ಶ್ರೀನಗರ: ಪಾಪಿ ಪಾಕಿಸ್ಥಾನದ ಸೈನಿಕರು ಮತ್ತೊಮ್ಮೆ ಮೆರೆದ ವಿಕೃತ ಕ್ರೌರ್ಯಕ್ಕೆ ಭಾರತೀಯ ಸೇನೆಯ ಯೋಧ ಅತ್ಯಂತ ಭೀಕರವಾಗಿ ಪ್ರಾಣತ್ಯಾಗ ಮಾಡಿ ವೀರಸ್ವರ್ಗ ಸೇರಿದ್ದಾರೆ.
ಅಂತಾರಾಷ್ಟ್ರೀಯ ಗಡಿಯಲ್ಲಿ ಪುಂಡಾಟಿಕೆಯನ್ನು ಮುಂದುವರೆಸಿರುವ ಪಾಕ್ ಸೈನಿಕರು ಇಂದು ಬಿಎಸ್‌ಎಫ್ ಯೋಧರೊಬ್ಬರ ಗಂಟಲನ್ನು ಸೀಳಿ, ಕಣ್ಣುಗಳನ್ನು ಕಿತ್ತು ಕ್ರೂರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ವೀರಯೋಧನ ಪಾರ್ಥಿವ ಶರೀರ ದೊರೆತಿದೆ.
ಗಸ್ತಿನಲ್ಲಿದ್ದ ಹೆಡ್ ಕಾನ್‌ಸ್ ಟೇಬಲ್ ನರೇಂದರ್ ಕುಮಾರ್ ಅವರ ಕತ್ತು ಸೀಳಿರುವುದಲ್ಲದೇ, ದೇಹಕ್ಕೆ ಮೂರು ಬುಲೆಟ್ ಗಾಯಗಳಾಗವೆ. ಆದರೆ, ಘಟನೆ ನಡೆದು ಆರು ತಾಸು ಕಳೆದರೂ ಪಾಕಿಸ್ತಾನ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕ್ರೂರ ಘಟನೆಯ ಬಳಿಕ ರಾಮ್ ಗಢ್ ಸೆಕ್ಟರ್ ನಲ್ಲಿ ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಹೈ ಅಲರ್ಟ್ ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Border Securty Force (BSF) has raised the issue of killing of its jawan with the Pakistan Rangers at the sector level. BSF has also sought Director General of Military Operations (DGMO) to raise the issue with Pakistan at its level.
— ANI (@ANI) September 19, 2018
ನಾಪತ್ತೆಯಾಗಿದ್ದ ಯೋಧನ ಹುಡುಕಾಟ ನಡೆಸುತ್ತಿರಬೇಕಾದ್ದರೆ ಭಾರತದ ಬಿಎಸ್ ಎಫ್ ಯೋಧ ಕಂಡುಬಂದಿದ್ದು, ಈ ಪ್ರದೇಶದಲ್ಲಿ ಜಲ ವಿವಾದ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಸಮನ್ವಯ ಕ್ರಿಯೆಯಿಂದ ಆತನನ್ನು ಬರದಂತೆ ತಡೆಗಟ್ಟಲಾಗಿದೆ. ನಂತರ ಸೂರ್ಯಾಸ್ತವರೆಗೂ ಕಾಯ್ದು ಕಡು ಸಾಹಸದ ಮೂಲಕ ಪಾರ್ಥಿವ ಶರೀರವನ್ನು ಹೊರಗೆ ತರಲಾಗಿದೆ ಎಂದು ಪಾಕಿಸ್ಥಾನದ ರೇಂಜರ್ ತಿಳಿಸಿರುವುದಾಗಿ ವರದಿಯಾಗಿದೆ.
ಈ ಕೃತ್ಯ ಬರ್ಬರವಾಗಿದ್ದು, ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ ಮತ್ತು ಮಿಲಿಟರಿ ಕಾರ್ಯಾಚರಣೆ ಮಹಾನಿರ್ದೇಶಕರು ಪಾಕಿಸ್ಥಾನದ ತನ್ನ ಸಹವರ್ತಿಗಳೊಂದಿಗೆ ಈ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಭದ್ರತೆಗಾಗಿ ನಿಯೋಜಿಸಿರುವ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
Discussion about this post