತ್ತು. ಅಯ್ಯೋ ಅಂಕಿತ್ ಭೇಟಿಯ ಸಂದರ್ಭದಲ್ಲಿ ಏನು ಮೋಸ ಆಗಲು ಸಾಧ್ಯ ಹಾಳಾದ ಫೋನು ಎಂದುಕೊಳ್ಳುತ್ತ ಕಾಲ್ ರಿಸೀವ್ ಮಾಡುತ್ತಾಳೆ. ಪ್ರಸನ್ನ ಆ ಕಡೆಯಿಂದ ಮಾತನಾಡುತ್ತಿದ್ದ ಅಂಕಿತ್ ನಿನ್ನ ಮೀಟ್ ಮಾಡುವುದಿಲ್ಲವಂತೆ ತಂಗಿ. ನೀನು ಯಾವತ್ತೂ ಅವನ ಜೊತೆ ಮಾತನಾಡಬಾರದಂತೆ ಎನ್ನುವ ಧ್ವನಿ ಕೇಳುತ್ತಿದಂತೆ ಅಖಿಲ ಕುಸಿದು ಬಿದ್ದಳು. ಅನಾಥ ಹುಡುಗಿ ಮತ್ತೆ ಅನಾಥವಾಗಿದ್ದಳು.
ಕೊನೆಗೂ ಅಂಕಿತ್ ಅಕಿಲಾಳನ್ನು ಯಾಕೆ ದೂರ ಮಾಡಿದ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿತ್ತು!
ರಸಾಯನ ಶಾಸ್ತ್ರ ಉಪನ್ಯಾಸಕಿ
ಭಂಡಾರ್ ಕಾರ್ಸ್ ಕಾಲೇಜು ಕುಂದಾಪುರ
Get in Touch With Us info@kalpa.news Whatsapp: 9481252093
Discussion about this post