ಸಾಮಾನ್ಯವಾಗಿ ಈ ದೇಶದ ಈಗಿನ ವಿದ್ಯಮಾನಗಳು ಅದು ಶಬರಿಮಲೆ ಇರಬಹುದು, ಅಯೋಧ್ಯೆಯ ವಿಚಾರ, ಹಿಂದೆ ಕಾವೇರಿ, ಮಹದಾಯಿ, ಟಿಪ್ಪು ಜಯಂತಿ ವಿಚಾರ ಇತ್ಯಾದಿಗಳಲ್ಲಿ ಪ್ರಜೆಗಳು ಪ್ರಧಾನಮಂತ್ರಿ ಮೋದಿಯವರ ಮಧ್ಯಸ್ತಿಕೆ, ಮಧ್ಯ ಪ್ರವೇಶಗಳ ಬಗ್ಗೆ ಯೋಚಿಸಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ಕಾಣುತ್ತದೆ. ಇದು ಸಹಜವೂ ಕೂಡ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರೀಕ್ಷೆಗಳು ತಪ್ಪಲ್ಲ. ಆದರೆ ಪ್ರಧಾನ ಮಂತ್ರಿಗಳಿಗೂ ಒಂದು ವ್ಯಾಪ್ತಿ ಇದೆ. ವ್ಯಾಪ್ತಿ ಮೀರಿದರೆ ಹೆಸರಿಗೆ ಧಕ್ಕೆ ಬರಬಹುದು. ಇವೆಲ್ಲಾ ವಿಚಾರಗಳು ನ್ಯಾಯಾಲಯ, ಸಂಬಂಧ ಪಟ್ಟ ರಾಜ್ಯಗಳಿಗೇ ಸೀಮಿತವಾಗಿರುವುದರಿಂದ ಪ್ರಧಾನಮಂತ್ರಿಗಳು ಮಧ್ಯೆ ಪ್ರವೇಶಿಸುವುದು ತಪ್ಪಾಗುತ್ತದೆ.
ಪ್ರಧಾನ ಮಂತ್ರಿಗಳ ವ್ಯಾಪ್ತಿಯಲ್ಲಿ ಏನೇನಿದೆಯೋ ಆ ಕೆಲಸಗಳನ್ನು ಸ್ವಚ್ಛವಾಗಿ ಮಾಡಿದ್ದಾರೆ, ಮಾಡುತ್ತಿದಾರೆ, ನಿಭಾಯಿಸುತ್ತಲೂ ಇದ್ದಾರೆ. ಅಯೋಧ್ಯೆಯ ವಿಚಾರದಲ್ಲಿ ಸುಗ್ರೀವಾಜ್ಞೆ ತರಬೇಕೆಂಬ ಒತ್ತಾಯವೂ ಇದೆ. ಅವರಿಗೆ ತರುವ ಸಾಮರ್ಥ್ಯವೂ ಇದೆ. ಆದರೆ ತಂದ ಮೇಲೆ ಮತ್ತೆ ಕೋರ್ಟು ತಕರಾರು ಎದ್ದರೆ ಮತ್ತೆ 25 ವರ್ಷ ಕೋರ್ಟು ವ್ಯವಹಾರಕ್ಕೇ ಕಾಲ ಹರಣವಾದೀತು ಎಂಬ ಯೋಚನೆಯಲ್ಲಿ ಮೋದಿಯವರು ಸುಮ್ಮನಿದ್ದಾರೆ. ಆದರೆ, ಸಾಧ್ಯವಿದ್ದಷ್ಟು ದಾಖಲೆಗಳನ್ನು ಅವರು ನೀಡಿದ್ದಾರೆ.
ಹಿಂದೆ ಮಾಧ್ಯಮದ walk n talk ಕಾರ್ಯಕ್ರಮದಲ್ಲಿ ಮೋದಿಯವರು, ‘ದ್ವೇಷ ರಾಜಕಾರಣ ಮಾಡಲ್ಲ. ಆದರೆ ಅಧಿಕಾರಿಗಳಿಗೆ ಅವರವರ ವ್ಯಾಪ್ತಿಯೊಳಗೆ ಕೆಲಸ ಮಾಡಲು ಆದೇಶ ನೀಡಿ, ಮಧ್ಯೆ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರ ಉನ್ನತೋನ್ನತ ಹುದ್ದೆಗಳಲ್ಲಿ congress minded ವ್ಯಕ್ತಿಗಳನ್ನೇ ಹಾಕಿಯಾಗಿದೆ. ಈಗ seniority ಪ್ರಕಾರ ಅವರೇ ಉನ್ನತ ಹುದ್ದೆಗೆ ಬರುತ್ತಿದ್ದಾರೆ ಮತ್ತು ಹಿಂದುತ್ವ ವಿರೋಧಿಗಳಿಗೆ ಸಹಕರಿಸುತ್ತಿದ್ದಾರೆ. ಇದು ನಾಶ ಆಗಬೇಕಾದರೆ ಇನ್ನೂ ಹತ್ತು ವರ್ಷ ಬೇಕು. ಒಟ್ಟಿನಲ್ಲಿ ಜನ ಮರುಳು. ಮಾಡುವ ಕೆಲಸ ಮಾಡುತ್ತಿಲ್ಲ. ಜನ ಹಿತ ಕೆಲಸ ಮಾಡುತ್ತಿದ್ದಾರೆ. ಜನರು ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು.
-ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ
Winter Infections and Antibiotic Misuse: What Is Viral? What Is Dangerous?
Kalpa Media House | Bengaluru | With a rise in cold, cough, fever, and respiratory infections during the winter season,...
Read moreDetails
















