ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಅತ್ಯಂತ ಜನಪ್ರಿಯವಾದ ಎಳ್ಳಮವಾಸ್ಯೆ ಜಾತ್ರೆಗೆ ತೀರ್ಥಹಳ್ಳಿ ಸಜ್ಜಾಗುತ್ತಿದೆ.
ಜನವರಿ 5ರಿಂದ 7ರವರೆಗೂ ತೀರ್ಥಹಳ್ಳಿ ರಾಮೇಶ್ವರ ದೇವರಿಗೆ ಎಳ್ಳಮಾವಾಸ್ಯೆ ಜಾತ್ರೆ ನಡೆಯಲಿದೆ.
ಜ.3 ರ ಪ್ರಾತಃಕಾಲ ಗಣಪತಿ ಪೂಜಾ ಪೂರ್ವಕ ಪುಣ್ಯಾಃಶತ ರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಂಜೆ ರಂಗಪೂಜೆ, ಅಂಕುರಾಹೋಣ, ಭೇರಿತಾಡನ ಕೌತುಕ ಬಂಧನ ಬಲಿ ಉತ್ಸವಗಳು ಜರುಗಲಿದೆ.
ಜ. 4 ಪ್ರಾತಃಕಾಲ ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಮಧ್ಯಾಹ್ನ 3 ಗಂಟೆಗೆ ಪುರೋತ್ಸವ, ಸಂಜೆ ರಂಗಪೂಜೆ, ಬಲಿ, ಪೂಜಾ ಉತ್ಸವಗಳು ನಡೆಯಲಿವೆ.
ಜ.5 ರಂದು ಬೆಳಿಗ್ಗೆ ಶ್ರೀ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ಅಧಿವಾಸ ಹೋಮ ಕಲಶಾಭಿಷೇಕ, ಮಹಾಪೂಜೆ ಬಲಿ, ಉತ್ಸವ, ಸಂಜೆ ರಂಗಪೂಜೆ ರಾತ್ರಿ ಬಲಿ ಉತ್ಸವ.
ಜ.6 ರಂದು ಬೆಳಿಗ್ಗೆ ಅಧಿವಾಸ ಹೋಮ, ಕಲಶಾಭಿಷೇಕ ಮಹಾಪೂಜೆ, ಉತ್ಸವ, ಬಲಿ ಶುಭ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಮನ್ಮಹಾರಥೋರೋಹಣ, ರಾತ್ರಿ ಭೂತ ಬಲಿ, ಶಯನೋತ್ಸವ ಜರುಗಲಿದೆ.
ಜ. 7 ರಂದು ಬೆಳಿಗ್ಗೆ ಪ್ರಭೋದೋತ್ಸವ, ಚೂರ್ಣೋತ್ಸವ, ಅಧಿವಾಸ ಹೋಮ ಕಲಶಾಭಿಷೇಕ, ಮಹಾಪೂಜೆ, ಬಲಿ, ಅವಭೃತಸ್ನಾನ, ಸಾಯಂಕಾಲ ಉತ್ಸವ, ರಾತ್ರಿ 7 ಕ್ಕೆ ಸಾರ್ವಜನಿಕ ತೆಪೋತ್ಸವ, ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ.
ಜ. 8 ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ಪಂಚವಿಂಶತಿ, ಕಲಶಾಭಿಷೇಕ, ಮಹಾಪೂಜೆ ರಾತ್ರಿ ರಂಗಪೂಜೆ, ದೀಪೋತ್ಸವವು ನಡೆಯಲಿದೆ.
ಜ.9 ರಿಂದ ಜ. 13 ರವರೆಗೆ ರಾತ್ರಿ 7 ಗಂಟೆಗೆ ಸೇವಾರ್ಥಿಗಳಿಂದ ರಂಗಪೂಜೆ ಜರುಗಲಿದೆ. ಜ.14 ರಂದು ಮಕರ ಸಂಕ್ರಾಂತಿ ರಥೋತ್ಸವ ಸಮಿತಿಯವರಿಂದ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ.
ಎಳ್ಳಮಾವಾಸ್ಯೆ ಜಾತ್ರೆಯ ಈ ಮೂರು ದಿನಗಳ ಕಾಲ ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರ ವೃಂದದಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು(ಅನ್ನ ಸಂತರ್ಪಣೆಗೆ ಅಕ್ಕಿ, ತರಕಾರಿ ಮತ್ತು ದವಸ ಧಾನ್ಯಗಳನ್ನು (ಹಸಿರು ಕಾಣಿಕೆ) ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಸ್ವೀಕರಿಸಲಾಗುವುದು.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಪಾಲ್ಗೊಂಡು ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ರಾಮೇಶ್ವರ ದೇವಸ್ಥಾನದ ಪ್ರಧಾನ ತಂತ್ರಿ ವೇ|| ಲಕ್ಷ್ಮೀಶ ತಂತ್ರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ರಾಜಶೇಖರ ಭಟ್ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವಿನಂತಿಸಿದೆ.
Discussion about this post