Brothers and Sisters of America (Bharath)
ವಿಶ್ವವನ್ನು ವಿವೇಕದಿಂದ ಭಾರತದತ್ತ ನೋಡುವಂತೆ ಮಾಡಿದ ವಿರಾಟ್ ಭಾಷಣಕ್ಕೆ 125 ವರ್ಷಗಳು. ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿದ್ದು, ಭಾರತವೆಂದರೆ ಬರೀ ಭೂಮಿಯ ತುಂಡು ಎಂದು ಭಾವಿಸಿದ್ದವರ ಮುಂದೆ ಭಾರತದ ಅಂತಃಸತ್ವವನ್ನು ತೆರೆದಿಟ್ಟು, ಭಾರತ – ಭಾರತೀಯರ ಬಗೆಗಿನ ಅನೇಕ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ, “ಜಗತ್ತಿಗೆ ದೊರೆತ ಹೊಸ ಸಂತ” ಎಂದು ಬಣ್ಣಿಸಿಕೊಂಡ ಭಾರತವೆಂಬ ಅಭಿಜಾತ ಪರಂಪರೆಯ ಬ್ರಾಂಡ್ ಅಂಬಾಸಿಡರ್.
ದಾಸ್ಯದಲ್ಲಿದ್ದ ಭಾರತವನ್ನು ಹಿಂದೆಕಟ್ಟಿಕೊಂಡು, ಸಂಕುಚಿತತೆಯಿಂದ ವೈಚಾರಿಕ ದಾಸ್ಯದಲ್ಲಿ ಬಂಧಿಯಾಗಿದ್ದ ಪಶ್ಚಿಮದ ಜೊತೆಗೆ ಹೋರಾಡಿದ್ದು ಮಾನವಾತೀತ ಸಾಹಸ, ಸಾರ್ಥಕತೆ.
ಭಾವ ಜೋಡಣೆಯ ಭಾಷಾಶಕ್ತಿಯಿಂದ ಭಾಷಣದಿಂದಲೂ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಸ್ವಾಮೀಜಿ ಭಾಷಣಕ್ಕೆ 125ನೇ ಸಂಭ್ರಮ. ಭಾರತದ ಸ್ವಧರ್ಮ, ಸ್ವಾಭಿಮಾನ, ಸಾಕ್ಷಾತ್ಕಾರ ದಿನಾಚರಣೆಯ ಶುಭಾಶಯಗಳು.
ಅನರ್ಘ್ಯ ಪ್ರೀತಿಯನ್ನು ಸೂಸುವ ಭಾಷಣದ ಆರಂಭದ ಸಾಲುಗಳಂತೆ, ಕೊನೆ ಸಾಲುಗಳೂ ಮತಾಂಧತೆಯ ಹುಚ್ಚಾಟದ ಪ್ರಸ್ತುತ ಸನ್ನಿವೇಶಕ್ಕೆ ಮುಖ್ಯ: “…ಖಡ್ಗ ಅಥವಾ ಲೇಖನಿ ಮೂಲಕವಾಗಲಿ ಎಲ್ಲಾ ಮತಾಂಧತೆಯ, ಅನ್ಯಮತ ಹಿಂಸೆಯ ಮತ್ತು ಒಂದೇ ಗುರಿಯೆಡೆಗೆ ನಡೆಯುತ್ತಿರುವ ದಾರಿಗಳಲ್ಲಿ ಆದ ಮನಸ್ತಾಪಗಳೆಂಬ ಭೂತಗಳ ಅಂತ್ಯಕ್ರಿಯೆಯನ್ನು ಜಗತ್ತಿಗೆ ಸೂಚಿಸುವ ಧ್ವನಿಯಾಗಲಿ (ವಿಶ್ವಧರ್ಮ ಸ.) ಎಂಬುದೇ ನನ್ನ ಆಶಯ..
-ಲೇಖನ: ಶ್ರೇಯಾಂಕ್ ಎಸ್. ರಾನಡೆ
Discussion about this post