ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ವಿಜಯಪುರದಿಂದ #Vijayapura ಮಂಗಳೂರು ಸೆಂಟ್ರಲ್ ನಡುವಿನ ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚಾರದ ಅವಧಿಯನ್ನು 2025ರ ಡಿಸೆಂಬರ್’ವರೆಗು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಜುಲೈ 1 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ.
ವಿಜಯಪುರ-ಮಂಗಳೂರು #Mangalore ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು 2025ರ ಡಿಸೆಂಬರ್’ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿವೆ. ಇದಲ್ಲದೆ, ಜುಲೈ 1, 2025 ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಅದೇ ರೀತಿ, ಜುಲೈ 1, 2025ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ರೈಲು ಈಗ ಜುಲೈ 2, 2025ರಿಂದ ಜನವರಿ 1, 2026ರವರೆಗೆ ವಿಸ್ತರಿಸಲಾಗಿದೆ.
ಜುಲೈ 1, 2025 ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ರೈಲಿನ ಪರಿಷ್ಕೃತ ವೇಳಾಪಟ್ಟಿ ಇಂತಿದೆ:
ಪರಿಷ್ಕೃತ ವೇಳಾಪಟ್ಟಿಯಂತೆ, 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ರೈಲು ಮಂಗಳೂರು ಸೆಂಟ್ರಲ್’’ನಿಂದ ದ 14:35 ಗಂಟೆಗೆ ಹೊರಡುವ ಬದಲು 16:45 ಗಂಟೆಗೆ ಹೊರಡಲಿದೆ.
ಇದಾದ ನಂತರ, ರೈಲು ಯಲವಿಗಿಗೆ 03:32/03:33 ಗಂಟೆಗೆ, ಎಸ್’ಎಸ್’ಎಸ್ ಹುಬ್ಬಳ್ಳಿಗೆ 04:40/04:50 ಗಂಟೆಗೆ, ಅಣ್ಣಿಗೇರಿಗೆ 05:20/05:21 ಗಂಟೆಗೆ, ಗದಗಕ್ಕೆ 06:15/06:20 ಗಂಟೆಗೆ, ಮಲ್ಲಾಪುರಕ್ಕೆ 06:49/06:50 ಗಂಟೆಗೆ, ಹೋಳೆ ಆಲೂರಿಗೆ 07:07/07:08 ಗಂಟೆಗೆ, ಬದಾಮಿಗೆ 07:29/07:30 ಗಂಟೆಗೆ, ಗುಳೇದಗುಡ್ಡ ರೋಡ್ ಗೆ 07:43/07:44 ಗಂಟೆಗೆ, ಬಾಗಲಕೋಟೆಗೆ 07:56/07:58 ಗಂಟೆಗೆ, ಆಲಮಟ್ಟಿಗೆ 08:37/08:38 ಗಂಟೆಗೆ, ಮತ್ತು ಬಸವನ ಬಾಗೇವಾಡಿ ರೋಡ್’ಗೆ 08:59/09:00 ಗಂಟೆಗೆ ಆಗಮಿಸಿ ಹೊರಡಲಿದೆ. ಈ ರೈಲು ಮೊದಲು 09:35 ಗಂಟೆಗೆ ತಲುಪುತ್ತಿದ್ದ ವಿಜಯಪುರಕ್ಕೆ, ಪರಿಷ್ಕೃತ ವೇಳಾಪಟ್ಟಿಯಂತೆ 11:15 ಗಂಟೆಗೆ ತಲುಪಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post