ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ತೀರ್ಥಹಳ್ಳಿ ರಸ್ತೆಯ ಮಳವಳ್ಳಿ ಕ್ರಾಸ್ ಬಳಿಯಲ್ಲಿ ನಡೆದಿದೆ.
ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗ್ಗಲಿಜೆಡ್ಡು ಗ್ರಾಮದ ಆದಿತ್ಯ (19) ಮತ್ತು ಯಶವಂತ್ (20) ಗಂಭೀರ ಗಾಯಗೊಂಡಿದ್ದಾರೆ.
Also read: ದುಬೈನಲ್ಲಿ ಭೀಕರ ಅಪಘಾತ | ಬೆಳಗಾವಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ
ತೀರ್ಥಹಳ್ಳಿ ರಸ್ತೆಯ ಮಳವಳ್ಳಿ ಕ್ರಾಸ್ ನಲ್ಲಿ ಬೈಕ್ ಹಾಗೂ ಮಾರುತಿ ಓಮಿನಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಬೈಕ್ ನಲ್ಲಿದ್ದ ಆದಿತ್ಯ ಎಂಬಾತನ ತಲೆಗೆ ತೀವ್ರವಾದ ಪೆಟ್ಟಾಗಿದೆ. ಮತ್ತು ಯಶವಂತ್ ಎಂಬಾತನ ಕೈ ಮುರಿತವಾಗಿದೆ. ಕಾರಿನಲ್ಲಿದ್ದ ಕಲ್ಲೂರು ಗ್ರಾಮದ ಅಭಿಷೇಕ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳಿಗೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















