ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಆರ್ಥಿಕವಾಗಿ ಸಬಲರಾದವರು ಕೊರೋನ ಲಾಕ್ ಡೌನ್ ಯಿರುವ ಇಂತಹ ಸಂಕಷ್ಟಕಾಲದಲ್ಲಿ ಬಡವರಿಗೆ ಕೈಲಾದ ನೆರವನ್ನು ನೀಡಬೇಕು ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳುದರು.
ಅವರು ನ್ಯೂಟೌನ್ ತಾಲೂಕು ಛಲವಾದಿಗಳ(ಪಜಾ) ಸಮಾಜದಲ್ಲಿ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
ನಾಗರಿಕರ ಅಗತ್ಯಕ್ಕೆ ಸರ್ಕಾರ ಸ್ಪಂದಿಸಿ ಕೆಲಸ ಮಾಡುತ್ತಿದೆಯಾದರೂ, ಎಲ್ಲವನ್ನು ಸರ್ಕಾರ ಮಾಡಬೇಕು ಎಂದು ಕೈಕಟ್ಟಿಕುಳಿತುಕೊಳ್ಳದೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಬಡಜನರ ನೆರವಿಗೆ ಸ್ವಯಂ ಪ್ರೇರಿತರಾಗಿ ಸಹಾಯ ಮಾಡುವುದು ನಿಜವಾದ ಮಾನವೀಯ ಗುಣ. ಎಷ್ಟು ಸಾಧ್ಯವೋ ಅಷ್ಟು ನೆರವನ್ನು ನೀಡುವ ಮೂಲಕ ಪರಿಸ್ಥಿತಿಯನ್ನು ಎಲ್ಲರೂ ಎದುರಿಸಲು ಸಜ್ಜಾಗಬೇಕು ಎಂದರು.
ಲಾಕ್ ಡೌನ್‌ನಿಂದಾಗಿ ಸುಮಾರು 40 ದಿನಗಳಿಂದ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳನ್ನು ತೆರೆಯದಿದ್ದರೆ ಮುಂದಿನ ದಿನಗಳಲ್ಲಿ ಮದ್ಯವ್ಯಸನಿಗಳು ಅದಕ್ಕೆ ಹೊಂದಿಕೊಂಡು ಬದುಕುತ್ತಿದ್ದರು. ಮದ್ಯಪಾನದ ಪಿಡುಗು ಶಾಶ್ವತವಾಗಿ ದೂರವಾಗುವ ಸಾಧ್ಯತೆಯಿತ್ತು. ರಾಜ್ಯದಲ್ಲಿ ತುರ್ತಾಗಿ ಮದ್ಯದಂಗಡಿಗಳನ್ನು ತೆರೆಯುವ ಅಗತ್ಯವಿರಲಿಲ್ಲ. ಆದರೆ ರಾಜ್ಯ ಸರ್ಕಾರ ಆರ್ಥಿಕತೆ ಎಂಬ ಹೆಸರಿನಲ್ಲಿ ಹಣದ ಆಸೆಗಾಗಿ ಮದ್ಯದಂಗಡಿಗಳನ್ನು ತೆರಯಲು ಅನುಮತಿ ನೀಡುವ ಮೂಲಕ ಬಡಜನರ ಬದುಕನ್ನು ಬಲಿ ಕೊಡಲು ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮುಖಂಡರಾದ ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಬದರಿನಾರಾಯಣ, ಎಚ್.ಎಂ ಮಹಾದೇವಯ್ಯ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೋಕೇಶ್ ವಂದಿಸಿದರು.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post