ಬೆಂಗಳೂರು: ಮೈಸೂರು ದಸರಾ ವೇದಿಕೆಯನ್ನು ಪ್ರೇಮ ನಿವೇದನೆಗೆ ಬಳಸಿಕೊಂಡ ನಟ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿರುದ್ಧ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮೈಸೂರು ದಸರಾದಲ್ಲಿ ಪ್ರಪೋಸ್ ಮಾಡಿ ರೋಮ್ಯಾನ್ಸ್ ಮಾಡಿ ಎಂಗೇಜ್’ಮೆಂಟ್ ಆಗೋಕ್ ಅದೇನೋ ದಸರಾನ ಇಲ್ಲ ಕನ್ವೆನ್ಷನ್ ಹಾಲಾ ಚಂದನ್ ಶೆಟ್ಟಿ-ನಿವೇದಿತಾ ಗೌಡ_ ನಿಮ್ಮಿಬ್ಬರದು ಮೀತಿ ಮೀರುತ್ತಿದೆ. ಪಬ್ಲಿಕ್’ನಲ್ಲಿ ಹೆಂಗ್ ಇರಬೇಕು ಹಂಗೆ ಇರೋ ನೀವು ಮಾನ ಮಾರ್ಯಾದೆ ಯಾವುದು ಇಲ್ಲದವರು ನೀವು ಹಿಂಗೆ ಮಾಡಿದರೆ ಹೊರದೇಶಕ್ಕೆ ಓಡಿಸುತ್ತಿನಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು ದಸರಾದಲ್ಲಿ ಪ್ರಪೋಸ್ ಮಾಡಿ ರೋಮ್ಯಾನ್ಸ್ ಮಾಡಿ ಎಂಗೇಜ್ ಮೆಂಟ್ ಆಗೋಕ್ ಅದೇನೋ ದಸರಾನ ಇಲ್ಲ ಕನ್ವೆನ್ಷನ್ ಹಾಲಾ @chandanspshetty @NivedithaGowda_ ನಿಮ್ಮಿಬ್ಬರದು ಮೀತಿ ಮೀರುತ್ತಿದೆ ಪಬ್ಲಿಕ್ ನಲ್ಲಿ ಹೆಂಗ್ ಇರಬೇಕು ಹಂಗೆ ಇರೋ ನೀವು ಮಾನ ಮಾರ್ಯಾದೆ ಯಾವುದು ಇಲ್ಲದವರು ನೀವು ಹಿಂಗೆ ಮಾಡಿದರೆ ಹೊರದೇಶಕ್ಕೆ ಓಡಿಸುತ್ತಿನಿ 👹👿
— KirikHuduga Keerthan (@GajaKeerthan) October 5, 2019
ಮೈಸೂರಿನ ಯುವದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
Discussion about this post