ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ನಾಯಿ ಕರೆದುಕೊಂಡು ವಾಕಿಂಗ್ ಹೋಗಿದ್ದ ವೇಳೆ ಆಕಸ್ಮಿಕವಾಗಿ ನವ ವಿವಾಹಿತೆಯೊಬ್ಬಳು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕು ಕೈಮರದಲ್ಲಿ ನಡೆದಿದೆ.
ನಿಶ್ಮಿತಾ( 26) ಮೃತ ವಿವಾಹಿತೆ. ಕೈಮರದ ನಾಗಪ್ಪ ಗೌಡ ಅವರ ಪುತ್ರ ಮಂಜುನಾಥ್ ಅವರ ಪತ್ನಿಯಾಗಿದ್ದು, ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಿಶ್ಮಿತಾ ಶನಿವಾರ ಬೆಳಿಗ್ಗೆ ನಾಯಿ ಕರೆದುಕೊಂಡು ವಾಯು ವಿಹಾರಕ್ಕೆ ಹೋಗಿದ್ದಾಳೆ.
ಈ ವೇಳೆ ಕರೆದಂಡೆ ಮೇಲೆ ಹೋಗುವಾಗ ನಾಯಿ ಚೈನ್ ಎಳೆದು ಓಡಿದೆ. ಆಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾಳೆ. ಮನೆಯವರು ಸಂಜೆವರೆಗೆ ಹುಡುಕಿದರೂ ಸಿಕ್ಕಿರಲಿಲ್ಲ. ಭಾನುವಾರ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post