ನವದೆಹಲಿ: ದೇಶದಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಆಧಾರ್ ಕುರಿತಾಗಿ ಐತಿಹಾಸಿಕ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಆಧಾರ್ ಕಾರ್ಡ್ ಸಾಂವಿಧಾನಿ ಮಾನ್ಯತೆ ನೀಡಿದ್ದು, ಇದರೊಂದಿಗೆ ಕೆಲವು ನಿರ್ಬಂಧಗಳನ್ನೂ ಸಹ ಹೇರಿದೆ.
ಈ ಕುರಿತಂತೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇರಿದಂತೆ ಐವರು ನ್ಯಾಯಾಧೀಶರಿದ್ದ ಪೀಠ ತೀರ್ಪು ಪ್ರಕಟಿಸಿದ್ದು, ಇದರಲ್ಲಿ ಮೂವರು ನ್ಯಾಯಾಧೀಶರು ಆಧಾರ್ ಪರವಾಗಿ ತೀರ್ಪು ನೀಡಿದ್ದು, ಇಬ್ಬರು ವಿರುದ್ದವಾಗಿ ತೀರ್ಪು ನೀಡಿದ್ದಾರೆ.
ಆಧಾರ್ ಕಾಯ್ದೆ ಕಲಂ 33(2)ನ್ನೇ ರದ್ದು ಗೊಳಿಸಿರುವ ನ್ಯಾಯಾಲಯ, ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡುವ ಜೊತೆಯಲ್ಲೇ, ಕೆಲವು ನಿರ್ಬಂಧಗಳನ್ನೂ ಸಹ ಹೇರಿದೆ.
Also read: ಯಾವುದಕ್ಕೆ ಆಧಾರ್ ಕಡ್ಡಾಯ, ಕಡ್ಡಾಯವಿಲ್ಲ: ಇಲ್ಲಿದೆ ಪಟ್ಟಿ
https://kalpa.news/what-is-aadhaar-mandatory-what-is-not-mandatory-here-is-the-list/
ರಾಷ್ಟ್ರೀಯ ಭದ್ರತಾ ವಿಚಾರಗಳಿಗೆ ಆಧಾರ್ ಕಡ್ಡಾಯಗೊಳಿಸಿರುವ ನ್ಯಾಯಾಲಯ, ಪಾನ್ ಕಾರ್ಡ್ ಪಡೆಯಲೂ ಸಹ ಕಡ್ಡಾಯ ಮಾಡಿದೆ.
ಇನ್ನು, ಹಣಕಾಸು ಉದ್ದೇಶಗಳಿಗೆ ಆಧಾರ್ ಬಳಸಿಕೊಳ್ಳುವಂತಿಲ್ಲ ಎಂದಿರುವ ಸುಪ್ರೀಂ ಖಾಸಗಿ ಸಂಸ್ಥೆಗಳು, ಸಿಬಿಎಸ್‌ಸಿ ಹಾಗೂ ನೀಟ್ ಪರೀಕ್ಷೆಗಳಿಗೂ ಸಹ ಆಧಾರ್ ಕಡ್ಡಾಯವಲ್ಲ ಎಂದು ಹೇಳಿದೆ.
ಅತ್ಯಂತ ಪ್ರಮುಖವಾಗಿ ಅಕ್ರಮ ವಲಸಿಗರಿಗೆ ಯಾವುದೇ ಕಾರಣಕ್ಕೂ ಆಧಾರ್ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ
ಇವಕ್ಕೆ ಆಧಾರ್ ಕಡ್ಡಾಯ:
ರಾಷ್ಟ್ರೀಯ ಭದ್ರತಾ ವಿಚಾರ
ಪಾನ್ ಕಾರ್ಡ್ ಪಡೆಯಲು
ಸರ್ಕಾರಿ ಸೌಲಭ್ಯ ಪಡೆಯಲು
ಐಟಿ ರಿಟರ್ನ್‌ಸ್ ಸಲ್ಲಿಸಲು
ಪ್ಯಾನ್ ನಂಬರ್‌ಗೆ ಆಧಾರ್ ಜೋಡಣೆ ಕಡ್ಡಾಯ
ಇವಕ್ಕೆ ಆಧಾರ್ ಕಡ್ಡಾಯವಲ್ಲ:
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲ
ಹಣಕಾಸು ವ್ಯವಹಾರ ಉದ್ದೇಶಗಳಿಗೆ
ಖಾಸಗಿ ಸಂಸ್ಥೆಗಳ ವ್ಯವಹಾರ, ನೇಮಕಾತಿ
ಖಾಸಗಿ ಶಿಕ್ಷಣ ಸಂಸ್ಥೆಗಳು
ಸಿಬಿಎಸ್‌ಇ, ಎನ್‌ಇಇಟಿ ಪರೀಕ್ಷೆಗೆ
ಮೊಬೈಲ್ ಸಿಮ್ ಕಾರ್ಡ್ ಪಡೆಯಲು
Discussion about this post