ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ಮಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಗೋಡೆ ಬರಹ ಬರೆದ ಹಿನ್ನಲೆಯಲ್ಲಿ ಎನ್‌ಐಎ ತಂಡ ನಿನ್ನೆ ಪಟ್ಟಣಕ್ಕೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.
ಎನ್‌ಐಎ ಎಸ್ಪಿ ನೇತೃತ್ವದ ತಂಡ ಹೈದರಾಬಾದ್‌ನಿಂದ ಆಗಮಿಸಿದ್ದು, ತೀರ್ಥಹಳ್ಳಿ ಮೀನು ಮಾರುಕಟ್ಟೆ ರಸ್ತೆಯಲ್ಲಿರುವ ಮತಿನ್ ಮತ್ತು ಸಾಜಿಬ್ ಮುಸಾಫಿರ್ ಹುಸೇನ್ ಅವರ ಮನೆಯಲ್ಲಿ ಶೋಧ ನಡೆಸಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂಬ ಗೋಡೆ ಬರಹ ಬರೆದ ಹಿನ್ನಲೆಯಲ್ಲಿ ಉಗ್ರರೊಂದಿಗೆ ನಂಟು ಇರುವ ಶಂಕೆಯ ಆಧಾರದ ಮೇರೆಗೆ ಎನ್‌ಐಎ ತಂಡ ತೀರ್ಥಹಳ್ಳಿಗೆ ಭೇಟಿ ನೀಡಿದೆ ಎನ್ನಲಾಗಿದೆ.
ನಿನ್ನೆ ಬೆಳಗ್ಗೆ 7 ರಿಂದ 11ರ ತನಕ ಶೋಧ ನಡೆಸಿದ 8 ಜನರ ತಂಡ ಬೆಂಗಳೂರಿನ ಹೊರ ವಲಯದ ಸದ್ದುಗುಂಟೆ ಪಾಳ್ಯದ ಮನೆಯೊಂದರಲ್ಲಿ ಅಡಗಿದ್ದ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಮತಿನ್ ಮತ್ತು ಸಾಜಿಬ್ ವರ್ಷದ ಹಿಂದೆಯೂ ಈ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆ ನಂತರ ಮತಿನ್ ಮತ್ತು ಸಾಜಿಬ್ ನಾಪತ್ತೆಯಾಗಿದ್ದರು. ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಎನ್‌ಐಎ ತಂಡ ಭೇಟಿ ನೀಡಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post