ನವದೆಹಲಿ: ತನ್ನ ಕ್ರೂರ ಮುಖವನ್ನು ಹಲವು ಬಾರಿ ಬಯಲು ಮಾಡಿಕೊಂಡಿರು ಪಾಕಿಸ್ಥಾನದ ಕ್ರೌರ್ಯ ಈಗ ಮತ್ತೊಮ್ಮೆ ಬಹಿರಂಗಗೊಂಡಿದೆ.
ಟರ್ಕಿಷ್ ಏರ್ ಲೈನ್‌ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಯುವಕನೊಬ್ಬರಿಗೆ ಏಕಾಏಕಿ ಆರೋಗ್ಯ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಆದರೆ, ಭಾರತದ ಯುವಕ ಎಂಬ ಕಾರಣಕ್ಕಾಗಿ ಆತನಿಗೆ ಚಿಕಿತ್ಸೆ ನೀಡಲು ಪಾಕ್ ನಿರಾಕರಿಸಿದ ಘಟನೆ ನಡೆದಿದೆ.
ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತೀಯ ಯುವಕನಿಗೆ ಚಿಕಿತ್ಸೆ ನೀಡಲು ಪಾಕ್ ನಿರಾಕರಿಸಿದೆ. ಹೀಗಾಗಿ, ವಿಮಾನ ಪ್ರಯಾಣವನ್ನು ಮುಂದುವರೆಸಿ ಏಳು ಗಂಟೆಗಳ ನಂತರ ದೆಹಲಿ ತಲುಪಿದ ನಂತರವಷ್ಟೇ ಆತನಿಗೆ ಚಿಕಿತ್ಸೆ ನೀಡಲಾಯಿತು ಎಂದು ಹೇಳಿದೆ.
Discussion about this post