ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ/ಬೆಂಗಳೂರು: ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಸಂಫೂರ್ಣ ಯಶಸ್ವಿಯಾಗಿದ್ದು, ಸಂಜೆ 5 ಗಂಟೆಗೆ ದೇಶದ ಜನತೆ ಚಪ್ಪಾಳೆ, ಜಾಗಟೆ ಬಾರಿಸಿ, ಶಂಖ ಊದಿ ಧನ್ಯವಾದ ಅರ್ಪಿಸಿದ್ದಾರೆ.
ಇಂದು ಮುಂಜಾನೆಯಿಂದಲೇ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳು ಮಾತ್ರವಲ್ಲ ಗ್ರಾಮೀಣ ಭಾಗದಲ್ಲಿಯೂ ಸಹ ಎಲ್ಲವೂ ಸ್ಥಬ್ದಗೊಂಡಿತ್ತು. ಜನರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಉಳಿದಿದ್ದು, ಮಾತ್ರವಲ್ಲ, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸಾರಿಗೆ ಸಂಚಾರ, ರೈಲು ಸಂಚಾರ ಇಲ್ಲದ ಕಾರಣ ಎಲ್ಲವೂ ಬಿಕೋ ಎನ್ನುತ್ತಿದ್ದವು.
ಧನ್ಯವಾದ ಅರ್ಪಣೆ
ಕೊರೋನಾ ವಿರುದ್ಧ ಹೋರಾಡುತ್ತಾ ತಮ್ಮ ಜೀವವನ್ನೇ ಪಣಕ್ಕಿಟ್ಟಿರುವ ವೈದ್ಯಕೀಯ ಸಮೂಹ ಸೇರಿದಂತೆ ಇದಕ್ಕಾಗಿ ದುಡಿಯುತ್ತಿರುವ ಜೀವಗಳಿಗೆ ಧನ್ಯವಾದ ಹೇಳುವ ಸಲುವಾಗಿ ಇಂದು ಸಂಜೆ 5 ಗಂಟೆಯಿಂದ ಐದು ನಿಮಿಷಗಳ ಕಾಲ ಚಪ್ಪಾಳೆ, ಜಾಗಟೆ ಹೊಡೆಯುವಂತೆ ಅಥವಾ ಶಂಖ ಊದುವಂತೆ ಅಥವಾ ಯಾವುದೇ ರೀತಿಯಲ್ಲಿ ನಾದ ಮಾಡುವ ಮೂಲಕ ಧನ್ಯವಾದ ಅರ್ಪಿಸಲು ಪ್ರಧಾನಿ ಮೋದಿ ಕರೆ ನೀಡಿದ್ದರು.
ಪ್ರಧಾನಿಯವರ ಈ ಕರೆಗೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಎಲ್ಲೆಡೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಗಣ್ಯಾತಿಗಣ್ಯರಿಂದ ಮೊದಲ್ಗೊಂಡು, ಜನ ಸಾಮಾನ್ಯರು, ಪುಟ್ಟ ಮಕ್ಕಳೂ ಸಹ ಇದನ್ನು ಪಾಲಿಸಿ ಧನ್ಯವಾದ ಅರ್ಪಿಸಿದ್ದಾರೆ.
ಜನರು ಸ್ಪಂದಿಸಿದ ರೀತಿ ಹೀಗಿತ್ತು:
ಮುಖ್ಯಮಂತ್ರಿ ಶ್ರೀ @BSYBJP ಅವರು ಸಂಜೆ 5 ಗಂಟೆಗೆ ತಮ್ಮ ಕುಟುಂಬದವರೊಂದಿಗೆ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ #ಕೊವಿಡ್19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.#Covid_19 #CoronaInKarnataka #FightbackIndia pic.twitter.com/JkF9U0AYBX
— CM of Karnataka (@CMofKarnataka) March 22, 2020
ಸಮಸ್ತ ಮೈಸೂರು ಜನತೆಯ ಪರವಾಗಿ
ಶ್ರೀಮಾನ್ ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ #ಕೊರೊನಾ ಹೋರಾಟಗಾರರಿಗೆ ಚಪ್ಪಾಳೆಯ ಪ್ರೋತ್ಸಾಹ 🙏Mysuru Maharaja @YaduveerWodiyar clapping along with Prince Adyaveer Wodeyar for our Unsung Heros #JanataCurfew #Covid_19india #5baje5minute pic.twitter.com/CvNYSKYFIq
— Anjali Nataraj (@AnjaliKoundinya) March 22, 2020
Discussion about this post