ಪ್ರತಿ ವ್ಯಕ್ತಿಯ ಬದುಕನ್ನು ರೂಪಿಸುವುದು ಕಲಿಕೆ. ಕಲಿಕೆ ಎಂದರೆ ಶಾಲೆಯ ನಾಲ್ಕು ಗೋಡೆಗಳ ಮದ್ಯ ಕಲಿಯುವ ವಿದ್ಯೆ ಮಾತ್ರವಲ್ಲ. ಬದಲಿಗೆ ಜೀವನದ ಪ್ರತಿ ಹಂತದಲ್ಲಿ ನಾವು ಪಡೆಯುವ ಪಡೆದ ಅನುಭವಗಳೇ ನಮ್ಮ ನಿಜವಾದ ಕಲಿಕೆ.
ಆದರೆ ಇಂದು ಶಿಕ್ಷಣ ಅಥವಾ ಕಲಿಕೆ ಎಂಬ ಪದ ಸಂಕುಚಿತ ಅರ್ಥ ಪಡೆಯುತ್ತಿದೆ. ಕಲಿಕೆ ಶಾಲೆಯ ನಾಲ್ಕು ಗೋಡೆಗಳ ಕಟ್ಟಡಗಳಿಗೆ ಸೀಮಿತವಾಗುತ್ತಿದೆ. ಅಷ್ಟೆ ಅಲ್ಲದೆ ವಿದ್ಯೆಯನ್ನು ಹಣ ಗಳಿಕೆಯ ಮಾರ್ಗವಾಗಿ ಬಳಕೆ ಮಾಡಲಾಗುತ್ತದೆ. ಸರಸ್ವತಿಯನ್ನು ಮಾರಾಟ ಮಾಡುವ ಮಟ್ಟಿಗೆ ಇಂದಿನ ಸಮಾಜ ಬಂದು ನಿಂತಿದೆ. Donation ಎಂಬ ಹೆಸರಿನಿಂದ ಲಕ್ಷ ಲಕ್ಷ ಹಣವನ್ನು ಜೇಬಿಗಿಳಿಸುವ ವ್ಯವಸ್ಥೆ ಇದೆ. ಇದು ಕೇವಲ ಪಠ್ಯಾಧಾರಿತ ಕಲಿಕೆಗೆ ಮಾತ್ರ ಸೀಮಿತವಾಗಿಲ್ಲ. ಬದಲು ಕಲೆಯ ಶಿಕ್ಷಣ ನೀಡುವ ಸಂಸ್ದೆಗಳಲ್ಲಿಯೂ ಇದು ಇಂದು ನಾವು ಕಾಣಬಹುದು.
ಆದರೆ ಯಾವುದೇ ಫಲಾಪೇಕ್ಷೆ ಇಲ್ಲದೇ ಕಲಾ ದೇವಿಯ ಸೇವೆಯೆಂದು ಭಾವಿಸಿ ಉಚಿತವಾಗಿ ಯಕ್ಷಗಾನ ಮತ್ತು ನಾಟ್ಯದಲ್ಲಿ ಆಸಕ್ತಿ ಇರುವ ವ್ಯಕ್ತಿಗಳಿಗೆ ಒಂದೇ ಒಂದು ರೂಪಾಯಿ ಪಡೆಯದೆ ಕಲಿಸುತ್ತಿರುವ ಶ್ರುತಿ ದಾಸ್ ಇತರರಿಗೆ ಮಾದರಿಯಂತೆ ನಿಂತಿದ್ದಾರೆ. ಇದೆ ಉದ್ದೇಶ ಪೂರ್ತಿ ಮಾಡುವ ಸಲುವಾಗಿ ನಾಟ್ಯ ಲಹರಿ ನೃತ್ಯ ಹಾಗೂ ಯಕ್ಷಗಾನ ತಂಡ ಕಾವಳಕಟ್ಟೆ ಈ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಸುಮಾರು ಅರವತ್ತಕಿಂತ ಹೆಚ್ಚು ವ್ಯಕ್ತಿಗಳಿಗೆ ತಮ್ಮ ಜ್ಞಾನ ಉಚಿತವಾಗಿ ಹಂಚುವ ಕೆಲಸ ಮಾಡುತ್ತಿದ್ದಾರೆ.
ಸ್ವತಃ ವಿದ್ಯಾರ್ಥಿಯಾಗಿದ್ದು ತಮ್ಮ ಅಮೂಲ್ಯವಾದ ಸಮಯವನ್ನು ಇತರರನ್ನು ಬೆಳೆಸುವ ಕಾರ್ಯಕ್ಕೆ ಬಳಕೆ ಮಾಡುವದರ ಮೂಲಕ ಇಂದಿನ ಸಮಾಜಕ್ಕೆ ಉದಾಹರಣೆ ಆಗಿದ್ದಾರೆ ಎಂದರೆ ತಪ್ಪಾಗಲಾರದು.
ಇವರ ಈ ಕಲಾ ಸೇವೆ ಹೀಗೆ ಮುಂದುವರೆಯಲಿ ಈ ಕಾರ್ಯಕ್ಕೆ ಇನ್ನು ಯಶಸ್ಸು ದೊರೆತು ಅಪಾರ ಪ್ರತಿಭೆಗಳು ಬೆಳೆಯಲೆಂದು ಹಾಗೂ ಇವರ ಕಲಾ ಬದುಕು ಯಶಸ್ಸು ಪಡೆಯಲಿ. ದೇಶದ ಕೀರ್ತಿ ದಶ ದಿಕ್ಕಿಗೆ ಹರಡಲಿ ದೇವರ ಕೃಪೆ ಇವರ ಮೇಲಿರಲಿ. ಆಯುಷ್ಯ, ಬದುಕಿನಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸಿರಲಿ ಎಂದು ಆಶಿಸುತ್ತೇವೆ.
ಲೇಖನ: ರೋಹನ್ ಪಿಂಟೊ
ಮಾಹಿತಿ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ










Discussion about this post