No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
  • Advertise With Us
  • Grievances
  • About Us
  • Contact Us
Monday, September 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸ್ವಯಂ ರುದ್ರ ದೇವರೇ ಹೇಳುವಂತೆ ರಾಮನಾಮವೆಂಬುದು ಸಹಸ್ರನಾಮಗಳಿಗೆ ಸಮ

kalpa News by kalpa News
November 30, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಪ್ರಭು ಶ್ರೀ ರಾಮನೆಂಬ ಮಾಣಿಕ್ಯ ಪರ್ವತ: ಮರ್ಯಾದಾ ಪುರುಷೋತ್ತಮನ ಅನವರತ ನೆನೆ ಮನವೇ!
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ|
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ||

ರಾಮನಾಮವು ಸಾವಿರ ನಾಮಗಳ ಸಾರ ಸರ್ವಸ್ವ ಭಗವಂತನ ಒಂದು ನಾಮವಾಗಿದೆ. ಪಾರ್ವತೀ ದೇವಿಗೆ ರುದ್ರದೇವರು ರಾಮನಾಮದ ಶಕ್ತಿಯನ್ನು ಹೇಳುತ್ತಾರೆ.ಈ ಅಂಶವನ್ನು ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ ಕಾಣಬಹುದು. ಮನೋನಿಯಾಮಕರಾದ ರುದ್ರದೇವರು ತನ್ನ ಮಡದಿಗೆ ಶ್ರೀರಾಮನಾಮದ ಮಹಿಮೆಯನ್ನು ಹೀಗೆ ವರ್ಣಿಸುತ್ತಾನೆ.ಪಾರ್ವತಿ ಶಿವನನ್ನು ಕೇಳುತ್ತಾಳೆ “ಸ್ವಾಮಿ ,ವಿಷ್ಣು ಸಹಸ್ರ ನಾಮಪವಿತ್ರವಾದುದು. ಆದರೆ ಸಾಮಾನ್ಯ ಜನರು ಇದನ್ನು ಪಠಿಸಲುಕಷ್ಟವಾಗ ಬಹುದು. ಜನಸಾಮಾನ್ಯರಿಗೆ ಸಾದ್ಯವಾಗಲು ಬೇರೆ ಉಪಾಯವಿದೆಯೆ? ಆಗ ಶಿವ ಹೇಳುತ್ತಾನೆ “ ಹೌದು ದೇವಿ, ವಿಷ್ಣು ಸಹಸ್ರನಾಮದಲ್ಲಿ ಶ್ರೀ ರಾಮನ ಬಗೆಗಿನ ಒಂದು ಶ್ಲೋಕವಿದೆ.

‘ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ’ ಎನ್ನುತ್ತಾರೆ. ಅಂದರೆ ರಾಮ ರಾಮ ರಾಮ ಎಂದು ಮೂರು ಉಚ್ಛರಿಸಿದರೆ ಸಾಕು. ಸಹಸ್ರನಾಮವನ್ನು ಪಾರಾಯಣ ಮಾಡಿದ ಫಲ ಲಭಿಸುತ್ತದೆ ಎಂದು. ಸ್ವಯಂ ರುದ್ರದೇವರೇ ಹೇಳುವಂತೆ ರಾಮನಾಮವೆಂಬುದು ಸಹಸ್ರನಾಮಗಳಿಗೆ ಸಮ. ರಾಮನಾಮವು ಸಾರಸರ್ವಸ್ವವಾದ ರೂಪವಾಗಿದೆ. ಶ್ರೀರಾಮ ನಾಮಕ್ಕೆ ಅಷ್ಟೊಂದು ಮಹತ್ವ ಮತ್ತು ಶಕ್ತಿ ಇದೆ.

ರಾಮ ನಾಮಮಹಿಮೆ
ಪದ್ಮ ಪುರಾಣದಲ್ಲಿ ರುದ್ರದೇವರು ಜಪಿಸಿದ ರಾಮಮಂತ್ರ ,ರುದ್ರ ದೇವರು ಪಾರ್ವತಿಗೆ ಹೇಳಿದ ರಾಮರಹಸ್ಯ ಎಲ್ಲವನ್ನೂ ವಿಸ್ತಾರವಾಗಿ ಹೇಳಿದಾರೆ.ಒಮ್ಮೆ ಪಾರ್ವತೀದೇವಿಯು ರುದ್ರನು ಸದಾಕಾಲ ಬಾಯಲ್ಲಿ ಏನೋಮಂತ್ರ ಹೇಳುವುದನ್ನು ನೋಡಿ ರುದ್ರನನ್ನು ಪ್ರಶ್ನಿಸುತ್ತಾಳೆ, ಲೋಕಕ್ಕೆಎಲ್ಲಾ ಸರ್ವೋತ್ತಮನು ನೀನೇ. ನಿನಗೆ ಯಾರೂ ಒಡೆಯರಿಲ್ಲ ಎಂದು ನಾನು ತಿಳಿದಿದ್ದೇನೆ. ಆದರೆ ನೀನು ಯಾರ ಮಂತ್ರ ಜಪ ಮಾಡುತ್ತಿದ್ದೀ? ಯಾತಕ್ಕಾಗಿ ಮಾಡುತ್ತಿದ್ದೀ? ಎಂದು ಪ್ರಶ್ನಿಸುತ್ತಾಳೆ. ಆಗ ರುದ್ರದೇವರು ನಾನು ಕೇವಲ ತೋರಿಕೆಗಾಗಿ ಜಗತ್ತಿನ ಒಡೆಯ ಎಂದು ತೋರಿಸಿಕೊಳ್ಳುತ್ತಿದ್ದೇನೆ. ನಾನು ಭಗವಂತನಾದ ವಿಷ್ಣುವಿನ ಅಪ್ಪಣೆಯಂತೆ ಈ ರೀತಿಯಾದ ನಟನೆ ಮಾಡುತಿದ್ದೇನೆ, ಜಗತ್ತಿಗೆ ನಾನು ಸರ್ವೋತ್ತಮ ಎಂದು ತೋರಿಸಿದ ಪಾಪ ಪರಿಹಾರಕಾಗಿ ನಾನು ಸದಾಕಾಲ ಭಗವಂತನ ಆದೇಶದಂತೆ ವಾಸುದೇವ ಸಹಸ್ರನಾಮವನ್ನು(ವಿಷ್ಣುಸಹಸ್ರನಾಮ) ಪಠಿಸುತ್ತಿದ್ದೇನೆ. ಇದರಿಂದ ನಾನು ನನ್ನ ವೈಷ್ಣವವ್ರತವನ್ನು ಆಚರಿಸಿದಂತಾಗುತ್ತದೆ ಎಂದು ಹೇಳುತ್ತಾನೆ. ಆಗ ಪಾರ್ವತಿದೇವಿಯು ರುದ್ರನ ಸಮೀಪ ವೈಷ್ಣವ ವ್ರತಾಚರಣೆಯ ಮಹತ್ವ, ವಿಧಿ ವಿಧಾನಗಳನ್ನು ಕೇಳಿ ತಿಳಿದುಕೊಳ್ಳುತ್ತಾಳೆ. ನಂತರ ಪಾರ್ವತೀದೇವಿಯು ವಿಷ್ಣುವಿನ ಪ್ರೀತಿಗಾಗಿ ತನಗೂ ವಾಸುದೇವ ಸಹಸ್ರನಾಮವನ್ನು ಉಪದೇಶಿಸುವಂತೆ ಹೇಳುತ್ತಾಳೆ, ಆಗ ರುದ್ರದೇವನು ಪಾರ್ವತಿಗೆ ಈ ವಿಷ್ಣುಸಹಸ್ರನಾಮವನ್ನು ಉಪದೇಶಿಸುತ್ತಾರೆ ಕೊನೆಗೆ ಪಾರ್ವತಿಯು ಒಂದು ವ್ರತವನ್ನು ತೊಡುತ್ತಾಳೆ. ಇನ್ನು ಮುಂದೆ ನಾನು ಪ್ರತಿನಿತ್ಯ ಊಟಮಾಡುವ ಮೊದಲು ವಿಷ್ಣು ಸಹಸ್ರನಾಮವನ್ನು ಹೇಳಿಯೇ ನಂತರ ಆಹಾರ ಸ್ವೀಕರಿಸುವುದು ಎಂದು.ಒಂದು ದಿನ ರುದ್ರದೇವರು ಏಕಾದಶೀ ಮಾಡಿ ದ್ವಾದಶೀ ದಿವಸ ಪಾರಣೆ ಮಾಡುವಾಗ ಪಾರ್ವತೀದೇವಿಯನ್ನು ಜೊತೆಯಲ್ಲಿ ಊಟಮಾಡುವ ಬಾ ಎಂದು ಕರೆಯುತ್ತಾರೆ,

ತತಃ ಕತಿಪಯಾಹಸ್ಸು ದ್ವಾದಶ್ಯಾಂ ವೃಷಭಧ್ವಜಃ|
ಕೈಲಾಸ ಶಿಖರೇ ಒ ವಿಷ್ಣುಮಾರಾಧ್ಯ ಶಂಕರಃ|
ಉಪವಿಷ್ಟಸ್ತತೋ ಭೋಕ್ತುಂ ಪಾರ್ವತೀಂಆಕರೋಜೆಬ್ರವೀತ್|
ಪಾರ್ವತ್ಯೇಹಿ ಮಯಾ ಸಾರ್ಧಂ ಬೊಳುಭುವನನಂದಿತೇ||’ ಎಂದು.

ಆಗ ಪಾರ್ವತಿಯು ಹೇಳುತ್ತಾಳೆ. ನಾನು ಇನ್ನುವಿಷ್ಣು ಸಹಸ್ರನಾಮವನ್ನು ಹೇಳಿ ಮುಗಿಸಲಿಲ್ಲ. ಅದನ್ನು ಮುಗಿಸಿಯೇ ಊಟ ಮಾಡುವುದು ಎಂದು ನನ್ನ ವ್ರತ ಎಂದು. ಆಗ ರುದ್ರದೇವರು ನಗುತ್ತಾ ಹೇಳುತ್ತಾರೆ. ಇಂದು ನಮ್ಮ ದಾಂಪತ್ಯ ಪಾವನವಾಯಿತು. ನಾವಿಬ್ಬರೂ ವೈಷ್ಣವ ದಂಪತಿಗಳಾದೆವು. ಇಂತಹ ವೈಷ್ಣವ ದೀಕ್ಷೆ ಬಹಳದುರ್ಲಭವಾದದ್ದು. “ದುರ್ಲಭಾ ವೈಷ್ಣವೀ ಭಕ್ತಿ:ಭಾಗಧೇಯಂ ವಿನೇಶ್ವರಿ’ ಎಂದು. ನಂತರ ಹೇಳುತ್ತಾರೆ, ಇಂತಹ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮದ ಪಾರಾಯಣದ ಸಕಲ ಪುಣ್ಯಗಳೂ ಬಹಳ ಸುಲಭದಲ್ಲಿ ಪ್ರಾಪ್ತಿಯಾಗುವ ಉಪಾಯವನ್ನು ಹೇಳುತ್ತೇನೆ ಎಂದು ಹೇಳಿ ಈ ಶ್ಲೋಕವನ್ನು ಹೇಳುತ್ತಾರೆ.“ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ!” ಎಂದು.

ಅಂದರೆ ಎಲೆ ಪಾರ್ವತಿಯೇ, ನಾನು ರಾಮನಾಮವೆಂಬ ಎರಡಕ್ಷರದ ಮನೋಹರವಾದ ಮಂತ್ರದಲ್ಲಿ ರಮಿಸುತ್ತಿದ್ದೇನೆ. ಈ ರಾಮ ನಾಮವು ವಿಷ್ಣುಸಹಸ್ರನಾಮಕ್ಕೆ ಸಮಾನವಾದ ಮಂತ್ರವು. ಇಷ್ಟೇ ಅಲ್ಲ ನನಗೆ ರಕಾರವು ಮೊದಲಾಗಿ ಉಳ್ಳ ಯಾವ ನಾಮವನ್ನು ಕೇಳಿದರೂ ಅದು ರಾಮನಾಮದಂತೆಯೇ ಕೇಳಿಸುತ್ತದೆ. ಅದರಿಂದ ನನ್ನ ಮನಸ್ಸುಪ್ರಸನ್ನವಾಗುತ್ತದೆ. ಅಂತಹ ಪ್ರಸನ್ನತೆ ನೀಡುವ ಶಕ್ತಿಯು ರಾಮನಾಮಕ್ಕಿದೆ ಎಂದು ಹೇಳುತ್ತಾರೆ. ಅಲ್ಲದೇ ಪಾರ್ವತಿ ಈ ರಾಮನಾಮವನ್ನು ಭಕ್ತಿಯಿಂದ ಪಠಿಸಿ ನೀನು ಊಟಕ್ಕೆ ಕುಳಿತುಕೋ, ಅದರಿಂದ ನೀನು ಸಹಸ್ರನಾಮ ಪಾರಾಯಣ ಮಾಡಿದ ಪುಣ್ಯಕ್ಕೆ ಭಾಗಿಯಾಗುತ್ತೀ ಎಂದು ಹೇಳುತ್ತಾರೆ.

ಪಾರ್ವತಿಯೂ ಅದರಂತೆ ರಾಮಮಂತ್ರವನ್ನು ಜಪಿಸಿ ರುದ್ರನೊಂದಿಗೆ ಊಟವನ್ನು ಮಾಡುತ್ತಾಳೆ. ಊಟ ಮುಗಿದ ನಂತರ ರುದ್ರನಲ್ಲಿ ಪ್ರಶ್ನಿಸುತ್ತಾಳೆ, ನೀನು ರಾಮನಾಮ ಸಹಸ್ರನಾಮಕ್ಕೆ ಸಮಾನಾದ ಮಂತ್ರ ಎಂದು ಹೇಳಿದ್ದಿ. ಈ ರಾಮನಾಮದ ಮಹಿಮೆ ಏನು? ಇಂತ ನಾಮಗಳು ಇನ್ನೂ ಅನೇಕ ಇವೆಯೇ? ಎಂದು ಪ್ರಶ್ನೆ ಮಾಡುತ್ತಾಳೆ, ಆಗ ರುದ್ರದೇವರು,
“ಎಷ್ಟೋ ರೇಕೈಕನಾಮೈವ ಸರ್ವವೇದಾಧಿಕಂ ಮತಂ|
ತಾಹಿ ನಾಮಸಹಸ್ರಾಣಿ ರಾಮನಾಮ ಸಮಂ ಮತಂ||
ವಿಷ್ಣುವಿನ ಒಂದೊಂದು ನಾಮವೂ ವೇದಗಳಿಗಿಂತಲೂ ಹೆಚ್ಚಿನವು. ಅಂತಹ ಸಾವಿರನಾಮಗಳು ರಾಮ ಎಂಬ ಒಂದು ನಾಮಕ್ಕೆ ಸಮವು. ಎಲ್ಲಾಮಂತ್ರಗಳನ್ನೂ ಜಪಿಸಿದರೂ ಎಲ್ಲಾ ವೇದಗಳನ್ನು ಓದಿದರೂ ಎಷ್ಟು ಪುಣ್ಯ ಬರುತ್ತದೆಯೋ, ಅದಕ್ಕಿಂತ ಕೋಟಿಯಷ್ಟು ಹೆಚ್ಚು ಪುಣ್ಯವು ಈ ರಾಮನಾಮಮಂತ್ರದ ಜಪದಿಂದ ಬರುತ್ತದೆ. ಈ ರಾಮನ ನಾಮಗಳೂ ಸಾವಿರಕ್ಕೆ ಹೆಚ್ಚಿನದ್ದಿವೆ. ಲೋಕದಲ್ಲಿ ಲೌಕಿಕ, ವೈದಿಕ ರೂಪವಾದ ಎಷ್ಟು ಶಬ್ದಗಳಿವೆಯೋ ಅವುಗಳಿಗಿಂತಲು ಸಾವಿರಪಟ್ಟು ಅಧಿಕ ವುಳ್ಳ ಪುಣ್ಯವು ಈ ರಾಮ ನಾಮದ ಪಠಣವು.

ಲೌಕಿಕಾ: ವೈದಿಕಾಃ ಶಬ್ದಾಃ ಯೇ ಕೇಚಿತ್ಸಂತಿ ಪಾರ್ವತಿ|
ನಾಮಾನಿ ರಾಮಚಂದ್ರಸ್ಯ ಸಹಸ್ರಂ ತೇಷು ಚಾಧಿಕಂ||
ಜಪತಃ ಸರ್ವಮಂತ್ರಾಂಶ್ಚ ಸರ್ವ ವೇದಾಂಶ್ಚ ಪಾರ್ವತಿ|
ತಸ್ಮಾತ್ ಕೋಟಿ ಗುಣಂ ಪುಣ್ಯಂ ರಾಮನಾಮೈವ ಲಭ್ಯತೇ||
ಎಂದು ಹೇಳುತ್ತಾರೆ. ಕೊನೆಗೆ ಪಾರ್ವತಿಯ ಆಸೆಯಂತೆ ಶ್ರೀರಾಮಚಂದ್ರನ ಅಷ್ಟೋತ್ತರನಾಮಗಳನ್ನು ಅವಳಿಗೆ ಉಪದೇಶಿಸುತ್ತಾರೆ. ಕೊನೆಗೆ ಪಾರ್ವತಿಗೆ ರಾಮಾಯ ರಾಮಚಂದ್ರಾಯ…. ಎಂಬ ಮಂತ್ರವನ್ನು ಉಪದೇಶಿಸಿ ಇದನ್ನು ಸದಾಕಾಲ ಜಪಿಸಲು ಹೇಳುತ್ತಾನೆ. ಹೀಗೆ ರಾಮಮಂತ್ರದ ಬಲದಿಂದ ಗೌರೀಶಂಕರರು ಕೈಲಾಸದಲ್ಲಿ ಸುಖವಾಗಿದ್ದರು ಎಂದು ಪದ್ಮಪುರಾಣ ಹೇಳುತ್ತಿದೆ. ರುದ್ರದೇವರು ಶ್ರೀರಾಮನನ್ನು ಎಷ್ಟು ಮಾನಸಿಕವಾಗಿ ಸ್ಮರಿಸುತ್ತಿದ್ದರು ಎಂದು ಇದರಿಂದ ನಮಗೆ ತಿಳಿಯುತ್ತದೆ. ಅಲ್ಲದೇ ರುದ್ರದೇವರು ಪರಮವೈಷ್ಣವ ಕ್ಷೇತ್ರವಾದ ಕಾಶೀಕ್ಷೇತ್ರವನ್ನು ಮಹಾಸ್ಮಶಾನವನ್ನಾಗಿಸಿಕೊಂಡು ನಿರಂತರ ತಾನು ರಾಮತಾರಕ ಮಂತ್ರವನ್ನು ಜಪಿಸುತ್ತಾ ಯಾರು ವೈಷ್ಣವರು ಕಾಶೀಕ್ಷೇತ್ರದಲ್ಲಿ ಮರಣವನ್ನು ಹೊಂದುತ್ತಾರೋ ಅವರ ಕಿವಿಯಲ್ಲಿ ರಾಮತಾರಕ ಮಂತ್ರವನ್ನು ಹೇಳುತ್ತಾ ಅವರಿಗೆ ಪರ ವಾಸುದೇವರೂಪಿಯಾದ ಶ್ರೀರಾಮನ ಅನುಗ್ರಹವಾಗುವಂತೆ ಮಾಡುತ್ತಾರೆ. ಈ ವಾಸುದೇವ ರೂಪಿಯಾದ ರಾಮನೇ ಮೋಕ್ಷದಾತೃವಾದ್ದರಿಂದ ವೈಷ್ಣವರಿಗೆ ಮೋಕ್ಷ ಮಾರ್ಗವನ್ನು ಈ ರಾಮನಾಮ ಜಪದ ಮೂಲಕರುದ್ರ ದೇವರು ತೋರಿಸುತ್ತಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Dr Gururaj PoshettihalliKannada News WebsiteLatest News KannadaLord RamaLord ShivaSri RamaVishnu Sahasranamaಡಾ. ಗುರುರಾಜ ಪೋಶೆಟ್ಟಿಹಳ್ಳಿಪದ್ಮ ಪುರಾಣರಾಮನಾಮವಿಷ್ಣು ಸಹಸ್ರನಾಮ
Share217Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರು ಬದಲಾಗಲ್ಲ: ಸಚಿವ ಸೋಮಶೇಖರ್

Next Post

ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಡಿ.14-15ರಂದು ವಿಧಾನಸಭೆಯಲ್ಲಿ ಚರ್ಚೆ

kalpa News

kalpa News

Next Post

ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಡಿ.14-15ರಂದು ವಿಧಾನಸಭೆಯಲ್ಲಿ ಚರ್ಚೆ

Leave a Reply Cancel reply

Your email address will not be published. Required fields are marked *

No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL