ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡುವ ಸಲುವಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದರು. ಇದು ದೇಶವಾಸಿಗಳಲ್ಲಿ ಹೊಸ ಮನಃಸ್ಥಿತಿಗೇ ನಾಂದಿಯಾಗಿ, ಸ್ವಚ್ಛ ಭಾರತ ಅಭಿಯಾನವನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಅಚ್ಚರಿಯಿಂದ ನೋಡಿದವು.
ಇಂತಹ ಅಭಿಯಾನಕ್ಕೆ ಹೊಸ ರೂಪ ನೀಡಿರುವ ಪ್ರಧಾನಿ ಮೋದಿ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಚಾಲನೆ ನೀಡಿ, ಗಾಂಧಿ ಜಯಂತಿಯವರೆಗೂ ನಿರಂತರವಾಗಿ ಮುಂದುವರೆಸುವಂತೆ ಕರೆ ನೀಡಿದ್ದು, ಇದಕ್ಕೂ ಸಹ ದೇಶವಾಸಿಗಳು ಉತ್ತಮ ಪ್ರತಿಕ್ರಿಯೆ ನೀಡಿರುವುದು ಸಂತಸ.
ಪ್ರಧಾನಿಯವರ ಇಂತಹ ಕನಸಿನ ಯೋಜನೆಯ ಸಾಕಾರಕ್ಕೆ ಉಡುಪಿ ಜಿಲ್ಲೆ ಕಾಪುವಿನಲ್ಲಿ ಒಂದು ತಂಡ ಅವಿರತವಾಗಿ ಶ್ರಮಿಸುತ್ತಿದೆ.
ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ವಿದ್ಯಾ ಡಿ. ಹಾಗೂ ಸ್ವಯಂ ಸೇವಕರು ಇಂತಹ ಒಂದು ಸಾಮಾಜಿಕ ಕಳಕಳಿಯ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.
ಇಂತಹ ಒಂದು ಸಾಮಾಜಿಕ ಕಳಕಳಿ ಹಾಗೂ ದೇಶ ಸೇವೆಯ ಭಾಗವಾಗಿ ರೇಂಜರ್ಸ್ ಮತ್ತು ರೋವರ್ಸ್ ಘಟಕ, ಯೂತ್ ರೆಡ್‌ಕ್ರಾಸ್ ಘಟಕ ಹಾಗೂ ಕಾಪು ಜೆಸಿಐ ಸಹಯೋಗದಲ್ಲಿ ಕಾಪು ಪುರಸಭೆಯ ಸಹಕಾರದಿಂದ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಸ್ವಚ್ಛತಾ ಜಾಥಾವನ್ನು ಕೆಲವು ದಿನಗಳ ಹಿಂದೆ ನಡೆಸಿತು.
ಈ ವೇಳೆ, ಅಂದು ಕಾಲೇಜಿನಿಂದ ಕಾಪು ಪೇಟೆಯ ತನಕ ನಡೆದ ಜಾಥಾದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯ ಕುರಿತ ಬೀದಿ ನಾಟಕ ಪ್ರದರ್ಶನ ಮಾಡಿದರು.
ಸ್ವಚ್ಛತೆಯ ಕುರಿತಾಗಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕ ಜನಮೆಚ್ಚುಗೆ ಪಡೆದಿದ್ದು ಮಾತ್ರವಲ್ಲದೇ, ಜಾಗೃತಿ ಮೂಡಿಸುವಲ್ಲಿಯೂ ಸಹ ಯಶಸ್ವಿಯಾಗಿತ್ತು.
ಈ ಅಭಿಯಾನದ ಮುಂದುವರೆದ ಭಾಗವಾಗಿ ಕೆಲವು ದಿನಗಳ ನಂತರ ಸ್ವಚ್ಛತಾ ಪ್ರಾತ್ಯಕ್ಷಿಕೆ ಪ್ರಚುರಪಡಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ತಮ್ಮ ಪರಿಸರವನ್ನು ಸುಂದರವಾಗಿಸಿಕೊಳ್ಳಲು ಯೋಜನೆ ರೂಪಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಇದೇ ತಂಡದಿಂದ ಅಭಿಯಾನದ ಭಾಗವಾಗಿ, ಅತ್ಯಂತ ಪ್ರಮುಖವಾಗಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾವನ್ನು ಕಣ್ಣಿಗೆ ಕಪ್ಪು ಪಟ್ಟಿ ಬೈಕ್ ಚಲಾಯಿಸುವ ಮೂಲಕ ಆಚರಿಸಿದ್ದು ಶ್ಲಾಘನೀಯ ಕಾರ್ಯ.
ಮಾದಕ ದ್ರವ್ಯ ವ್ಯಸನಿಗಳು ಸ್ವತಃ ತಾವು ಸಹಿತ ತಮ್ಮ ಕುಟುಂಬ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಾರೆ. ಕ್ಷಣಕಾಲದ ಸುಖಕ್ಕಾಗಿ ಸಹವಸ ದೋಷದಿಂದ ನಿಮ್ಮ ಜೀವನಕ್ಕೇ ಕುತ್ತ ಬರುವಂತಹ ಅಪಾಯಕಾರಿಉಯಾದ ಡ್ರಗ್‌ಸ್ನಿಂದ ದೂರವಿರಿ. ಗಂಡು ಹೆಣ್ಣು ಎಂಬ ಎಗ್ಗಿಲ್ಲದೇ ವ್ಯಾಪಕವಾಗಿ ಸಮಾಜಿಕ ಪಿಡುಗಿನಂತೆ ಹರಡಿರುವ ಮಾದಕ ದ್ರವ್ಯದ ಜಾಲಕ್ಕೆ ಯುವ ಜನತೆ ಬಲಿ ಬೀಳಬಾರದು ಎಂಬ ಸಂದೇಶವನ್ನು ನೀಡಿದ್ದು, ಈ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ತಂಡ ಬಹಳಷ್ಟು ಯಶಸ್ವಿಯಾಗಿದೆ ಎನ್ನಬಹುದು.
ಇನ್ನು, ಈ ತಂಡ ಕೇವಲ ಸ್ವಚ್ಛ ಭಾರತ ಅಭಿಯಾನಕ್ಕೆ ಮಾತ್ರ ಶ್ರಮಿಸದೇ, ಇದಕ್ಕೆ ಪೂರಕವಾಗಿ ಪರಿಸರ ರಕ್ಷಣೆಯ ಭಾಗವಾಗಿ ಗಿಡ ನೆಡುವುದು, ಹೆಚ್ಚು ಹೆಚ್ಚು ಗಿಡ ನೆಡುವಂತೆ ಜಾಗೃತಿ ಮೂಡಿಸುವುದು, ಅರಣ್ಯೀಕರಣದ ಕುರಿತಾಗಿ ತಿಳುವಳಿಗೆ ಮೂಡಿಸುವ ಕಾರ್ಯವನ್ನೂ ಸಹ ಈ ಮಾಡಲಾಗುತ್ತಿದೆ.
ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಈ ದೇಶ ಸೇವೆಯ ಕಾರ್ಯಕ್ಕೆ ಸ್ನಾತಕೋತ್ತರ ಅಧ್ಯಯನ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ ರೇಂಜರ್‌ಸ್, ಉಡುಪಿ ಜಿಲ್ಲಾ ಪೊಲೀಸ್, ಪಾಲು ಪೊಲೀಸ್ ಠಾಣೆ, ಕಾಪು ಜೆಸಿಐ ಸಂಯುಕ್ತ ಸಹಕಾರ ನೀಡುತ್ತಾ ಬಂದಿರುವುದೂ ಸಹ ಮಾದರಿಯಾಗಿದೆ.
ಪ್ರಧಾನಿಯವರು ಕರೆ ನೀಡಿರುವ ಸ್ವಚ್ಛತಾ ಹಿ ಸೇವಾ ಅಭಿಯಾನದ ಯಶಸ್ಸಿಗೆ ಇಡಿಯ ದೇಶದ ಪ್ರತಿ ನಿವಾಸಿಗಳೂ ಸಹ ಕೈಜೋಡಿಸುವುದು ಅನಿವಾರ್ಯವಾಗಿದೆ. ಪ್ರಮುಖವಾಗಿ ಯುವ ಸಮೂಹ ಇದಕ್ಕೆ ಕೈಜೋಡಿಸುವ ಜೊತೆಯಲ್ಲಿ ತಮ್ಮ ಕುಟುಂಬ, ಸ್ನೇಹಿತ ವರ್ಗ, ಸುತ್ತಮುತ್ತಲ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಇಂತಹ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಪ್ರಧಾನಿಯವರ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಕಾಪುವಿನ ಈ ತಂಡದ ಪ್ರಯತ್ನ ಶ್ಲಾಘನೀಯವಾದುದು ಹಾಗೂ ಮಾದರಿಯಾದುದು.














Discussion about this post