ಭದ್ರಾವತಿ: ರಾಜ್ಯದ 8 ಜಿಲ್ಲೆಗಳಲ್ಲಿ ಸುಮಾರು 60 ವೃತ್ತಿಪರ ಸೇರಿದಂತೆ ಆಯುರ್ವೇದ ವೈದ್ಯಕೀಯ ವಿದ್ಯಾ ಸಂಸ್ಥೆಗಳನ್ನು ತೆರೆದು ಎಲ್ಲಾ ವರ್ಗದ ಜನರಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಟಿಎಂಎಇಎಸ್ ಶಿಕ್ಷಣ ಸಂಸ್ಥೆ ಮುಂದಾಗಿದೆ ಎಂದು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಜೆ. ಹಿರೇಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಎಚ್ ರಸ್ತೆಯ ನಂದಿನಿ ಡೈರಿ ಸಮೀಪ ಶಿವಮೊಗ್ಗ-ಭದ್ರಾವತಿ ಮಾರ್ಗದ ಮಧ್ಯೆಭಾಗದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ಸುಸಜ್ಜಿತ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಬಡವರಿಗೆ ಕೈಗೆಟುವ ಬೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಂಸ್ಥೆಯಲ್ಲಿ ನುರಿತ 32 ಜನ ವೈದ್ಯರು ಹಾಗೂ 14 ವಿಭಾಗಗಳಲ್ಲಿ ಅನೇಕ ಮುಖ್ಯಸ್ಥರು ವೃತ್ತಿ ನಿರತ ಸೇವೆ ಸಲ್ಲಿಸುತ್ತಿದ್ದಾರೆ. ಆಯುರ್ವೇದ ಕಾಲೇಜಿನಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ 250 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಪ್ರತಿವರ್ಷ ಉತ್ತಮ ಫಲಿತಾಂಶ ಬರುತ್ತಿದ್ದು ಮಾಸಾಂತ್ಯದಲ್ಲಿ ಆರೋಗ್ಯ ಅಭಿಯಾನಗಳನ್ನು ರೂಪಿಸಲಾಗುತ್ತಿದೆ. ಗುರುಪಾರಂಪರ‌್ಯಕ್ಕೆ ಒತ್ತು ನೀಡಿ ಅನೇಕ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಜೊತೆಗೆ ಆಯುರ್ವೇದ ಪದ್ದತಿಯಲ್ಲಿ ಶಿಷ್ಯೋಪನ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಏಪ್ರಿಲ್ 1 ರಿಂದ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.
ಡಾ.ಪ್ರಕಾಶ್ ಲಕ್ವ (ಪಾರ್ಶ್ವ ವಾಯು) ರೋಗದ ಕುರಿತ ಮಾಹಿತಿ ನೀಡಿ ಮೆದುಳಿನ ರಕ್ತಸ್ರಾವದಿಂದ ವ್ಯತ್ಯಾಸವಾಗುವುದರಿಂದ ಪಾರ್ಶುವಾಯು ರೋಗ ಬರಲಿದೆ. ಆಯುರ್ವೇದ ಪದ್ದತಿಯಲ್ಲಿ ಔಷಧೋಪಚಾರ ಪದ್ದತಿಗಳಿಂದ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು. ಡಾ.ಸದಾನಂದ ಎಸ್.ಜೋಷಿ ಪಂಚಕರ್ಮ ಪದ್ದತಿಯ ಮಾಹಿತಿ ನೀಡಿ ಬೇಸಿಗೆ ಕಾಲದ ಆರೋಗ್ಯ ಅಭಿಯಾನ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಆಸ್ಪತ್ರೆಯ ಆರ್‌ಎಂಒ ಡಾ. ಅರುಣ ಕುಮಾರಿ ಮಾತನಾಡಿ, ಬಿಪಿಎಲ್ ಹೊಂದಿರುವ ಕಾರ್ಡುದಾರರಿಗೆ ಅತ್ಯಂತ ಕಡಿಮೆದರದಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿರುವ ಆಸ್ಪತ್ರೆಯಲ್ಲಿ ಎಲ್ಲಾ ಕಾಯಿಲೆಗಳ ಘಟಕಗಳಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಏಪ್ರಿಲ್ 1 ರಿಂದ 13 ರವರೆಗೆ ಪಕ್ಷಪಾತ ಅಭಿಯಾನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ವೇಳೆಯಲ್ಲಿ ಭೇಟಿ ನೀಡಿ ಸೌಲಭ್ಯಗಳ ವಿವರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post