ನವದೆಹಲಿ: ಆ.15ರ ಈ ಬಾರಿಯ ಸ್ವತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಪಾಕಿಸ್ಥಾನ ಮೂಲದ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ಇಲಾಖೆ, ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತರಾದ ಜೆಇಎಂ ಉಗ್ರ ಸೈಯ್ಯದ್ ಮುನೀರ್ ಉಲ್ ಹಸನ್ ಖಾದ್ರಿ, ಆಶಿಕ್ ಬಾಬಾ ಹಾಗೂ ತಾರಿಕ್ ಅಹ್ಮದ್ ದಾರ್ ಎಂಬ ಉಗ್ರರು ಈ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದೆ ಎಂದಿದೆ.
2016ರಲ್ಲಿ ನಗ್ರೋಟಾ ಸೇನಾ ಕ್ಯಾಂಪ್ನಲ್ಲಿ ನಡೆದ ದಾಳಿ ವೇಳೆ ಭಾರತೀಯ ಸೇನೆಯ ನಾಲ್ವರು ಯೋಧರು ವೀರಸ್ವರ್ಗ ಸೇರಿದ್ದರು. ಎನ್ಐಎಯಿಂದ ಬಂಧಿತರಾಗಿರುವ ಈ ಮೂವರು ಉಗ್ರರು ಈ ದಾಳಿಗೆ ಸಂಬಂಧಿಸಿದವರು ಎನ್ನಲಾಗಿದೆ.
Discussion about this post