ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕಾವಲ್ ಬೈರಸಂಧ್ರದಲ್ಲಿ ಗಲಭೆ ನಡೆಸಿದ ಪುಂಡರ ಗುಂಪಿನಲ್ಲಿ ಯಾರನ್ನೂ ಬಿಡುವ ಮಾತೇ ಇಲ್ಲ. ಒಬ್ಬೊಬ್ಬರನ್ನು ಹುಡುಕಿ ಹೆಡೆಮುರಿ ಕಟ್ಟುತ್ತೇವೆ ಎಂದು ಸಚಿವ ಆರ್. ಆಶೋಕ್ ಹೇಳಿದ್ದಾರೆ.
ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಇದೊಂದು ಪೂರ್ವನಿಯೋಜಿಕ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಾಳೆ ಮುಂಜಾನೆ ವೇಳೆಗೆ ಮತ್ತಷ್ಟು ಕೆಎಸ್’ಆರ್’ಪಿ ತುಕಡಿಗಳು ಸ್ಥಳಕ್ಕೆ ಆಗಮಿಸಲಿವೆ ಎಂದರು.
ಘಟನೆ ಕುರಿತಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ಬೆಳಗ್ಗೆಯೊಳಗೆ ಎಲ್ಲರನ್ನೂ ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ. ಗಲಭೆ ಹಿಂದೆ ಯಾರಿದ್ದಾರೆ ಎಂದು ಪತ್ತೆ ಮಾಡುತ್ತೇವೆ. ಯಾರನ್ನೂ ಸಹ ಬಿಡುವ ಮಾತೇ ಇಲ್ಲ. ಪಾದರಾಯನಪುರದಲ್ಲಿ ಗಲಭೆ ನಡೆಸಿದ್ದವರ ಹೆಡೆಮುರಿ ಕಟ್ಟಿದ್ದೇವೆ. ಈಗ ಇಲ್ಲಿನ ಪುಂಡರನ್ನೂ ಸಹ ಬಗ್ಗುಬಡಿಯುತ್ತೇವೆ. ಈ ವಿಚಾರದಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದೇವೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post