ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ದೀಪಾವಳಿ ಮತ್ತು ಛತ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮಿಜಿ, ಹುಬ್ಬಳ್ಳಿ ಮತ್ತು ಭಗತ್-ಕಿ-ಕೋಠಿ ನಡುವಿನ ವಿಶೇಷ ರೈಲು ಸಂಚಾರದ ಅವಧಿಯನ್ನು ಎರಡೂ ಮಾರ್ಗಗಳಲ್ಲಿ ತಲಾ ಐದು ಹೆಚ್ಚುವರಿ ಟ್ರಿಪ್’ಗಳನ್ನು ವಿಸ್ತರಿಸಲು ನಿರ್ಧರಿಸಿದೆ.
07359 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ – ಭಗತ್-ಕಿ-ಕೋಠಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು, ಈ ಹಿಂದೆ 2025ರ ಅಕ್ಟೋಬರ್ 26ರವರೆಗೆ ಮಾತ್ರ ಸಂಚರಿಸಲು ಸೂಚಿಸಲಾಗಿತ್ತು.
ಇದೀಗ ಈ ರೈಲು ನವೆಂಬರ್ 2 ರಿಂದ ನವೆಂಬರ್ 30ರವರೆಗೆ ತನ್ನ ಸೇವೆಗಳನ್ನು ಮುಂದುವರಿಸಲಿದೆ.
ಅದೇ ರೀತಿ, 07360 ಸಂಖ್ಯೆಯ ಭಗತ್-ಕಿ-ಕೋಠಿ – ಎಸ್’ಎಸ್’ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಅಕ್ಟೋಬರ್ 28ರವರೆಗೆ ಮಾತ್ರ ಓಡಾಟ ನಡೆಸಲು ಸೂಚಿಸಲಾಗಿತ್ತು. ಈ ರೈಲು ಸೇವೆಗಳು ನವೆಂಬರ್ 4 ರಿಂದ ಡಿಸೆಂಬರ್ 2 ರವರೆಗೆ ವಿಸ್ತರಣೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post