ಉರಗತಜ್ಞರ ಮನೆಗೆ ಬಂದ ವಿಷಕಾರಿ ಹಾವು!
ಇದು ಕಲರ್ ಫುಲ್ ಅಪರೂಪದ ಹಾವು!
ಹೊಸನಗರ: ಹೌದು ವಿಷಕಾರಿ ಹಾವುಗಳಲ್ಲಿ ಒಂದಾದ ಈ ಹಾವು ಕಂಡು ಬಂದಿದ್ದು ಉರಗತಜ್ಞರೊಬ್ಬರ ಮನೆಯಂಗಳದಲ್ಲಿ.
ಹೊಸನಗರ ತಾಲೂಕು ನಗರದ ಉರಗತಜ್ಞ ನಾರಾಯಣ ಕಾಮತ್ ಮನೆ ಆವರಣದಲ್ಲಿ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ಅವರ ಪತ್ನಿ ತೃಪ್ತಿ ಕಾಮತ್ ಪತಿಗೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ನಾರಾಯಣ ಕಾಮತ್ ಹಾವನ್ನು ಸೇಫಾಗಿ ಹಿಡಿಯುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
ಇದು ಬಹು ಅಪರೂಪದ ಕೋರಲ್ ಸ್ನೇಕ್!
ಈ ಬಗ್ಗೆ ಮಾಹಿತಿ ನೀಡಿದ ನಾರಾಯಣ ಕಾಮತ್, ಇದು ಅಪರೂಪದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದಾದ ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಹಪ್ಪಟೆ ಹಾವು ಎಂದೇ ಪ್ರಚಲಿತ.
ಇದು ಅತ್ಯಂತ ವಿಷಕಾರಿ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚೇ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪುಬಣ್ಣ ದಲ್ಲಿದ್ದು ಗಮನ ಸೆಳೆಯುತ್ತವೆ ಎನ್ನುತ್ತಾರೆ.
Discussion about this post