ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ನಡೆದಿದ್ದು, ಇಲ್ಲಿ ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಮಸೀದಿಗಳಲ್ಲೂ ಸಹ ಮಹಿಳೆಯರಿಗೆ ನಿಷೇಧ ಹೇರಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಹೇಳಿದೆ.
ಸಿಜೆಐ ದೀಪಕ್ ಮಿಶ್ರಾ ಅವರ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ನಾಲ್ಕು ದಿನಗಳಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಇಂದು ತೀವ್ರವಾದ ವಿಚಾರಣೆ ನಡೆದಿದೆ. ಈ ವೇಳೆ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ಹೇರಿರುವುದು ಸಂಪ್ರದಾಯದ ಭಾಗ ಎಂದು ಹೇಳುವುದಾದರೆ ಅದನ್ನು ಸಾಬೀತುಮಾಡಿ ಎಂದಿತ್ತು.
ಈ ವೇಳೆ ಇಂದು ದೇವಾಲಯದ ಪರವಾಗಿ ವಾದ ಮಂಡಿಸಿದ ಸಿಂಘ್ವಿ, ಮಹಿಳೆಯರ ದೈಹಿಕ ಕಾರಣಗಳಿಗಾಗಿ ಪ್ರವೇಶ ನಿಷೇಧ ಹೇರಲಾಗಿದೆ. ದೇವಾಲಯ ಪ್ರವೇಶಿಸುವ ಪ್ರತಿ ಮಹಿಳೆಗೆ ಮುಟ್ಟಿನ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲದ ವಿಚಾರ. ಹೀಗಾಗಿ, ಅಯ್ಯಪ್ಪ ಸ್ವಾಮಿಯ ಮೇಲೆ ನಂಬಿಕೆ ಇಟ್ಟುಕೊಂಡು ದಶಕಗಳಿಂದಲೂ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ ಎಂದಿದ್ದಾರೆ.
Discussion about this post