ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಪಟ್ಟಣದ ತುಂಗಾ ಕಾಲೇಜು ಕುವೆಂಪು ವಿವಿ Kuvempu VV ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದು, ಪ್ರಥಮ ಸ್ಥಾನದ ಜೊತೆಗೆ ಒಟ್ಟು 4 ರ‍್ಯಾಂಕ್ ಪಡೆದಿದೆ.
ರ‍್ಯಾಂಕ್ ಜೊತೆಯಲ್ಲಿ ಎಲ್ಲಾ 16 ವಿದ್ಯಾರ್ಥಿಗಳು ಮೊದಲ ಶ್ರೇಣಿಯೊಂದಿಗೆ ಪಾಸಾಗಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ 2021ರ ಎಂಕಾಂ ಅಂತಿಮ ಪದವಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಪ್ರತಿಷ್ಠಿತ ಮೊದಲ ರ‍್ಯಾಂಕ್ ಸಹಿತ ಒಟ್ಟು ನಾಲ್ಕು ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಕೆ.ಎ. ಗಾಯತ್ರಿ ಮೊದಲ ರ‍್ಯಾಂಕ್, ಕೆ. ಸುನೈನ ಮತ್ತು ಜ್ಯೋತಿ ಪ್ರಭು 6ನೆಯ ರ‍್ಯಾಂಕ್ ಹಾಗೂ ಬಿ.ಜೆ. ಅನ್ವಿತಾ 7 ನೆಯ ರ‍್ಯಾಂಕ್ ಪಡೆದು ತಾಲೂಕಿನ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ.
Also read: ಕುವೆಂಪು ವಿವಿಗೆ ಮತ್ತೊಂದು ಪ್ರಶಸ್ತಿಯ ಗರಿ: ಪ್ರೊ.ಬಿ. ತಿಪ್ಪೇಸ್ವಾಮಿಗೆ ವಿಜಿಎಸ್’ಟಿ ಪ್ರಶಸ್ತಿ
ಈ ಮೂಲಕ ತುಂಗಾ ಕಾಲೇಜು ವಿವಿ ಮಟ್ಟದಲ್ಲಿ ಅತಿಹೆಚ್ಚು ಶ್ರೇಣಿ ಪಡೆದ ಖಾಸಗಿ ಅನುದಾನಿತ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ.
ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಪ್ರಾರಂಭಗೊಂಡ ಕಳೆದ ಬ್ಯಾಚುಗಳಲ್ಲಿ ಪ್ರತಿವರ್ಷ ಶೇ.100ರಷ್ಟು ಡಿಸ್ಟಿಂಕ್ಷನ್ ಫಲಿತಾಂಶದೊಂದಿಗೆ ಶ್ರೇಣಿ ಗಳಿಸುತ್ತಾ ಬಂದಿದೆ. ಈವರೆಗೆ 11 ಶ್ರೇಣಿಗಳನ್ನು ಕಾಲೇಜು ತನ್ನದಾಗಿಸಿಕೊಂಡಿದೆ.
ಈ ಸಾಧನೆಗೆ ಪಾತ್ರರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಪರಿಣಾಮಕಾರಿ ಬೋಧನೆಯೊಂದಿಗೆ ಮಾರ್ಗದರ್ಶಿಸಿದ ವಿಭಾಗದ ಸಮರ್ಥ ಪ್ರಾಧ್ಯಾಪಕ ವೃಂದವನ್ನು ಹಾಗೂ ಸಹಕರಿಸಿದ ಪ್ರಾಂಶುಪಾಲರು, ಅಧ್ಯಾಪಕ ಸಿಬ್ಬಂದಿ ವರ್ಗದವರನ್ನು ಹಾಗೂ ಪ್ರೋತ್ಸಾಹಿಸಿದ ಪೋಷಕ ವೃಂದವನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.
(ಮಾಹಿತಿ: ಶ್ರೀಕಾಂತ್ ವಿ. ನಾಯಕ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post