ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಾರೀ ಉಗ್ರರ ದಾಳಿ ಸ್ಥಳಕ್ಕೆ ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪೂರ್ವ ನಿಗದಿಯಂತೆ ನಾಳೆ ಪಾಟ್ನಾದಲ್ಲಿ ನಡೆಯಲಿರುವ ಭಾರೀ ಬಹಿರಂಗ ಸಭೆಯಲ್ಲಿ ರಾಜನಾಥ್ ಸಿಂಗ್ ಪಾಲ್ಗೊಳ್ಳಬೇಕಿತ್ತು. ಆದರೆ, ಪುಲ್ವಾಮಾದಲ್ಲಿ ಈ ಪ್ರಮಾಣದ ಸ್ಫೋಟ ಸಂಭವಿಸಿ ಸಿಆರ್’ಪಿಎಫ್’ನ 20 ಯೋಧರು ವೀರಸ್ವರ್ಗ ಸೇರಿರುವ ಹಿನ್ನೆಲೆಯಲ್ಲಿ ಪಾಟ್ನಾ ಸಭೆಯನ್ನು ರದ್ದು ಮಾಡಿ, ಪುಲ್ವಾಮಾಗೆ ತೆರಳಲಿದ್ದಾರೆ.
ಇನ್ನು, ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಯೋಧರ ಮೇಲೆ ನಡೆದ ಭಾರೀ ಪ್ರಮಾಣದ ದಾಳಿ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಲ್ಲಿನ ಪರಿಸ್ಥಿತಿಯನ್ನು ರಾಷ್ಟಿಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಮಾಹಿತಿ ಪಡೆದುಕೊಂಡು, ಸ್ವತಃ ಅವಲೋಕನ ಮಾಡುತ್ತಿದ್ದಾರೆ.
Discussion about this post