ಗೋವಾ: ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವಾಗುತ್ತಿದ್ದು ಅದನ್ನು ತಡೆಯುವುದು ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾನೂನನ್ನು ರೂಪಿಸಲು ನ್ಯಾಯವಾದಿಗಳು ಪ್ರಯತ್ನಿಸಬೇಕು. ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಬೇಕೆಂದಿದ್ದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಹಿಂದೂ ಫ್ರಂಟ್ ಫಾರ ಜಸ್ಟಿಸ್ ಅಧ್ಯಕ್ಷ ನ್ಯಾ. ಹರಿ ಶಂಕರ್ ಜೈನ್ ಕರೆ ನೀಡಿದರು.
ಶ್ರೀ ರಾಮನಾಥ ದೇವಸ್ಥಾನದ ಶ್ರೀವಿದ್ಯಾಧೀರಾಜ ಸಭಾಗೃಹದಲ್ಲಿ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ನ್ಯಾಯವಾದಿ ಅಧಿವೇಶನದಲ್ಲಿ ಅವರು ಮಾತನಾಡಿದರು.
1947 ರಲ್ಲಿ ದೇಶದ ವಿಭಜನೆಯಾದಾಗ ಅದು ಸ್ವತಂತ್ರವಾಯಿತು. ಅನಂತರ 1950 ರಲ್ಲಿ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಆಗ ಎಲ್ಲರಿಗೂ ನ್ಯಾಯ ಸಿಗುವುದು ಎಂದು ಹೇಳಲಾಯಿತು. ಹಾಗಾಗಿ ಎಲ್ಲ ದೌರ್ಜನ್ಯಗಳನ್ನು ಮರೆತು ಹಿಂದೂಗಳು ಅದನ್ನು ಸ್ವೀಕರಿಸಲು ಸಿದ್ಧರಾದರು. ಆದರೆ ಪ್ರತ್ಯಕ್ಷದಲ್ಲಿ ಜಾತ್ಯತೀತವಾದದ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡಿ ಹಿಂದೂಗಳನ್ನು ದಮನಿಸಲಾಗುತ್ತಿದೆ ಎಂದು ವಿಷಾಧಿಸಿದರು.
ಇಂದು ಮುಸಲ್ಮಾನರು ತಮ್ಮ ಧರ್ಮಕ್ಕಾಗಿ ಸಮರ್ಪಿತರಾಗಿ ಪ್ರಸಂಗ ಬಂದರೆ ಜೀವ ನೀಡಲು ಸಿದ್ಧರಾಗುತ್ತಾರೆ. ಹೀಗಿರುವಾಗ ನಾವು ಹಿಂದೂ ನ್ಯಾಯವಾದಿಗಳೂ ಕಾನೂನಿನ ಅಧ್ಯಯನ ಮಾಡಿ, ನ್ಯಾಯಾಲಯದಲ್ಲಿ ಸಮರ್ಪಿತರಾಗಿ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಲು ನಿಸ್ವಾರ್ಥವೃತ್ತಿಯಿಂದ ಜೀವವನ್ನು ಪಣಕ್ಕಿಟ್ಟು ಪ್ರಯತ್ನಿಸಬೇಕು. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವಾಗುತ್ತಿದ್ದು ಅದನ್ನು ತಡೆಯುವುದು ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮತಾಂತರನಿಷೇಧ ಕಾನೂನನ್ನು ರೂಪಿಸಲು ನ್ಯಾಯವಾದಿಗಳು ಪ್ರಯತ್ನಿಸಬೇಕು ಎಂದರು.
ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಬೇಕೆಂದಿದ್ದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎಂದರು.
ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ನ್ಯಾಯವಾದಿಗಳ ಇತಿಹಾಸವು ಪುರಾತನ ಹಾಗೂ ಅಧ್ಯಾತ್ಮಿಕವಾಗಿದೆ. ಲೋಕಮಾನ್ಯ ತಿಲಕ್, ಪಂಡಿತ ಮದನಮೋಹನ ಮಾಳವೀಯ, ಸ್ವಾತಂತ್ರ್ಯವೀರ ಸಾವರಕರ ಇಂತಹ ಅನೇಕ ನ್ಯಾಯವಾದಿಗಳು ಸ್ವಾತಂತ್ರ್ಯಹೋರಾಟದಲ್ಲಿ ಸಕ್ರಿಯವಾಗಿ ಸಹಭಾಗಿಯಾಗಿ ಒಂದು ಆದರ್ಶವನ್ನು ನಿರ್ಮಿಸಿದರು. ಅದೇ ಆದರ್ಶವನ್ನು ಮುಂದಿಟ್ಟುಕೊಂಡು ಧರ್ಮಪ್ರೇಮಿ ನ್ಯಾಯವಾದಿಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅದು ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗುವುದು. ಇಲ್ಲಿ ನೆರೆದ ನ್ಯಾಯವಾದಿಗಳು ಕೇವಲ ಪ್ರವಾಹದ ವಿರುದ್ಧ ಈಜುವುದು ಅಪೇಕ್ಷಿತವಿರದೇ, ಪ್ರವಾಹದ ದಿಕ್ಕನ್ನೇ ಬದಲಾಯಿಸಿ ಧರ್ಮಾಧಿಷ್ಠಿಯ ಹಿಂದೂ ರಾಷ್ಟ್ರದ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕ ಸುನೀಲ್ ಘನವಟರ್ ಮಾತನಾಡಿ, ಹಿಂದುತ್ವನಿಷ್ಠರಿಗೆ ಕಾನೂನಿನ ಪೂರ್ಣ ಮಾಹಿತಿ ಇಲ್ಲದ್ದರಿಂದ ಅವರಿಗೆ ಹಿಂದುತ್ವದ ಕಾರ್ಯ ಮಾಡುವಾಗ ಆಗಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಹಿಂದುತ್ವನಿಷ್ಠರಿಗೆ ಧರ್ಮಪ್ರೇಮಿ ನ್ಯಾಯವಾದಿಗಳು ಕಾನೂನು ವಿಷಯದಲ್ಲಿ ಮಾರ್ಗದರ್ಶನ ಮಾಡಿ ಸಹಾಯ ಮಾಡಬೇಕು ಎಂದರು.
ಅಧಿವೇಶನದ ಆರಂಭದಲ್ಲಿ ಶಂಖನಾದ ಮಾಡಲಾಯಿತು. ದೀಪಪ್ರಜ್ವಲನೆಯ ನಂತರ ಸನಾತನ ಪುರೋಹಿತ ಪಾಠಶಾಲೆಯ ಪುರೋಹಿತರು ವೇದಮಂತ್ರ ಪಠಣ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರು ಅಧಿವೇಶನದ ನಿಮಿತ್ತ ನೀಡಿದ ಸಂದೇಶವನ್ನು ಸಮಿತಿಯ ಪೂರ್ವಭಾರತದ ಮಾರ್ಗದರ್ಶಕರಾದ ಪೂ. ನಿಲೇಶ ಸಿಂಗಬಾಳರವರು ಓದಿದರು. ಸಮಿತಿಯ ಸುಮಿತ ಸಾಗವೇಕರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕೇರಳದ ನ್ಯಾಯವಾದಿ ಗೋವಿಂದ ಕೆ. ಭರತನ್, ಇಂಡಿಯಾ ವಿಥ ವಿಸ್ಡಂ ಗ್ರೂಪ್ ನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ಕಮಲೇಶಚಂದ್ರ ತ್ರಿಪಾಠಿ, ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯರಾದ ನ್ಯಾಯವಾದಿ ಸುರೇಶ ಕುಲಕರ್ಣಿ ಮತ್ತು ಇತರ ಗಣ್ಯರು ದೀಪಪ್ರಜ್ವಲನೆ ಮಾಡಿದರು. ಈ ಸಮಯದಲ್ಲಿ 80 ಕ್ಕೂ ಹೆಚ್ಚು ಧರ್ಮಪ್ರೇಮಿ ನ್ಯಾಯವಾದಿಗಳು ಉಪಸ್ಥಿತರಿದ್ದರು.
Discussion about this post