ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಮಘೆ ಮಳೆಯ ಅಬ್ಬರ ಹೆಚ್ಚಾಗಿದ್ದು ತುಂಗಾ ನದಿ ಮೈದುಂಬಿ ಹರಿಯುತ್ತಿದೆ ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗುವ ಹಂತಕ್ಕೆ ತಲುಪಿದ್ದು ಮಂಗಳವಾರ ಶಾಸಕರು, ಮಾಜಿ ಗೃಹಸಚಿವರು ಆದ ಆರಗ ಜ್ಞಾನೇಂದ್ರ, ಆರ್ ಎಂ ಮಂಜುನಾಥ್ ಗೌಡ ಹಾಗೂ ತಹಸೀಲ್ದಾರ್ ರಂಜಿತ್ ತುಂಗಾ ನದಿಗೆ #Tunga River ಭಾಗಿನ ಅರ್ಪಿಸಿದರು.
ಬುಧವಾರ ತುಂಗಾ ನದಿಯ ದಡದಲ್ಲಿ ತಾಲೂಕು ಆಡಳಿತದ ವತಿಯಿಂದ ಹಾಗೂ ಶಾಸಕರು ಬಾಗಿನ ಅರ್ಪಿಸಿದರು. ಶಾಂತ ರೀತಿಯಲ್ಲಿ ತುಂಗೆಯು ಹರಿಯಲಿ, ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಿ ಎಂದು ಬೇಡಿಕೆಯನ್ನಿಟ್ಟು ತೀರ್ಥಹಳ್ಳಿಯ ತುಂಗಾ ನದಿಗೆ ಭಕ್ತಿ ಭಾವದಿಂದ ಬಾಗಿನ ಸಮರ್ಪಿಸಿದ್ದೇನೆ. ರಾಮೇಶ್ವರನ ಅನುಗ್ರಹದಿಂದ ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಇಲ್ಲಿಯವರೆಗೆ ತೀರ್ಥಹಳ್ಳಿಯಲ್ಲಿ ಎಲ್ಲೂ ಅಪಾಯ ಆಗಿಲ್ಲ. ಎಂದರು.
ಆರ್ ಎಂ ಎಂ ಮಾತನಾಡಿ ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಇದರಿಂದ ರೈತರಿಗೆ ಒಳ್ಳೆಯದಾಗಲಿ, ಈ ಬಾರಿ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ತಹಸೀಲ್ದಾರ್ ರಂಜಿತ್ ಮಾತನಾಡಿ ಮೊದಲ ಬಾರಿ ತುಂಗಾ ನದಿಗೆ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಸುದ್ದಿ ಮಾಧ್ಯಮಗಳಲ್ಲಿ ನೋಡುತ್ತಿದೆ. ಆದರೆ ಈ ಬಾರಿ ಬಾಗಿನ ಅರ್ಪಣೆ ಮಾಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದರು
ಈ ಸಂದರ್ಭದಲ್ಲಿ ಪ. ಪಂ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಗೀತಾ ರಮೇಶ್, ಜ್ಯೋತಿ ಮೋಹನ್, ಮಂಜುಳಾ ನಾಗೇಂದ್ರ, ಇ ಓ ಶೈಲಾ, ಸೇರಿ ಹಲವರು ಉಪಸ್ಥಿತರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post