ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಕಳೆದ 15 ವರ್ಷದಲ್ಲಿ ಯಾರ ಮನೆಗೂ ಹೋಗದ ಬಿ.ವೈ. ರಾಘವೇಂದ್ರ ಈಗ ಎಲ್ಲಾ ಮನೆಗಳಿಗೂ ಹೋಗುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಲೇವಡಿ ಮಾಡಿದ್ದಾರೆ.
ತಮ್ಮ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹದಿನೈದು ವರ್ಷಗಳಿಂದ ಯಾರ ಮನೆಗೂ ಹೋಗದ ರಾಘವೇಂದ್ರ #B Y Raghavendra ಈಗ ಎಲ್ಲಾಮನೆಗಳಿಗೂ ಹೋಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಲಿಂಗಾಯತರು ನನಗೆ ಕೊಟ್ಟಿರುವ ಬೆಂಬಲ ಬಗ್ಗೆ ಲಿಂಗಾಯತರ ಮನೆಗಳಿಗೆ ತೆರಳಿ ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆ ನಂತರ ರಾಘವೇಂದ್ರ ಮನೆಗೆ ಹೋಗುತ್ತಾರೆ ಈಶ್ವರಪ್ಪ ಗೆದ್ದು ಮೋದಿ ಬಳಿ ಹೋಗುತ್ತಾರೆ ಎಂದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ ಎಂದರು.

ಪ್ರತಿ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ #Yadiyurappa ಅರವತ್ತು ಸಾವಿರ ಲೀಡ್ ಪಡೆಯುತ್ತಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ನೂರ ಐವತ್ತು ಕೋಟಿಗಳಷ್ಟು ಹಣ ಸುರಿದು ಕೇವಲ ಹತ್ತುಸಾವಿರ ಲೀಡ್ ಪಡೆದಿದ್ದಾರೆ. ಇದು ಶಿಕಾರಿಪುರದ ಜನರ ಆಕ್ರೋಶ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ನೋಟು ಈಶ್ವರಪ್ಪಗೆ ವೋಟು ಎಂದು ಜನ ತೀರ್ಮಾನಿಸಿದ್ದಾರೆ ಎಂದರು.

Also read: ಗಮನಿಸಿ! ಮೇ 7ರಂದು ಸಿಬ್ಬಂದಿಗಳಿಗೆ ಸಂಬಳ ಸಹಿತ ರಜೆ ನೀಡಲೇಬೇಕು | ತಪ್ಪಿದಲ್ಲಿ ಕ್ರಮ ನಿಶ್ಚಿತ
ಗೀತಾ ಶಿವರಾಜಕುಮಾರ್’ಗೇ ಟಕ್ಕರ್
ಗೀತಾ ಶಿವರಾಜ್ ಕುಮಾರ್ #Geetha Shivarajkumar ಪರ ಪ್ರಚಾರ ಮಾಡಲು ಸಿನಿಮಾ ನಟರು ಬರುತ್ತಾರೆ, ರಾಘವೇಂದ್ರ ಪರ ಪ್ರಚಾರ ಮಾಡಲು ರಾಷ್ಟ್ರ ನಾಯಕರು ಬರುತ್ತಾರೆ. ಆದರೆ ನನ್ನ ಪರ ಪ್ರಚಾರ ಮಾಡಲು ಶ್ರೀಸಾಮಾನ್ಯರು ಬರುತ್ತಾರೆ ಅವರೇ ನನ್ನ ಸ್ಟಾರ್ ಕ್ಯಾಂಪೇನರ್ ಎಂದರು.

ಪತ್ರ ಬರೆದಿದ್ದೇನೆ
ನೇಹಾ ನನ್ನ ಮಗಳ ಸಮಾನ ನೇಹಾ ಪೋಷಕರ ಕಣ್ಣೀರು ಹೊರೆಸಲು ಹುಬ್ಬಳ್ಳಿಗೆ ತೆರಳಿದ್ದೆ. ನೇಹಾ ಪ್ರಕರಣದಲ್ಲಿ ರಾಜಕೀಯ ಮಾಡವುದು ತಪ್ಪು. ಕಾಲೇಜಿಗೆ ನುಗ್ಗಿ ನೇಹಾ ಕೊಲೆ ಮಾಡಲಾಗಿದೆ. ಈ ಪ್ರಕರಣ ಬಗ್ಗೆ ಮುಖ್ಯಮಂತ್ರಿಗಳು ಲವ್ ಜಿಹಾದ್ ಅಲ್ಲ ಎಂದು ಹೇಳಿದ್ದಾರೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಹಾಗೂ ಯಡಿಯೂರಪ್ಪ ಕುಟುಂಬದಿAದ ನಡೆಯುತ್ತಿರುವ ಹಿಂದೂಗಳ ಮೇಲಿನ ದಬ್ಬಾಳಿಕೆಯನ್ನು ತಡೆದು ಹಿಂದುತ್ವದ ಉಳಿವಿಗಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ನಿಮ್ಮನ್ನು ರಾಘವೇಂದ್ರ ನೋಡಿದ್ದರೆ ನಾಳೆಯೇ ನಿಮ್ಮ ಮನೆಗೆ ಬರುತ್ತಿದ್ದರು ಅನಿಸುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post