ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೆಲವು ತಿರುಗಾಟ, ಕಿರುಚಿತ್ರಗಳು ಮತ್ತು ಕೆಲವು ರಂಗಭೂಮಿ ನಾಟಕಗಳು, ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಪವನಕುಮಾರ ಬೂದಿಹಾಳ ಅವರನ್ನು ನೀವು ನೋಡಿಯೇ ಇರುತ್ತೀರಿ. ಅಂದ ಹಾಗೆ ಉತ್ತರ ಕರ್ನಾಟಕದ ಬಸವನಬಾಗೇವಾಡಿ ತಾಲೂಕಿನ ಯಾಳವಾರ ಎಂಬ ಪುಟ್ಟ ಗ್ರಾಮದ ಪ್ರತಿಭೆ ಪವನಕುಮಾರ ಚಿತ್ರರಂಗದಲ್ಲಿ ಕಲಾವಿದರಾಗಿ ಮತ್ತು ರಂಗ ನಿರ್ದೇಶಕರಾಗಿ, ಕಿರುಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಸಕ್ರಿಯರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಒಳ್ಳೆಯ ಕಲಾವಿದನಾಗುವ ಹಾಗೂ ನಿರ್ದೇಶಕನಾಗುವ ಹಂಬಲವನ್ನು ಹೊಂದಿರುವ ಪವನಕುಮಾರ ಅವರನ್ನು ಮಾತನಾಡಿಸಿದಾಗ!
ಅಭಿನಯ, ನಾಟಕಗಳು, ನಿರ್ದೇಶನದ ವಿಭಾಗ ಹೇಗೆ ನಡೀತಿದೆ ಕೆಲಸಗಳು?
ಎಲ್ಲಾ ಚೆನ್ನಾಗಿ ನಡೀತಿದೆ. ಇವಾಗ ನಿರ್ದೇಶನದಲ್ಲಿ ಹೊಸಹೊಸ ಪ್ರಯತ್ನಗಳನ್ನು ಮಾಡ್ತಿದೀನಿ. ರಚನೆ ಮತ್ತು ನಿರ್ದೇಶನ ಮಾಡಲು ಹೊರಟಾಗ ಒಂದು ಕಡೆ ಭಯ ಆದರೂ ಪ್ರಯತ್ನ ಮಾಡುತ್ತಿದ್ದೇನೆ. ಅಭಿನಯ ಮೇಲೆ ರಂಗದಲ್ಲಿ ಅಂತರಂಗ ಸ್ತನಿಸ್ಲವಿಎಸ್ಕಿ ಬ್ರೆಕ್ಟ್ ಮತ್ತೆ ಭರತಮುನಿ ಅವರ ಬಗ್ಗೆ ಎಲ್ಲಾ ಸ್ವಲ್ಪಮಟ್ಟಿಗೆ ಓದಿಕೊಂಡಿದ್ದರಿಂದ ನನ್ನ ಜೊತೆ ಇರುವ ಸಹ ನಟರಿಗೆ ನಿರ್ದೇಶಕರಿಗೆ ಅದರ ಬಗ್ಗೆ ಸ್ವಲ್ಪ ಅರಿವು ಮೂಡಿಸುತ್ತಾ ಇದ್ದೀನಿ.
ವಿಶ್ವರಂಗಭೂಮಿ ದಿನ, ರಂಗಭೂಮಿಯ ಬಗ್ಗೆ ನಿಮ್ಮ ಅನಿಸಿಕೆ?
ತಾಳ್ಮೆ, ಹಸಿವು, ಕರುಣೆ, ವಿಶ್ವಾಸ, ಬದುಕು ಎಂದರೆ ಹೇಗೆ ಅಂತ ತೋರಿಸಿ ಕೊಟ್ಟಂತ ತಾಯಿ ರಂಗಭೂಮಿ. ಪ್ರತಿಯೊಬ್ಬರು ರಂಗಭೂಮಿಯನ್ನು ತಮ್ಮ ತಮ್ಮ ಹಳ್ಳಿಗಳಲ್ಲಿ ರಂಗ ಚಟುವಟಿಕೆಗಳನ್ನು ಮಾಡಿಸುವುದರ ಮುಖಾಂತರ ರಂಗಭೂಮಿಯನ್ನು ಉಳಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ.
ಸಿಂಪಲ್ ಮನುಷ್ಯರಾಗಿದ್ದು ನೀವೂ ಹೇಗೆ ರಂಗಭೂಮಿಯ ನಂಟು ಬೆಳೆಯಿತು? ಮತ್ತು ರಂಗಭೂಮಿಯಲ್ಲಿ ನೀವೂ ಮಾಡಿದ ಸಾಧನೆಗಳು ಅಂದರೆ ನಾಟಕಗಳು, ನಿರ್ದೇಶನ ಮುಂತಾದವು ಅವುಗಳ ಬಗ್ಗೆ ಸಂಪೂರ್ಣವಾಗಿ ಹೇಳಿ?
ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಸಾಮಾಜಿಕ ನಾಟಕಗಳನ್ನು ನೋಡುತ್ತಿದ್ದೆ. ಮತ್ತೆ ದೊಡ್ಡಾಟ ನೋಡುತ್ತಾ ನೋಡುತ್ತಾ ಬೆಳೆದವನು. ನಮ್ಮೂರಲ್ಲಿ ನಾಟಕ ತಾಲೀಮು ನಡೆದಿರುವಾಗ ನಾನು ಅವರ ಜೊತೆ ಡೈಲಾಗ್ ಹೇಳುತ್ತಾ ಹೇಳುತ್ತಾ ಆಸಕ್ತಿ ಜಾಸ್ತಿ ಆಗ್ತಾ ಬಂತು. ಹೀಗೆ ಇದನ್ನು ವೃತ್ತಿಯಾಗಿ ತೊಗೋಬೇಕು ಎಂದು ಒಂದು ವರ್ಷದ ನಾಟಕ ಡಿಪ್ಲೊಮಾ ತರಬೇತಿ ಪಡೆದುಕೊಂಡೆ. ನಂತರ ರಂಗಭೂಮಿಯಲ್ಲಿ ತುಂಬಾ ಅರಿವು ಮೂಡಿತು. ನಾಟಕ ಅಭಿನಯ ನಿರ್ದೇಶನ ಒಲವು ಜಾಸ್ತಿ ಆಗ್ತ ಬಂತು. ನಾವು ಥಿಯೇಟರ್’ನಲ್ಲಿದ್ದಾಗ ಅವತಾರಗಳು ಅಂತ ಲಕ್ಷ್ಮಣ್ ಪಿರಗಾರ್ ನಿರ್ದೇಶನ ಮಾಡಿದ್ದರು. ಆ ನಾಟಕಕ್ಕೆ ನಾನು ಮೊದಲು ಸಹ ನಿರ್ದೇಶಕನಾದೆ. ನಂತರ ನಿರ್ದೇಶನದ ಬಗ್ಗೆ ಹುಡುಕಾಟ ಮಾಡ್ತಾ ಮಾಡ್ತಾ ಕಲಿತಾ ಇದೀನಿ. ಮತ್ತೊಂದು 3-4 ನಾಟಕಗಳನ್ನು ನಿರ್ದೇಶನ ಮಾಡಿದೆ. ಕಾಲೇಜ್ ಪ್ರೊಡಕ್ಷನ್ಸ್, ಮತ್ತೆ ಮಕ್ಕಳ ನಾನು ರಚಿಸಿದ ನಾಟಕ ಒಳಮನಸ್ಸು ಅನ್ನೋದು ನನಗೆ ತುಂಬಾ ತೃಪ್ತಿ ಕೊಟ್ಟಿದೆ. ಆ ನಾಟಕ ನಮ್ಮೂರಲ್ಲೇ ಮಾಡಿಸಿ ನಮ್ಮ ಜನರಲ್ಲಿ ಮೂಢನಂಬಿಕೆ ಶೂನ್ಯ ಮಾಡಬೇಕೆನ್ನುವುದು ಒಂದು ಆಸೆ.
ಇತ್ತೀಚೆಗೆ ನೀವು ಮಾಡಿದಂತ ಡಿಎಂಸಿ ಟ್ರೇಲರ್’ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.. ನಿರ್ದೇಶನ ಹೇಗೆಲ್ಲಾ ತಯಾರಿ ಮಾಡಿಕೊಂಡಿರಿ?
ಡಿಎಂಸಿ ಅನ್ನೋ ಸಿನಿಮಾದ ಟ್ರೈಲರ್ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗ್ತಿದೆ. ಇದಕ್ಕೆ ಮೂಲಕಾರಣ ಎಂ.ಎಂ. ಶ್ರೀನಿವಾಸ್ ಇವಾಗ ಡಿಎಂಸಿ ಟ್ರೈಲರ್ ಜನಗಳ ಮನಸಲ್ಲಿ ಮೂಡಿದೆ ಅಂದ್ರೆ ಅದಕ್ಕೆ ಕಾರಣ ಇವರೇ ನಮ್ಮುಂದೆ ಆದಂತ ಘಟನೆಗಳು ಮತ್ತೆ ನಾವು ಓದಿಕೊಂಡಿರುವ ಪುಸ್ತಕಗಳು ಹಾಗೆ ಅನುಭವ ಇವುಗಳನ್ನೆಲ್ಲ ಇಟ್ಕೊಂಡು ಮಾಡಿದಂತ ಸಿನಿಮಾ ಡಿಎಂಸಿ.
ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಥಿಯೇಟರ್’ಗೆ ಬರ್ತಿಲ್ಲ, ಒಬ್ಬ ಪ್ರೇಕ್ಷಕ ಸ್ಥಾನದಲ್ಲಿ ನಿಂತು ಏನು ಹೇಳಲು ಇಷ್ಟ ಪಡ್ತೀರಿ..??
ಇತ್ತೀಚಿಗೆ ದಿಯಾ ಅಂತ ಒಂದು ಸಿನಿಮಾ ಬಂತು ಇವಾಗ ದಿಯಾ ಚಿತ್ರವನ್ನು ಅಮೆಜಾನ್ ಪ್ರೇಂ ಅಲ್ಲಿ ನೋಡಿ ಎಂಥಾ ಅದ್ಬುತ ಚಿತ್ರ, ಇಂಥಾ ಸಿನಿಮಾವನ್ನು ನಮ್ಮ ಜನ ಥಿಯೇಟರ್ ಅಲ್ಲಿ ಗೆಲ್ಲಿಸಲಿಲ್ಲ. ಹಾಗೆ ಹೀಗೆ ಅಂತ ಸಂತಾಪ ವ್ಯಕ್ತಪಡಿಸುತ್ತಾರಲ್ಲ. ಅವರಿಗೆಲ್ಲ ಒಂದು ಪ್ರಶ್ನೆ ಅಂದ್ರೆ, ಇಡೀ ಚಿತ್ರರಂಗವೇ ನಿಂತು ಸಿನಿಮಾ ಚೆನ್ನಾಗಿದೆ. ಬಂದು ನೋಡಿ ಬಂದು ನೋಡಿ ಅಂತ ಬಂಡ್ಕೊಂಡಾಗ ನೀವೆಲ್ಲ ಯಾಕೆ ಥಿಯೇಟರ್ ಗೆ ಬರಲಿಲ್ಲ. ಈ ಪ್ರಶ್ನೆ ನನ್ನಲ್ಲೂ ಕೂಡ ಇದೆ ಸರ್. ಒಳ್ಳೆ ಸಬ್ಜೆಕ್ಟ್ ಮೇಕಿಂಗ್ ಸಿನಿಮಾ ಮಾಡಿದ್ರೆ ಸಿನಿಮಾ ಗೆಲ್ಲುತ್ತೆ. ಉದಾಹರಣೆಗೆ ದಿಯಾ ಸಿನಿಮಾ ಥಿಯೇಟರ್’ನಲ್ಲಿ ಅಷ್ಟಿರಲಿಲ್ಲ. ಇವಾಗ ಸೋಶಿಯಲ್ ಮೀಡಿಯಾದಲ್ಲಿ ಅದರದೇ ಹವಾ ಇದೆ
ಮುಂದಿನ ಯೋಚನೆ ಹಾಗೂ ಯೋಜನೆಗಳು?
ಕಥೆಗಳನ್ನು ಮಾಡಿದ್ದೇವೆ ನಿರ್ಮಾಪಕರ ಹುಡುಕಾಟದಲ್ಲಿದ್ದೇವೆ ಮತ್ತೆ ಹೇಳುವೆ.
ಕೊನೆಯದಾಗಿ…
ರಂಗಭೂಮಿ ನನ್ನ ದೇಹ ಹಾಗೂ ನನ್ನ ಪ್ರಜ್ಞೆಯಿಂದ ಬೇರ್ಪಡಿಸಿಬಿಟ್ಟರೆ ನನ್ನ ಅಸ್ತಿತ್ವವೇ ಇಲ್ಲ!
ಹೀಗೆ, ಬಹುಮುಖ ಪ್ರತಿಭೆಯಾಗಿರುವ ಪವನಕುಮಾರ ಬೂದಿಹಾಳ ಅವರ ಎಲ್ಲಾ ಕನಸು, ಯೋಜನೆ, ಯೋಚನೆಗಳಿಗೆ ಶುಭವಾಗಲಿ.
ಶುಭ ಹಾರೈಕೆಗಳು..
ಸಂದರ್ಶನ: ವಿಶ್ವಪ್ರಕಾಶ ಮಲಗೊಂಡ, (ವಿಜಯಪೂರ-ಸಿಂದಗಿ)
Get in Touch With Us info@kalpa.news Whatsapp: 9481252093
Discussion about this post